ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿ!...ನಿಮ್ಮ ಹೋರಾಟ ಭಾರತೀಯವಾಗಿಡಿ ಎಂದು ವಾಂಗ್ಚುಕ್‌ಗೆ ಆರ್‌ಎಸ್ಎಸ್ ಸಲಹೆ | RSS

RSS | ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿ!...ನಿಮ್ಮ ಹೋರಾಟ ಭಾರತೀಯವಾಗಿಡಿ ಎಂದು ವಾಂಗ್ಚುಕ್‌ಗೆ ಆರ್‌ಎಸ್ಎಸ್ ಸಲಹೆ
RSS | ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿ!...ನಿಮ್ಮ ಹೋರಾಟ ಭಾರತೀಯವಾಗಿಡಿ ಎಂದು ವಾಂಗ್ಚುಕ್‌ಗೆ ಆರ್‌ಎಸ್ಎಸ್ ಸಲಹೆ
Published on
ನವದೆಹಲಿ: ಸೋನಮ್ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಬೆನ್ನಲ್ಲೇ, ಈ ಚಳವಳಿಯನ್ನು ಭಾರತೀಯವಾಗಿ ಇಟ್ಟುಕೊಳ್ಳುವಂತೆ ಆರ್‌ಎಸ್ಎಸ್ ರಾಷ್ಟ್ರೀಯ ಕಾರ್ಯಾಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಮನವಿ ಮಾಡಿದ್ದು, ಈ ಹೋರಾಟವನ್ನು ವಿದೇಶಿ ಶಕ್ತಿಗಳು ಆಕ್ರಮಿಸಿಕೊಂಡಿವೆ ಎಂದು​ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರೇಶ್ ಕುಮಾರ್, ಸಿಜೆಪಿಯು ವಿದೇಶಿ ಶಕ್ತಿಗಳ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಲ್ಲದೆ, ರಾಜಕೀಯ ಲಾಭಕ್ಕಾಗಿ ದೇಶವಿರೋಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸದಂತೆ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ಸೋನಮ್ ವಾಂಗ್ಚುಕ್ ಒಬ್ಬ ವ್ಯಕ್ತಿ, ಆದರೆ ಸಿಜೆಪಿ ಸಂಪೂರ್ಣವಾಗಿ ಬೇರೆಯದೇ ಆಗಿದೆ. ರಾಜಕೀಯ ಪಕ್ಷಗಳ ಅಜೆಂಡಾಗಳೂ ಬೇರೆ ಇವೆ. ಎಲ್ಲರ ಚಾರಿತ್ರ್ಯ ವಧೆ ಮಾಡಲು ಇವುಗಳನ್ನು ಒಂದಾಗಿ ಬೆರೆಸಲಾಗಿದೆ. ಇದೇ ಕಾರಣಕ್ಕೆ ಸೋನಮ್ ವಾಂಗ್ಚುಕ್ ಇದರಿಂದ ದೂರ ಉಳಿದಿದ್ದಾರೆ. ಸಿಜೆಪಿ ವಿದೇಶಿ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದು, ದೇಶಕ್ಕೆ ದ್ರೋಹ ಬಗೆಯುವ ಮತ್ತು ರಾಷ್ಟ್ರಕ್ಕೆ ವಂಚಿಸುವವರ ಕೈಗೊಂಬೆ ಮತ್ತು ಏಜೆಂಟರಾಗಬೇಡಿ ಎಂದು ಎಚ್ಚರಿಕೆ ನೀಡಿದರು.

ಭಾರತ ಜಾಗತಿಕ ರೋಲ್ ಮಾಡೆಲ್!...

