ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ಪರಿಹಾರಕ್ಕಾಗಿ ದೇವರಲ್ಲಿಯೇ ಪ್ರಾರ್ಥಿಸಿ ಎಂದು ಹೇಳಿದ್ದರು. ಇದಲ್ಲದೆ, ಸಿಜೆಐ ಗವಾಯಿ ಅವರು ಮಾರಿಷಸ್ ಪ್ರವಾಸ ಮಾಡುವಾಗ, ಭಾರತದಲ್ಲಿ ಬುಲ್ಡೋಜರ್ ತೆರವು ಕಾರ್ಯಾಚರಣೆ ವಿರುದ್ಧ ಹೇಳಿಕೆ ನೀಡಿದ್ದರು. ಈ ವಿಚಾರವಾಗಿಯೂ ರಾಕೇಶ್ ಅವರನ್ನು ಟೀಕಿಸಿದ್ದರು. ಈ ಕಾರಣಗಳಿಗೆ ಆತ ಸಿಜೆಐ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದ ಎನ್ನಲಾಗಿದೆ.