ಕುಲ್ಗಾಮ್‌ನಲ್ಲಿ CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ, RSSಗೆ ಬೆದರಿಕೆ! Kulgam CRPF Terror Attack

ಶಾಕಿಂಗ್​ ಸಂಗತಿ ಏನೆಂದರೆ, ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಸಂಘಟನೆಯ ಹೆಸರು ಕೇಳಿಬರುತ್ತಿರುವುದು ಇದೇ ಮೊದಲು.
Kulgam CRPF Terror Attack
ಕುಲ್ಗಾಮ್‌ನಲ್ಲಿ CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ, RSSಗೆ ಬೆದರಿಕೆ!
Published on: 

ನವದೆಹಲಿ: ನಿನ್ನೆ (ನ.11) ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯ ಮೇಲೆ ನಡೆದ ಉಗ್ರರ ಗುಂಡಿನ ದಾಳಿಯು ( Kulgam CRPF Terror Attack ) ಕಣಿವೆ ರಾಜ್ಯದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ಮೀರ್ ಬಜಾರ್ ಸಮೀಪದ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಅನ್ನು ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಅನಿರೀಕ್ಷಿತ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರಗೊಂಡಿರುವ ನಡುವೆಯೇ ಈ ದಾಳಿ ನಡೆದಿರುವುದು ಭದ್ರತಾ ವಲಯದಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಕಾರಣವಾಗಿದೆ.

ಈ ದಾಳಿಯ ಬೆನ್ನಲ್ಲೇ 'ಪಸ್ದಾರನ್-ಎ-ಹುರಿಯತ್ ಕಾಶ್ಮೀರ್' (Pasdaran-e-Hurriyat Kashmir) ಎಂಬ ಹೊಸ ಉಗ್ರಗಾಮಿ ಸಂಘಟನೆಯು ದಾಳಿಯ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿದೆ. ಶಾಕಿಂಗ್​ ಸಂಗತಿ ಏನೆಂದರೆ, ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಸಂಘಟನೆಯ ಹೆಸರು ಕೇಳಿಬರುತ್ತಿರುವುದು ಇದೇ ಮೊದಲು.

Also Read
ನಿಜಕ್ಕೂ ನಂಬಲಸಾಧ್ಯ... ಉಪ್ಪಿನ ಕಣವನ್ನು ಎಂಟು ತುಂಡುಗಳಾಗಿ ಕತ್ತರಿಸಿದ ಯುವಕ, ವಿಡಿಯೋ ವೈರಲ್..​! Micro cutting skills
Kulgam CRPF Terror Attack

ನವೆಂಬರ್ 11 ರಂದು ಈ ಉಗ್ರ ಸಂಘಟನೆಯ ವಕ್ತಾರ ಎಂದು ಹೇಳಿಕೊಂಡು ಮೊಹಮ್ಮದ್ ಒಮರ್ ಅಜ್ಜಮ್ ಎಂಬಾತ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಸಿಆರ್‌ಪಿಎಫ್ ಸಿಬ್ಬಂದಿಯನ್ನು "ಭಾರತೀಯ ಆಕ್ರಮಣಕಾರಿ ಪಡೆಗಳು" ಎಂದು ಕರೆದಿದ್ದಾನೆ. ಅಲ್ಲದೆ, ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಈ ದಾಳಿಯನ್ನು ತಮ್ಮ ಸಂಘಟನೆಯೇ ನಡೆಸಿದೆ ಎಂದು ಹೇಳಿಕೊಂಡಿದ್ದಾನೆ.

