`AAPಯ ನಾಯಕರು ಉಪನಾಯಕ ನಾಪತ್ತೆಯಾಗಿದ್ದಾರೆ'; ತನ್ನದೇ ಪಕ್ಷದ ಲೋಪ ಉಲ್ಲೇಖಿಸಿ ಗಮನ ಸೆಳೆದ Raghav Chadha

 Raghav Chadha
Raghav Chadha
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 2ರಂದು ಉಪನಾಯಕನ ಸ್ಥಾನದಿಂದ ರಾಘವ್​ ಚಡ್ಡಾ ವಜಾ
  • ರಾಜ್ಯಸಭೆಯಲ್ಲಿ ನೂತನ ಉಪನಾಯಕ ಗೈರಾಗಿದ್ದನ್ನು ಉಲ್ಲೇಖಿಸಿದ ರಾಘವ್​ ಚಡ್ಡಾ
  • ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಅಧ್ಯಕ್ಷರಿಗೆ ಹೇಳಿಕೆ
ನವದೆಹಲಿ: ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾದ  ರಾಘವ್​ ಚಡ್ಡಾರನ್ನು ಕೆಲವು ದಿನಗಳ ಹಿಂದೆAam Aadmi Party (ಎಎಪಿ) ಉಪನಾಯಕ ಸ್ಥಾನದಿಂದ ಕೆಳಗಿಳಿಸಿತ್ತು. ಆ ಬೆನ್ನಲ್ಲೇ ಅವರಿಗೆ  ನೀಡಿದ್ದ  Z+ ಭದ್ರತೆಯನ್ನು  ಪಂಜಾಬ್​ ಸರ್ಕಾರ ಹಿಂತೆಗೆದುಕೊಂಡಿತ್ತು. ಈ  ಮುನಿಸುಗಳ ಮಧ್ಯೆ ಚಡ್ಡಾರವರು ಲೋಕಸಭೆಯಲ್ಲಿ  ತಮ್ಮದೇ ಪಕ್ಷದ ನಾಯಕರ ಅನುಪಸ್ಥಿತಿಯನ್ನು ಪ್ರಸ್ತಾಪಿಸಿ, ಗಮನ ಸೆಳೆದರು. 
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಬಿಸಿ ಚರ್ಚೆಗಳು ಜೋರಾಗಿವೆ. ಲೋಕಸಭೆಯ ವಿಪಕ್ಷ ನಾಯಕ ಕೇಂದ್ರ ಸರ್ಕಾರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದು ಮಹಿಳಾ ಮೀಸಲಾತಿಯಲ್ಲ. ದೇಶದ ಚುನಾವಣಾ ರೀತಿಯನ್ನೇ ಬದಲಿಸುತ್ತದೆ. ಇನ್ನು  2023ರಲ್ಲೇ ಸದನ ಈ ಮಸೂದೆಯನ್ನು ಅಂಗೀಕರಿಸಿದೆ. ಇಲ್ಲಿಯವರೆಗೂ ಯಾಕೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು. ಈ ಮಧ್ಯೆ ರಾಜ್ಯಸಭೆಯಲ್ಲಿ  ಸಂಸದ ರಾಘವ್​ ಚಡ್ಡಾ ಅವರು ಉಪನಾಯಕನ ಅನುಪಸ್ಥಿತಿ ಬಗ್ಗೆ  ಮಾತನಾಡಿದರು.

