ಈ ಕುರಿತು ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯ, ಇದುವರೆಗೆ ನಡೆಸಲಾದ ತನಿಖೆಯಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಭೂ ಸ್ವಾಧೀನಕ್ಕಾಗಿ ಮೋಸದ ರೀತಿಯಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ. ಇತರ ಹಲವಾರು ವ್ಯಕ್ತಿಗಳೊಂದಿಗೆ ಸೇರಿ ಜವಾದ್ ಅಹ್ಮದ್ ಸಿದ್ದಿಕಿ ನವದೆಹಲಿಯ ಮದನ್‌ಪುರ ಖಾದರ್ ಗ್ರಾಮದ ಖಾಸ್ರಾ ಸಂಖ್ಯೆ 792 ಹೊಂದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ವಂಚನೆ ನಡೆಸಿದ್ದಾರೆ. ಅದರ ಮೌಲ್ಯ 45 ಕೋಟಿ ರೂ/ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.