ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ​​; ಪವನ್​ ಖೇರಾಗೆ ಭಾರೀ ಹಿನ್ನಡೆ; ಜಾಮೀನು ವಿಸ್ತರಿಸಲು ಸುಪ್ರೀಂ ನಕಾರ..Pawan Khera

Pawan Khera
Pawan Khera
Published on

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಮತ್ತೆ ಹಿನ್ನಡೆ
  • ಅಸ್ಸಾಂ ಸಿಎಂ ಪತ್ನಿಯ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಖೇರಾ ವಿರುದ್ಧ ಕೇಸ್
  • ನಿರೀಕ್ಷಣಾ ಜಾಮೀನಿಗಾಗಿ ಅಸ್ಸಾಂನ ಗುವಾಹಟಿ ಹೈಕೋರ್ಟ್ ಸಂಪರ್ಕಿಸಲು ಸುಪ್ರೀಂ ಸೂಚನೆ
ನವದೆಹಲಿ: ಅಸ್ಸಾ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್​ ನಾಯಕ ಪವನ್​ ಖೇರಾ ಅವರಿಗೆ ಸುಪ್ರೀಂ ಕೋರ್ಟ್​​ನಿಂದ ಭಾರಿ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದ್ದು, ಏಪ್ರಿಲ್​ 20ರವರೆಗೂ ಬಲವಂತವಾಗಿ ಕೋರಿದ್ದ ರಕ್ಷಣಾ ಮನವಿಯನ್ನು ​ ತಿರಸ್ಕರಿಸಿದೆ.

ಗುವಾಹಟಿ ಕೋರ್ಟ್​ಗೆ ಅರ್ಜಿ ಸಲ್ಲಿಸಿ

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು. ನಾವು ಜಾಮೀನು ನೀಡಲು ಆಗುವುದಿಲ್ಲ. ಅರ್ಜಿದಾರರು ಅಸ್ಸಾಂನ ಗುವಾಹಟಿಯಲ್ಲಿರುವ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಮುಂದುವರೆದು, ಗುವಾಹಟಿ ಹೈಕೋರ್ಟ್​ನಲ್ಲಿ ವಿಚಾರಣೆ ವೇಲೆ ಸುಪ್ರೀಂ ಕೋರ್ಟ್​ ನೀಡಿರುವ ಯಾವುದೇ ಅವಲೋಕನಗಳು ಹೈಕೋರ್ಟ್‌ನ ತೀರ್ಪಿನ ಮೇಲೆ ಪ್ರಭಾವ ಬೀರಬಾರದು. ಪ್ರಕರಣದ ಅರ್ಹತೆ ಆಧಾರದ ಮೇಲೆ ಜಾಮೀನು ನೀಡಬೇಕು. ಸ್ವತಂತ್ರ್ಯವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಜೊತೆಗೆ ತಪ್ಪಾದ ಆಧಾರ್​​ ಹಂಚಿಕೊಂಡಿದ್ದಕ್ಕಾಗಿ ಕಿಡಿಕಾರಿತು.

ಜಾಮೀನು ಕೊಟ್ಟಿದ್ದ ತೆಲಂಗಾಣ

ಕೆಲ ದಿನಗಳ ಹಿಂದೆ ಪವನ್​ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್​ ನಿರೀಕ್ಷಣಾ ಜಾಮೀನು ಅರ್ಜಿ ನೀಡಿತ್ತು. ಇದನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೋರ್ಟ್​ ಜಾಮೀನಿಗೆ ತಡೆಯೊಡ್ಡಿ, ಕಾಮೀನು ವಿಸ್ತರಿಸಲು ನಿರಾಕರಿಸಿದೆ.

ಪವನ್​ ಖೇರಾ ಹೇಳಿದ್ದೇನು?

ಅಸ್ಸಾಂ ಸಿಎಂ ಪತ್ನಿ ಮೂರು ಮೂರು ಪಾಸ್​ಪೋರ್ಟ್​ ಇಟ್ಟುಕೊಂಡಿದ್ದಾರೆ ಎಂದು ಖೇರಾ ಈ ಹಿಂದೆ ಆರೋಪಿಸಿದ್ದರು. ಜೊತೆಗೆ ದುಬೈನಲ್ಲಿ ಅಮೆರಿಕದ ರಾಜ್ಯದಲ್ಲಿರುವ ಕಂಪನಿಯೊಂದರಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆ ರಿನಿಕಿ ಭುಯಾನ್ ಶರ್ಮಾ ಅವರು ದೂರು ನೀಡಿದ್ದರು. ಅವರು ಕೊಟ್ಟ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ ಬೇಸರ
ಈ ಸಂದರ್ಭದಲ್ಲಿ ಪವನ್ ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಗುವಾಹಟಿ ಹೈ ಕೋರ್ಟ್​​ಗೆ ಜಾಮೀನು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿ ಅಲ್ಲಿಯವರೆಗೆ ಖೇರಾ ಅವರಿಗೆ ರಕ್ಷಣೆ ಕೋರಿದರು. ಆದರೆ, ಕೋರ್ಟ್​ ನಿರಾಕರಿಸಿತು. ಈ ವೇಳೆ ಅವರು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂಗಳವಾರದವರೆಗೆ ನ್ಯಾಯಾಲಯ ನನಗೆ(ಖೇರಾ) ರಕ್ಷಣೆ ನೀಡಲು ಸಾಧ್ಯವಿಲ್ಲವೇ? ನಾನೇನು(ಖೇರಾ) ಭಯೋತ್ಪಾದಕನೇ?" ಎಂದು ಅವರು ಪ್ರಶ್ನಿಸಿದರು(ಏಜೆನ್ಸೀಸ್​​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net