ನೆಹರೂ ಬಳಿಕ ಸೋನಿಯಾ ಗಾಂಧಿ ಆತ್ಮಕಥೆ: ನವೆಂಬರ್ 16 ರಂದು ದೆಹಲಿಯಲ್ಲಿ ಅನಾವರಣ! | Sonia Autobiography

Sonia Gandhi's book 'Belonging'
ಸೋನಿಯಾ ಗಾಂಧಿ 'ಬೆಲಾಂಗಿಂಗ್' ಪುಸ್ತಕ ಬಿಡುಗಡೆ
Published on: 

Belonging: A journey of love: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕಥೆ ಮಂಗಳವಾರ ಅಧಿಕೃತವಾಗಿ ಮಾರುಕಟ್ಟೆಗೆ ಬಂದಿದೆ. ಈ ವಿಶೇಷ ಕ್ಷಣವನ್ನು ಸ್ಮರಣೀಯವಾಗಿಸಲು ದೆಹಲಿಯಲ್ಲಿ ಮುಂದಿನ ವಾರ ಪ್ರಮುಖ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 16 ಕ್ಕೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಇವೆಂಟ್ ನಿಗದಿಯಾಗಿದೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಗಾಂಧಿ ಕುಟುಂಬದ ಆಪ್ತ ಆಹ್ವಾನಿತರಿಗಷ್ಟೇ ಇಲ್ಲಿ ಅವಕಾಶ ನೀಡಲಾಗಿದೆ.

ನೆಹರೂ ನಂತರ 2ನೇ ನಾಯಕಿ

ಇಟಲಿಯ ಹುಟ್ಟಿನಿಂದ ಹಿಡಿದು ಭಾರತದ ರಾಜಕೀಯ ಅಧಿಕಾರದವರೆಗೆ ಸೋನಿಯಾ ಅವರ ಜೀವನಯಾನವನ್ನು 544 ಪುಟಗಳಲ್ಲಿ ಹಾರ್ಪರ್ ಕಾಲಿನ್ಸ್ ಸಂಸ್ಥೆ ಮುದ್ರಿಸಿದೆ. ನೆಹರೂ ಅವರ 1936 ರ 'ಆನ್ ಆಟೋಬಯೋಗ್ರಫಿ' ನಂತರ ನೆಹರೂ-ಗಾಂಧಿ ಮನೆತನದಿಂದ ಹೊರಬರುತ್ತಿರುವ ಎರಡನೇ ಆತ್ಮಕಥೆ ಇದಾಗಿದೆ.

Jawaharlal Nehru's Autobiography
1936 ರಲ್ಲಿ ಪ್ರಕಟವಾದ ಜವಾಹರಲಾಲ್ ನೆಹರೂ ಅವರ ಆತ್ಮಕಥೆ

ಪ್ರಧಾನಿಯಾಗುವ ಆಸೆ ವ್ಯಕ್ತಪಡಿಸಿದ್ದ ಪ್ರಣಬ್

2010 ರಲ್ಲಿ ಯುಪಿಎ ಸರ್ಕಾರವಿದ್ದಾಗ, ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಪ್ರಣಬ್ ಮುಖರ್ಜಿ ಸಲಹೆ ನೀಡಿದ್ದರು. ಇದು ತಾವು ಪ್ರಧಾನಿಯಾಗಬೇಕು ಎಂಬ ಅವರ ಬಯಕೆಯ ಸುಳಿವಾಗಿತ್ತು ಎಂದು ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.

Former President Pranab Mukherjee and Sonia Gandhi
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಸೋನಿಯಾ ಗಾಂಧಿ

ಮೋದಿ ಕುರಿತು ಸೋನಿಯಾ ನುಡಿ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ನೇರ ಸಂಪರ್ಕ ತೀರಾ ಕಡಿಮೆ ಇತ್ತು ಎಂದಿರುವ ಅವರು, ಕೆಲವೊಂದು ಸಂಗತಿಗಳಲ್ಲಿ ಪರಸ್ಪರ ಸಮಾನ ನಿಲುವುಗಳಿದ್ದವು ಎಂಬುದನ್ನು ಉಲ್ಲೇಖಿಸಿದ್ದಾರೆ.

Prime Minister Narendra Modi and Sonia Gandhi
ಪ್ರಧಾನಿ ನರೇಂದ್ರ ಮೋದಿ ಮತ್ತು ಸೋನಿಯಾ ಗಾಂಧಿ

ಇದನ್ನೂ ಓದಿ: ‘ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತೆ’: ಎನ್‌ಸಿಪಿ ವಿಲೀನ ಗೊಂದಲಕ್ಕೆ ಸುನೇತ್ರಾ ಪವಾರ್ ನೀಡಿದ ಉತ್ತರವೇನು? | Sunetra Pawar

'ಬ್ಯಾಕ್ ಸೀಟ್ ಡ್ರೈವರ್' ಆರೋಪಕ್ಕೆ ತಿರುಗೇಟು

ಯುಪಿಎ ಆಡಳಿತದ ಅವಧಿಯಲ್ಲಿ ತಾವು ಸರ್ಕಾರದ ಸೂತ್ರಧಾರಿಯಾಗಿದ್ದೆ ಎಂಬ ಆರೋಪವನ್ನು ನಿರಾಕರಿಸಿರುವ ಸೋನಿಯಾ, ತಾವು 'ಬ್ಯಾಕ್ ಸೀಟ್ ಡ್ರೈವರ್' ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)