ನೀಟ್‌ ವಿವಾದಕ್ಕೆ ಬಿಗ್ ಟ್ವಿಸ್ಟ್!....ಇಂದು ರಾತ್ರಿ 8 ಗಂಟೆಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಪ್ರಕಟಣೆ! | Education Ministry

Education Ministry | .ಇಂದು ರಾತ್ರಿ 8 ಗಂಟೆಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಪ್ರಕಟಣೆ!
Education Ministry | .ಇಂದು ರಾತ್ರಿ 8 ಗಂಟೆಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಪ್ರಕಟಣೆ!
Published on
ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವಾಲಯ (Education Ministry) ಇಂದು ರಾತ್ರಿ 8 ಗಂಟೆಗೆ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಎನ್‌ಟಿಎ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಬೃಹತ್ ಸುಧಾರಣೆಗಳಿಗೆ ಸಜ್ಜಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದೇಶಾದ್ಯಂತ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ, ಶಿಕ್ಷಣ ಸಚಿವಾಲಯವು ಎನ್‌ಟಿಎ ರಚನೆ ಮತ್ತು ಪರೀಕ್ಷಾ ವಿಧಾನದಲ್ಲಿ ಬೃಹತ್ ಬದಲಾವಣೆಗಳನ್ನು ತರಲು ಮುಂದಾಗಿದೆ.

ಸಿಜೆಪಿ ಮತ್ತು ಜೆ ಪಿ ನಡ್ಡಾ ಸಭೆ!...

ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ನಿಯೋಗವು ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಸಭೆಯಲ್ಲಿ ಸಿಜೆಪಿ ನಾಯಕರು 3 ಪ್ರಮುಖ ಬೇಡಿಕೆಗಳು ಮತ್ತು 5 ಪ್ರಮುಖ ಪರೀಕ್ಷಾ ಸುಧಾರಣಾ ಪ್ರಸ್ತಾಪಗಳನ್ನು ಒಳಗೊಂಡ ಮನವಿ ಪತ್ರವನ್ನು ಸಚಿವರಿಗೆ ಹಸ್ತಾಂತರಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ನಡೆದ ಈ ಹೈ-ವೋಲ್ಟೇಜ್ ಸಭೆಯಲ್ಲಿ ತಕ್ಷಣಕ್ಕೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರವು ನಾಳೆಯವರೆಗೆ ಕಾಲಾವಕಾಶ ಕೇಳಿದ್ದು, ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಪ್ರಕಾರ, ಪ್ರಧಾನ್ ನಿರ್ಗಮನದ ವಿಷಯವನ್ನು ಕಾಯ್ದಿರಿಸಿದ ಸರ್ಕಾರ, ಉಳಿದ ಎರಡು ಬೇಡಿಕೆಗಳಿಗೆ ಭಾಗಶಃ ಒಪ್ಪಿಗೆ ನೀಡಿದೆ.

ಸಿಜೆಪಿಯ 3 ಪ್ರಮುಖ ಬೇಡಿಕೆಗಳು

1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು.
2. ನೀಟ್ ಅಕ್ರಮದಿಂದ ಸಂಕಷ್ಟಕ್ಕೆ ಈಡಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ ಪರಿಹಾರ ನೀಡಬೇಕು.
3. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್ ಮತ್ತು ಕಾನೂನು ಪ್ರಕರಣಗಳನ್ನು ಹಿಂಪಡೆಯಬೇಕು.
ಇದಕ್ಕೂ ಮುನ್ನ ಜುಲೈ 20 ರಂದು ಸಿಜೆಪಿ ನಿಯೋಗವು ಕೇಂದ್ರ ಸಚಿವ ಜೆ ಪಿ ನಡ್ಡಾರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಸಭೆಯ ನಂತರ ಮಾತನಾಡಿದ್ದ ನಡ್ಡಾ, ಚರ್ಚೆಗಳು ಸೌಹಾರ್ದಯುತವಾಗಿ ನಡೆದಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದು ಯಥಾಸ್ಥಿತಿ ಮರಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರು. ಶಿಕ್ಷಣ ಸಚಿವರ ರಾಜೀನಾಮೆ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಸಮಗ್ರ ಪರೀಕ್ಷಾ ಸುಧಾರಣೆಗಾಗಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಹೋರಾಟ ನಿರಂತರವಾಗಿ ಮುಂದುವರಿದಿದ್ದು, ಇಂದು ರಾತ್ರಿ 8 ಗಂಟೆಗೆ ಶಿಕ್ಷಣ ಸಚಿವಾಲಯ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net