ಫೋಟೋಗಾಗಿಯೇ ಕರೆದ್ರಾ? ಶಾಲೆಯ ಅವ್ಯವಸ್ಥೆ ಕಂಡು ಕಪಿಲ್ ದೇವ್ ಫುಲ್ ಕೆಂಡ! | Kapil Dev’s Angry

ಕಾರ್ಯಕ್ರಮ ಆಯೋಜಕರ ವಿರುದ್ಧ ಕಪಿಲ್ ದೇವ್ ಅಸಮಾಧಾನ
ಕಾರ್ಯಕ್ರಮ ಆಯೋಜಕರ ವಿರುದ್ಧ ಕಪಿಲ್ ದೇವ್ ಅಸಮಾಧಾನ
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಕಾರ್ಯಕ್ರಮದ ವ್ಯವಸ್ಥೆ ಸರಿಯಿಲ್ಲ ಎಂದು ಕಪಿಲ್ ದೇವ್ ಕಿಡಿ
  • ಫೋಟೋಗೆ ಮಾತ್ರ ಬರಬೇಕಿತ್ತು ಅಂದ್ರೆ ಮೊದಲೇ ಹೇಳಬೇಕಿತ್ತು- ಕಪಿಲ್
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕಪಿಲ್ ದೇವ್ ವಿಡಿಯೋ ವೈರಲ್
Kapil Dev’s Angry: ಮಾಜಿ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಶಾಲೆಯೊಂದರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಥಿತಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿನ ವ್ಯವಸ್ಥೆ ಕಂಡು ಆಯೋಜಕರ ವಿರುದ್ಧ ಅವರು ಗರಂ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು, ಕಾರ್ಯಕ್ರಮದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಸರಿದಾದ ಪ್ಲ್ಯಾನಿಂಗ್ ಇಲ್ಲದಿರುವುದಕ್ಕೆ ಕಪಿಲ್ ದೇವ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಶಾಲೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. 

ಶಿಕ್ಷಕರು ತುಂಬಾ ಮುಖ್ಯವಾದವರು, ಅವರಿಗೆ ಗೌರವ ಕೊಡಬೇಕು’

ಹೀಗೆ ಆದರೆ ಹೇಗೆ? ಎಂದು 

ಕಾರ್ಯಕ್ರಮ 

ಆಯೋಜಕರಿಗೆ ನೇರವಾಗಿ ಪ್ರಶ್ನೆ ಮಾಡಿ

ದ್ದಾರೆ.

ಕೇವಲ ಫೋಟೋಗಾಗಿ ಬರಬೇಕಿತ್ತಾ?

ಇನ್ನು, ತಮ್ಮನ್ನು ಕೇವಲ ಫೋಟೋ ತೆಗೆಸಿಕೊಳ್ಳಲು ಕರೆಯಲಾಗಿತ್ತು ಎಂಬ ಭಾವನೆ ಮೂಡಿದ್ದಕ್ಕೆ ಕಪಿಲ್ ಬೇಸರಗೊಂಡಿದ್ದಾರೆ. ‘ನಾನು ಕೇವಲ ಫೋಟೋಗಾಗಿ ಬರಬೇಕಿತ್ತು ಅಂತ ಮೊದಲೇ ಹೇಳಿದ್ದರೆ, ಅದಕ್ಕೆ ತಕ್ಕಂತೆ ಪ್ರತ್ಯೇಕ ಟೈಂ ಕೊಡುತ್ತಿದ್ದೆ. ಕಾರ್ಯಕ್ರಮಕ್ಕೆ ಅಂದರೆ ಕೆಲವು ರೂಲ್ಸ್​ ಇರಬೇಕು’ ಎಂದು ಕಪಿಲ್ ದೇವ್ ಹೇಳಿದ್ದಾರೆ. ಕಪಿಲ್ ದೇವ್ ಅವರ ಈ ನೇರ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮಗಳಲ್ಲಿ ಶಿಸ್ತು, ವ್ಯವಸ್ಥೆ ಮತ್ತು ಶಿಕ್ಷಕರಿಗೆ ಗೌರವ ನೀಡುವ ಅಗತ್ಯದ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.
ಭಾರತದ ಶ್ರೇಷ್ಠ ಕ್ರಿಕೆಟಿಗರು ಹಾಗೂ ನಾಯಕರಲ್ಲಿ ಒಬ್ಬರಾಗಿರುವ ಕಪಿಲ್ ದೇವ್, 1983ರಲ್ಲಿ ಭಾರತಕ್ಕೆ ಮೊದಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಧ್ಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಸಮಾಧಾನಗೊಂಡ ವಿಚಾರ ಈಗ ರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net