ಇನ್ನೊಂದೆಡೆ, ತಪಾಸಣೆ ವೇಳೆ ಎಕ್ಸ್ಪೈರ್ ಆದ ಮಟನ್, ಚಿಕನ್, ಮೀನು, ಕೊಳೆತ ತರಕಾರಿ, ಹಾಲು-ಮೊಸರು ಹಾಗೂ ಕಳಪೆ ಅಡುಗೆ ಎಣ್ಣೆ ಸೇರಿದಂತೆ ನೂರಾರು ಕೆಜಿ ಆಹಾರ ಪದಾರ್ಥವನ್ನು ಸೀಜ್ ಮಾಡಲಾಗಿದೆ. ನಿಯಮ ಉಲ್ಲಂಘಿಸದಂತೆ ಹೋಟೆಲ್ಗಳು, ಡಾಬಾಗಳಿಗೆ 10ರಿಂದ 15 ದಿನಗಳ ಗಡುವು ನೀಡಿದ್ದಾರೆ. ಮುಂದಿನ ತಪಾಸಣೆಯಲ್ಲಿ ಮತ್ತೆ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.