ನನ್ನ ಪಕ್ಷದ ನಾಯಕರಿಲ್ಲ

ನನ್ನ ಪಕ್ಷದ(Aam Aadmi Party) ನಾಯಕರು ಸದನದಲ್ಲಿ ಇಲ್ಲವೇ ಇಲ್ಲ(ಸಂಜಯ್​ ಸಿಂಗ್​ ಇಲ್ಲದಿರುವುದನ್ನು ಉಲ್ಲೇಖಿಸಿ ಹೇಳಿದ ಅವರು). ಇತ್ತೀಚೆಗೆ ನೂತನವಾಗಿ ಪಕ್ಷಕ್ಕೆ ಆಯ್ಕೆಯಾದ ಉಪನಾಯಕನೂ(ಅಶೋಕ್​ ಮಿತ್ತಲ್) ಇಲ್ಲ.  ನನ್ನನ್ನು ಇತ್ತೀಚೆಗೆ ಉಪನಾಯಕನ ಸ್ಥಾನದಿಂದ ವಜಾಗೊಳಿಸಿದರು. ಆದರೆ, ನಾನು ಹಾಜರಾಗಿದ್ದೇನೆ. ಹೀಗಾಗಿ ನನಗೆ ಮಾತನಾಡಲು ಅವಖಾಶ ಕೊಟ್ಟಿದ್ದಾಗಿ ಧನ್ಯವಾದ ಎಂದು ಅವರು ಹೇಳಿದರು. 

ಉಪನಾಯಕನ ಸ್ಥಾನದಿಂದ ವಜಾ

ಎಪ್ರಿಲ್​ 2ರಂದು ರಾಘವ್​ ಚಡ್ಡಾರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ರಾಜ್ಯಸಭೆಯಲ್ಲಿ ಅವರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡದಂತೆ ಅಧ್ಯಕ್ಷರಿಗೆ ಎಎಪಿ ಹೈಕಮಾಂಡ್​ ಪತ್ರ ಬರೆದಿತ್ತು. ಅರವಿಂದ ಕೇಜ್ರಿವಾಲ್​ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಚಡ್ಡಾ ಅವರು ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರಲಿಲ್ಲ. ಜೊತೆಗೆ ಅರವಿಂದ್ ಕಜ್ರೀವಾಲ್​ ಅವರಿಗೆ ಕ್ಲೀನ್​ ಚಿಟ್ ನೀಡಿದಾಗಲೂ ಆ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪ ಮಾಡಿರಲಿಲ್ಲ ಈ ಮುನಿಸು ಪಕ್ಷದ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ನನ್ನನ್ನು ಮೌನವಾಗಿಸಬಹುದು ಆದರೆ, ಸೋಲಿಸಲು ಆಗೋದಿಲ್ಲ ಎಂದು ಚಡ್ಡಾ ಹೇಳಿಕೆ ಕೊಟ್ಟಿದ್ದರು. ಜೊತೆಗೆ  ನಾನು ಸಾಮಾನ್ಯ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ  ಪ್ರಶ್ನೆ ಮಾಡಿದ್ದೇ ತಪ್ಪಾಯಿತೇ ಎಂದು ವಿಡಿಯೋ ಹಂಚಿಕೊಂಡಿದ್ದರರು. ಆ ಬೆನ್ನಲ್ಲೇ ಎಎಪಿ ನಾಯಕರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು, ರಾಘವ್​ ಚಡ್ಡಾ ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಿಲ್ಲ. ಅವರ ಬಗ್ಗೆ ಭಯವಿದೆ ಎಂದು ಲೇವಡಿ ಮಾಡಿದ್ದರು.  

ಅಶೋಕ್​ ಮಿತ್ತಲ್ ಮನೆ ಮೇಲೆ ರೇಡ್​

 ಕೇಂದ್ರ ಜಾರಿ ನಿರ್ದೇಶನಾಲಯವು ರಾಜ್ಯಸಭಾ ಉಪನಾಯಕ ಅಶೋಕ್​ ಮಿತ್ತಲ್ ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಪಂಜಾಬ್​ ಮತ್ತು ಹರಿಯಾಣದಲ್ಲಿ ಇಡಿ ರೇಡ್​ ನಡೆದಿತ್ತು.  ಮಿತ್ತಲ್​ಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಬಳಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಈ ರೇಡ್​ ನಡೆದಿತ್ತು, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net