ಯುದ್ಧದ ನಡುವೆ ದುಬೈನಲ್ಲಿ ಸಿಲುಕಿದ ಲಾರಾ ದತ್ತಾ: ತಲೆಯ ಮೇಲೇ ಹಾರುತ್ತಿವೆ ಫೈಟರ್ ಜೆಟ್; ಆದರೂ ನಾವು ಸೇಫ್​! ಅಂದಿದ್ದೇಕೆ ಮಾಜಿ ವಿಶ್ವಸುಂದರಿ? Lara Dutta

ಬಾಲಿವುಡ್​ ನಟಿ ಲಾರಾ ದತ್ತಾ (Lara Dutta)
ಬಾಲಿವುಡ್​ ನಟಿ ಲಾರಾ ದತ್ತಾ (Lara Dutta)
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಸಂಘರ್ಷ
  • ದುಬೈನಲ್ಲಿ ಲಾಕ್​ಆದ ಲಾರಾ ದತ್ತಾ
  • ಇಲ್ಲಿ ತಲೆಯ ಮೇಲೆ ಫೈಟರ್​ ಜೆಟ್​ ಹೋಗುತ್ತೆ ಎಂದ ನಟಿ
  • ಯುಎಇ ಪೊಲೀಸರಿಂದ ನಾವು ಸುರಕ್ಷಿತವಾಗಿದ್ದೇವೆ
  • ದುಬೈ ನನ್ನ ಎರಡನೇ ಮನೆ : ಲಾರಾ
ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಹಿನ್ನಲೆ, ದುಬೈನಲ್ಲಿ ಬಹಳಷ್ಟು ಜನ ಭಾರತೀಯರು ಸಿಲುಕಿಕೊಂಡಿದ್ದು, ಅವರಿಲ್ಲಿ ಬಾಲಿವುಡ್​ನ ಖ್ಯಾತ ನಟಿ ಲಾರಾ ದತ್ತಾ (Lara Dutta) ಕೂಡ ಒಬ್ಬರಾಗಿದ್ದಾರೆ.
ಸಂಘರ್ಷದ ಸಮಯದಲ್ಲಿ ದುಬೈನಲ್ಲಿ ಸಿಲುಕಿಕೊಂಡಿರುವ ಬಗ್ಗೆ ಇನ್​ಸ್ಟಾಗ್ರಾಮ್​ ಪೋಸ್ಟ್​ ಹಂಚಿಕೊಂಡಿರುವ ಲಾರಾ, ಇಲ್ಲಿ ದಿನನಿತ್ಯ ತಲೆಯ ಮೇಲಿಂದ ಫೈಟರ್​ ಜೆಟ್​ಗಳು ಹಾರುತ್ತಿವೆ, ಪ್ರತಿದಿನ ಸೈರನ್​ ಮೊಳಗುತ್ತಿದೆ, ನಮ್ಮ ವಿಲ್ಲಾದ ಕಿಟಕಿಗಳು ಶಬ್ದ ಮಾಡುತ್ತವೆ, ಆದರೆ ನಾವಿಲ್ಲಿ ಸುರಕ್ಷಿತವಾಗಿದ್ದೆವೆ. ಭಯದ ಬದಲು ಭರವಸೆಯಿಂದ ಜೀವಂತವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್​ ನಟಿ ಲಾರಾ ದತ್ತಾ, ತಮ್ಮ ಮಗಳು ಸೈರಾ ಜೊತೆ ದುಬೈ ವಿಲ್ಲಾದಲ್ಲಿದ್ದರೆ ಇವರ ಪತಿ ಮಹೇಶ್ ಭೂಪತಿ ಕೆಲಸದ ಮೇರಗೆ ಆಚೆ ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದುಬೈನಲ್ಲಿ ಯುದ್ಧದ ಕಾರ್ಮೋಡ ಕವಿದಿದೆ, ಇಲ್ಲಿ ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳನ್ನು ನಾನು ಕೇಳಿದ್ದೆ, ಆದರೆ ನಮ್ಮ ವಿಷಯದಲ್ಲಿ ಮಾತ್ರ ಅಂತಹ ಯಾವುದೇ ಭಯ ಪಡುವ ಅಗತ್ಯವೇ ಇಲ್ಲ ಎಂದು ಲಾರಾ ಹಂಚಿಕೊಂಡಿದ್ದಾರೆ.

