ಕೇತನ್​ ಅಗರ್​ವಾಲ್​ ಕೊಲೆ ಪ್ರಕರಣ: ಪ್ರತ್ಯಕ್ಷ ಸಾಕ್ಷಿ ಇಲ್ಲ, ಸಿಸಿಟಿವಿಯೂ ಇಲ್ಲ! ಭಾವಿ ಪತ್ನಿ ಸಿಯಾ, ಪ್ರಿಯಕರನಿಗೆ ಪಾಲಿಗ್ರಾಫ್ ಪರೀಕ್ಷೆ; ಕೋರ್ಟ್ ಅನುಮತಿ! Ketan Agarwal

ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ ಭಾವಿ ಪತ್ನಿ ಸಿಯಾ ಮತ್ತು ಪ್ರಿಯಕರನಿಗೆ ಪಾಲಿಗ್ರಾಫ್ ಪರೀಕ್ಷೆ
ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ ಭಾವಿ ಪತ್ನಿ ಸಿಯಾ ಮತ್ತು ಪ್ರಿಯಕರನಿಗೆ ಪಾಲಿಗ್ರಾಫ್ ಪರೀಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್!
  • ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ ಭಾವಿ ಪತ್ನಿ ಸಿಯಾ ಮತ್ತು ಪ್ರಿಯಕರನಿಗೆ ಪಾಲಿಗ್ರಾಫ್ ಪರೀಕ್ಷೆ
  • ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ನ್ಯಾಯಾಲಯ
ಪುಣೆ: ದೇಶದಾದ್ಯಂತ ತಲ್ಲಳಕ್ಕೆ ಕಾರಣವಾಗಿರುವ ಪ್ರಕರಣ ಎಂದರೆ ಅದು ಪುಣೆಯ ಯುವ ಉದ್ಯಮಿ ಕೇತನ್​ ಅಗರ್​ವಾಲ್​ (Ketan Agarwal) ಹತ್ಯೆ ಪ್ರಕರಣವಾಗಿದೆ. ಸದ್ಯ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಕೇತನ್​​ನ ಭಾವಿ ಪತ್ನಿ ಸಿಯಾ ಗೋಯಲ್​ ಹಾಗೂ ಆಕೆಯ ಪ್ರಿಯಕರ ಚೇತನ್​ ಚೌಧರಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ಕೇತನ್​ನನ್ನು ಪುಣೆಯ ಲೋಹಗಢ ಕೋಟೆಯಿಂದ ತಳ್ಳಿದ ಸಂದರ್ಭದಲ್ಲಿ ಇವರುನ್ನು ಯಾರು ನೋಡಿಲ್ಲದ ಕಾರಣ, ಆರೋಪಿಗಳನ್ನು ಸುಳ್ಳು ಪತ್ತೆಕಾರಕ (ಪಾಲಿಗ್ರಾಫ್ ಪರೀಕ್ಷೆ) ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯದ ಅನುಮತಿಯನ್ನು ಪೊಲೀಸರು ಕೇಳಿದ್ದು, ಇದಕ್ಕೆ ಕೋರ್ಟ್​ ಒಪ್ಪಿಗೆ ಸೂಚಿಸಿದೆ.

ಪ್ರತ್ಯಕ್ಷ ಸಾಕ್ಷಿಗಳಿಲ್ಲ!

ಪೊಲೀಸ್​ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಕೇತನ್​ ಅಗರ್​ವಾಲ್​ನನ್ನು ಮೇಲಿನಿಂದ ಸಿಯಾ ಮತ್ತು ಚೇತನ್​ ಇವರೇ ತಳ್ಳಿದ್ದಾರೆ ಎನ್ನುವುದನ್ನು ಸಾಭೀತು ಪಡಿಸಲು ಯಾವುದೇ ಪ್ರತ್ಯಕ್ಷ ಸಾಕ್ಷಿಗಳಾಗಲೀ ಅಥವಾ ಸಿಸಿಟಿವಿ ರೆಕಾರ್ಡಿಂಗ್​ ಇಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ವಿಚಾರಣೆ ನಡೆಸುತ್ತಿದ್ದೆವೆ.
ಡಿಜಿಟಲ್​ ಸಾಕ್ಷಿಗಳಾದ ಪೋನ್​ ಕರೆಗಳು, ಚಾಟ್​ಗಳು ಇವೆಲ್ಲವನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೆವೆ. ಆದರೆ ಈ ಕೊಲೆಯನ್ನು ಇವರೇ,ಇವರ ಕೈಯಲ್ಲೇ ನಡೆದಿದೆ ಎಂದು ಪತ್ತೆ ಹಚ್ಚುವುದು ಅಗತ್ಯವಾಗಿದೆ. ಕೊಲೆಗೆ ಯಾವುದಾದರೂ ಆಯುಧವನ್ನು ಬಳಸಿದ್ದರೆ? ಬಳಸಿದ್ದರೆ ಅದನ್ನು ಎಲ್ಲಿ ಇಟ್ಟಿದ್ದಾರೆ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯುವುದು ಅಗತ್ಯವಾಗಿದೆ.
ಹೀಗಾಗಿ ಪೊಲೀಸ್​ ಇಲಾಖೆ ಕೋರ್ಟ್​ ಬಳಿ, ಆರೋಪಿಗಳನ್ನು ಸುಳ್ಳು ಪತ್ತೆಕಾರಕ (ಪಾಲಿಗ್ರಾಫ್ ಪರೀಕ್ಷೆ) ಪರೀಕ್ಷೆಗೆ ಒಳಪಡಿಸಲು ಅನುಮತಿ ಪಡೆದುಕೊಂಡಿದ್ದು, ಈ ಪರೀಕ್ಷೆ ನಡೆದ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸಿಯಾ ಒಪ್ಪಿಗೆ ಅತ್ಯಗತ್ಯ!

ಭಾರತದ ಕಾನೂನಿನ ಪ್ರಕಾರ, ಈ ಸುಳ್ಳು ಪತ್ತೆಕಾರಕ ಅಥವಾ ಪಾಲಿಗ್ರಾಫ್ ಪರೀಕ್ಷೆ ನಡೆಸಬೇಕಾದರೆ, ಕೇವಲ ನ್ಯಾಯಾಲಯದ ಒಪ್ಪಿಗೆ ಮಾತ್ರವಲ್ಲ, ಆರೋಪಿಗ ಸಹಮತಿ ಕೂಡ ಅಗ್ಯಗತ್ಯವಾಗಿರುತ್ತದೆ. ಒಂದು ವೇಳೆ ಸಿಯಾ ಈ ಪರೀಕ್ಷೆಗೆ ಒಪ್ಪಿಗೆ ನೀಡದೆ ಹೋದರೆ ಇದನ್ನು ನಡೆಸಲು ಸಾಧ್ಯವಿಲ್ಲ.
ಒಂದು ವೇಳೆ ಈ ಪರೀಕ್ಷೆ ನಡೆದು ಸಿಯಾ ನೀಡಿರುವ ಉತ್ತರವನ್ನು ತಪ್ಪೋಪ್ಪಿಗೆ ಅಥವಾ ಈ ಪರೀಕ್ಷೆಯೇ ನೇರ ಸಾಕ್ಷಿಯೆಂದು ಭಾವಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಪರೀಕ್ಷೆ ನಡೆಸಿ ಕಲೆಹಾಕಿದ ಮಾಹಿತಿಯನ್ನು ಪೊಲೀಸರು ಸಾಕ್ಷಿಯಾಗಿ ಪರಿವರ್ತಿಸಲು ಮಾತ್ರ ಅವಕಾಶವಿರುತ್ತದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net