ತನ್ನ ಹೇಳಿಕೆಯಲ್ಲಿ ತೀವ್ರ ಪ್ರಚೋದನಕಾರಿ ಹಾಗೂ ಬೆದರಿಕೆಯ ಮಾತುಗಳನ್ನಾಡಿರುವ ಒಮರ್ ಅಜ್ಜಮ್, ಮುಂಬರುವ ದಿನಗಳಲ್ಲಿ ಆರ್‌ಎಸ್‌ಎಸ್ (RSS) ಮತ್ತು 'ಹಿಂದುತ್ವ ಆಡಳಿತ'ದ ಮೇಲೆ ವಿನಾಶಕಾರಿ ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಕಣಿವೆಯಲ್ಲಿ ಹೇರಲಾಗಿರುವ ಕೃತಕ ಶಾಂತಿಯ ಪರದೆಯನ್ನು ಮುಜಾಹಿದ್ದೀನ್‌ಗಳ ಕಾರ್ಯಾಚರಣೆಗಳು ಮತ್ತೊಮ್ಮೆ ಹರಿದು ಹಾಕಲಿವೆ ಮತ್ತು ಅವರ ಪ್ರಾಬಲ್ಯ ಕೊನೆಗೊಳ್ಳುವವರೆಗೂ ಈ ಜಿಹಾದ್ ಮುಂದುವರಿಯಲಿದೆ ಎಂದು ಹೇಳಿದ್ದಾನೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳು ಈ ಹೊಸ ಸಂಘಟನೆಯ ಮೂಲ ಮತ್ತು ಜಾಲದ ಕುರಿತು ತೀವ್ರ ತನಿಖೆ ಆರಂಭಿಸಿವೆ.

ಇನ್ನೊಂದೆಡೆ, ಕುಲ್ಗಾಮ್ ಉಗ್ರ ದಾಳಿಯ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಾಳಿಯ ನಂತರ ಭಾರತೀಯ ಭದ್ರತಾ ಪಡೆಗಳು ತೋರಿದ ಕ್ಷಿಪ್ರ ಪ್ರತಿಕ್ರಿಯೆ ಎಂತಹದ್ದು ಎಂಬುದನ್ನು ಜಗತ್ತಿಗೆ ತೋರಿಸಿದೆ. ಉಗ್ರರು ಗುಂಡು ಹಾರಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ, ತಕ್ಷಣವೇ ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರು ಮುಂದೆ ಸಾಗದಂತೆ ತಡೆದಿದ್ದಾರೆ. ಅದೇ ಸಮಯದಲ್ಲಿ ಇತರ ಯೋಧರು ತಮ್ಮ ಗಾಯಾಳು ಸಹೋದ್ಯೋಗಿಗಳ ರಕ್ಷಣೆಗೆ ಧಾವಿಸಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read
ನೆಹರೂ ಬಳಿಕ ಸೋನಿಯಾ ಗಾಂಧಿ ಆತ್ಮಕಥೆ: ನವೆಂಬರ್ 16 ರಂದು ದೆಹಲಿಯಲ್ಲಿ ಅನಾವರಣ! | Sonia Autobiography
Kulgam CRPF Terror Attack

ಭದ್ರತಾ ಪಡೆಗಳ ಈ ಅತ್ಯಂತ ಚುರುಕಾದ ಮತ್ತು ಸಮನ್ವಯದ ಪ್ರತಿಕ್ರಿಯೆಯಿಂದಾಗಿ ಉಗ್ರರ ದೊಡ್ಡ ಮಟ್ಟದ ಸಂಚು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಧರ ಪ್ರತಿರೋಧ ಮತ್ತು ತ್ವರಿತ ಕಾರ್ಯಾಚರಣೆಯಿಂದ ಕಂಗೆಟ್ಟ ಭಯೋತ್ಪಾದಕರು, ತಮ್ಮ ಮುಂದಿನ ಯೋಜನೆಯನ್ನು ಕೈಬಿಟ್ಟು ಸ್ಥಳದಿಂದ ಪರಾರಿಯಾಗುವಂತಾಯಿತು. ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವು ತಪ್ಪಿದಂತಾಗಿದ್ದು, ಸದ್ಯ ಪರಾರಿಯಾಗಿರುವ ಉಗ್ರರಿಗಾಗಿ ಇಡೀ ಕುಲ್ಗಾಮ್ ಜಿಲ್ಲೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ, (ಏಜೆನ್ಸೀಸ್​).