ಯುಎಇ ಪೊಲೀಸರನ್ನು ಹೊಗಳಿದ ನಟಿ

ಯುಎಇ ಸರ್ಕಾರ ಮತ್ತು ಪೊಲೀಸರು ಇಲ್ಲಿ ಅದ್ಭತವಾಗಿ ಕೆಲಸ ಮಾಡುತ್ತಿದ್ದಾರೆ, ಪ್ರತಿಯೊಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಮತ್ತು ಅವರ ಸುರಕ್ಷತರಯನ್ನು ಖಾತರಿ ಪಡೆಸಲು ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ ಎಂದು ಲಾರಾ ಹೇಳಿದ್ದಾರೆ. ನಾನು ಈ ದೇಶದ ನಾಗರಿಕಳಲ್ಲ ಆದರೂ, ಇಲ್ಲಿಯ ನಾಗರಿಕರ ರಕ್ಷಣೆಯನ್ನು ಹೇಗೆ ಮಾಡಲಾಗುತ್ತಿದಯೋ ಅಷ್ಟೇ ಮುತುರ್ಜಿಯಿಂದ ನಮ್ಮನ್ನು ಸಹ ನೋಡಿಕೊಳ್ಳುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ.

ದುಬೈ ನನ್ನ ಎರಡನೇ ಮನೆ

ನಾನು ಮುಂಬೈನಲ್ಲಿದ್ದಾಗ ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ನೋಡಿದ್ದೇನೆ, ಆಗ ಹೇಗೆ ನನ್ನ ದೇಶ ನನ್ನನ್ನು ರಕ್ಷಸಿತ್ತೋ, ಅದೇ ರೀತಿ ಇಂದು ದುಬೈ ನನ್ನ ಸುರಕ್ಷತೆಯನ್ನು ಖಾತರಿ ಪಡೆಸಿದೆ ಎಂದಿದ್ದಾರೆ. ಮುಂಬೈ ನನ್ನ ಮೊದಲನೇ ಮನೆಯಾದರೆ, ದುಬೈ ನನ್ನ ಎರಡನೇ ಮನೆ ಎಂದು ಹೇಳಿದ್ದಾರೆ. ನಾವು ಈಗ ಭಾರತಕ್ಕೆ ಮರಳುವ ವಿಚಾರ ಮಾಡುತ್ತಿದ್ದು, ವಿಮಾನದ ಟಿಕೆಟ್​ ದೊರೆತ ಕೂಡಲೇ ಭಾರತಕ್ಕೆ ಮರಳುವುದಾಗಿ ಲಾರಾ ದತ್ತಾ ಹೇಳಿದ್ದಾರೆ.

ಲಾರಾ ದತ್ತಾ ಯಾರು?

ಲಾರಾ ದತ್ತಾ ಇವರು ಬಾಲಿವುಡ್​ ನಟಿ ಹಾಗೂ ಮಾಜಿ ವಿಶ್ವ ಸುಂದರಿಯಾಗಿದ್ದು ಇವರು ಏಪ್ರಿಲ್ 16, 1978 ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜನಿಸಿದರು. ಇವರ ತಂದೆ ಎಲ್.ಕೆ. ದತ್ತಾ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಆಗಿದ್ದರು.
ಲಾರಾ ತನ್ನ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್​ ಮತ್ತು ಕಮ್ಯುನಿಕೇಶನ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರು 2000 ದಲ್ಲಿ ವಿಶ್ವ ಸುಂದರಿ ಕೀರಿಟವನ್ನು ಧರಿಸಿ, 2003 ರಲ್ಲಿ ಅಂದಾಜ್​ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಚೊಚ್ಚಲ ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.
ಲಾರಾ ದತ್ತಾ ಮಸ್ತಿ, ನೋ ಎಂಟ್ರಿ, ಭಾಗಮ್ ಭಾಗ್, ಪಾರ್ಟ್ನರ್, ಹೌಸ್ ಫುಲ್ ಮತ್ತು ಡಾನ್ 2 ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬೆಲ್ ಬಾಟಮ್ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net