ಪ್ರತಿಭಟನಾನಿರತ ಯುವಕರಿಗೆ "ಭಾರತದ ವಿಸರ್ಜನೆ ಹಾಗೂ ವಿಘಟನೆ" ಒಂದೇ ಏಕೈಕ ಪರಿಹಾರ ಎಂದು ಎಸ್‌ಎಫ್‌ಜೆ ಪ್ರಚೋದನಾತ್ಮಕ ಹೇಳಿಕೆ ನೀಡಿದೆ. ಇನ್ನೂ ವೈರಲ್ ಆಗಿರುವ ವಿಡಿಯೋದಲ್ಲಿ ಸಿಜೆಪಿ ವಿದ್ಯಾರ್ಥಿ ಚಳವಳಿಗೆ ಸಿಖ್ಸ್ ಫಾರ್ ಜಸ್ಟಿಸ್ 1 ಮಿಲಿಯನ್ ಡಾಲರ್ ನೀಡುವುದನ್ನು ಪುನರುಚ್ಚರಿಸಿರುವ ಉಗ್ರ ಪನ್ನುನ್, ಅದಕ್ಕಾಗಿ ಕೆಲ ಕಠಿಣ ಷರತ್ತುಗಳನ್ನು ವಿಧಿಸಿದ್ದಾನೆ. ಸಿಜೆಪಿ ವಿದ್ಯಾರ್ಥಿಗಳು ಮೋದಿ ಸರ್ಕಾರದೊಂದಿಗೆ ಯಾವುದೇ ಸಂಧಾನ ನಡೆಸಬಾರದು, ಆಗಸ್ಟ್ 15ರವರೆಗೆ ಪ್ರತಿಭಟನೆಯನ್ನು ಮುಂದುವರಿಸಬೇಕು ಹಾಗೂ ಆಗಸ್ಟ್ 15 ಅನ್ನು ವಿದ್ಯಾರ್ಥಿಗಳಾಗಲಿ ಅಥವಾ ಸಿಖ್ಖರಾಗಲಿ ಸ್ವಾತಂತ್ರ್ಯ ದಿನವೆಂದು ಪರಿಗಣಿಸಬಾರದು ಎಂದು ಆತ ಉದ್ರೇಕಕಾರಿ ಕರೆ ನೀಡಿದ್ದಾನೆ. ಅಷ್ಟೇ ಅಲ್ಲದೆ, ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆದು, ಅವರು ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸದಂತೆ ತಡೆಯುವುದಾಗಿ ಆತ ಬಹಿರಂಗ ಬೆದರಿಕೆ ಒಡ್ಡಿದ್ದಾನೆ.