ದೇಶದಲ್ಲಿ ಧನಾತ್ಮಕ ರಾಜಕೀಯದ ವಾತಾವರಣವನ್ನು ಹಾಳುಮಾಡಲು ಯತ್ನಿಸಲಾಗುತ್ತಿದೆ. ವಿರೋಧ ಪಕ್ಷಗಳು ಮೊದಲು ನೀಟ್ ಪರೀಕ್ಷೆಯ ವಿಷಯವನ್ನು ಎತ್ತಿ, ನಂತರ ಸ್ವಂತ ರಾಜಕೀಯ ಲಾಭಕ್ಕಾಗಿ ಈ ಚಳವಳಿಯ ದಾರಿತಪ್ಪಿಸಿದವು. ಅಲ್ಲದೆ, ಭಾರತವು ಅಭಿವೃದ್ಧಿ ಹೊಂದಿದ, ಸಮೃದ್ಧ ಮತ್ತು ಶಿಕ್ಷಣ ಪಡೆದ ರಾಷ್ಟ್ರವಾಗಿ ಬೆಳೆಯುವುದನ್ನು ಬಯಸದ ಆಂತರಿಕ ಮತ್ತು ಬಾಹ್ಯ ಶಕ್ತಿಗಳ ಬೆಂಬಲ ಈ ಪ್ರತಿಭಟನೆಗಳಿಗಿದೆ ಎಂದು ಕುಮಾರ್​ ಆರೋಪಿಸಿದರು.
ಆವಿಷ್ಕಾರಗಳು ಮತ್ತು ಸಾವಿರಾರು ಸ್ಟಾರ್ಟ್‌ಅಪ್‌ಗಳ ಮೂಲಕ ಭಾರತವು ಜಾಗತಿಕ ರೋಲ್ ಮಾಡೆಲ್ ಆಗಿ ಹೊರಹೊಮ್ಮುತ್ತಿದೆ ಎಂದ ಕುಮಾರ್​, ವಿಶ್ವದ ಎಲ್ಲಾ ದೇಶಗಳು ಯಾವುದಾದರೂ ಒಂದು ದೇಶಕ್ಕೆ ಅತ್ಯುನ್ನತ ಗೌರವಗಳನ್ನು ನೀಡಿದ್ದರೆ ಅದು ಭಾರತಕ್ಕೆ ಮಾತ್ರ. ಅಮೆರಿಕ, ರಷ್ಯಾ, ಅರಬ್ ಜಗತ್ತು ಅಥವಾ ಇಂಗ್ಲೆಂಡ್‌ಗೆ ಯಾರೂ ಇಂತಹ ಗೌರವ ನೀಡಲಿಲ್ಲ. ನಮ್ಮ ದೇಶ ಜಗತ್ತಿಗೆ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಪಾಕಿಸ್ತಾನದಿಂದ ಪಿತೂರಿ!...

ಇತ್ತೀಚೆಗೆ ಪೊಲೀಸ್ ಕಾನ್ಸ್‌ಸ್ಟೇಬಲ್ ಅವರ ಹತ್ಯೆಯ ನಂತರ ಪಾಕಿಸ್ತಾನವು ಭಾರತದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದನ್ನು ಮುಂದುವರಿಸಿದೆ ಎಂದು ಆರ್‌ಎಸ್ಎಸ್ ನಾಯಕ ಆರೋಪಿಸಿದರು. "ಪಾಕಿಸ್ತಾನ ಇಂತಹ ಪಿತೂರಿಗಳನ್ನು ಮುಂದುವರಿಸಿದೆ. ಪಾಕಿಸ್ತಾನ ಶಾಂತಿಯಿಂದ ಇರಲು ಬಯಸುವುದಿಲ್ಲ, ಇತರರನ್ನೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಅದು ದಿನನಿತ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ" ಎಂದರು. ಅಲ್ಲದೆ, ಪಾಕಿಸ್ತಾನವು ಪಶ್ತೂನ್‌ಗಳು, ಅಹ್ಮದಿಯಾಗಳು ಮತ್ತು ಕಾಶ್ಮೀರಿಗಳು ಸೇರಿದಂತೆ ತನ್ನದೇ ಜನರನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುವ ಬದಲು ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು.
ನಕಾರಾತ್ಮಕ ರಾಜಕೀಯ ಮಾಡುವ ಬದಲು ಬಡತನ, ಹಸಿವು, ಮಾಲಿನ್ಯ ಮತ್ತು ಹಿಂಸಾಚಾರವನ್ನು ಹೋಗಲಾಡಿಸಲು ಜನರು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಕರೆ ನೀಡಿರುವ ಕುಮಾರ್, ಅಭಿವೃದ್ಧಿ, ಶಿಕ್ಷಣ, ಸೌಹಾರ್ದತೆ ಮತ್ತು ಶಾಂತಿಗಾಗಿ ಕೆಲಸ ಮಾಡುವ ಬದಲು ವಿಭಜನೆಯನ್ನು ಸೃಷ್ಟಿಸಲು ಯತ್ನಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಜನ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಜಗತ್ತಿನಾದ್ಯಂತ ಭಾರತದ ಅಭಿವೃದ್ಧಿಗೆ ತಡೆಯೊಡ್ಡಲು ದುಷ್ಟ ಶಕ್ತಿಗಳು ಯತ್ನಿಸುತ್ತಿದ್ದಾಗ, ಇತಿಹಾಸದಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ವೀರ್ ಸಾವರ್ಕರ್ ಅವರಂತೆ ದೇಶಕ್ಕಾಗಿ ನಿಂತವರು ಯುವಜನರು ಎಂಬುದನ್ನು ಭವಿಷ್ಯದ ಪೀಳಿಗೆ ನೆನಪಿಸಿಕೊಳ್ಳಬೇಕು ಎಂದು ಕುಮಾರ್ ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net