ಜೈಪುರದಲ್ಲಿ ಬೀದಿ ಕಾಮಣ್ಣರ ಅಟ್ಟಹಾಸ: ಬೈಕ್ ಸವಾರ ಯುವತಿ ಜೊತೆ ಅನುಚಿತ ವರ್ತನೆ; ವಿಡಿಯೋ ವೈರಲ್! Viral Video

ಬೈಕ್​ ಮೇಲಿದ್ದ ಯುವತಿ ಜೊತೆ ಅನುಚಿತ ವರ್ತನೆ
ಬೈಕ್​ ಮೇಲಿದ್ದ ಯುವತಿ ಜೊತೆ ಅನುಚಿತ ವರ್ತನೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನದ ಜೈಪುರದಲ್ಲಿ ಬೀದಿ ಕಾಮಣ್ಣರ ಹಾವಳಿ
  • ಬೈಕ್​ ಮೇಲಿದ್ದ ಯುವತಿ ಜೊತೆ ಅನುಚಿತ ವರ್ತನೆ
  • ನೆಟ್ಟಿಗರಿಂದ ಕಠಿಣ ಕ್ರಮಕ್ಕೆ ಆಗ್ರಹ
ಜೈಪುರ್​: ನಮ್ಮ ದೇಶದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಎಷ್ಟೇ ಕಾಳಜಿ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡರು ಸಹ ರೋಡ್​ ಸೈಡ್​ ರೋಮಿಯೋಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ಇತ್ತೀಚೆಗೆ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾನಲ್ಲಿ ವೈರಲ್ (Viral Video)​ ಆಗುತ್ತಿದ್ದು, ವಿಡಿಯೋ ನೋಡಿದ ಜನ ಆ ಯುವಕನ ಬಂಧನಕ್ಕೆ ಆಗ್ರಹಿಸಿದ್ದಾರೆ.

ವಿಡಿಯೋನಲ್ಲೇನಿದೆ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಒಬ್ಬ ಹುಡುಗಿ ಬೈಕ್​ನ ಹಿಂದೆ ಕುಳಿತು ರೋಡ್​​ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಆಗ ಇಬ್ಬರು ಯುವಕರು ಹಿಂದಿನಿಂದ ಬೈಕ್​ ಮೇಲೆ ಬಂದು, ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿ ಮುಂದೆ ಹೋಗುತ್ತಾರೆ.
ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ ಈ ಘಟನೆ ಬೆಳಗಿನ ಸಮಯದಲ್ಲಿ ನಡೆದಿದ್ದು, ಜೈಪುರದಲ್ಲಿ ಮಹಿಳೆಯರು ಬೆಳಗಿನ ವೇಳೆಯಲ್ಲೇ ಸುರಕ್ಷಿತವಾಗಿಲ್ಲ, ಇನ್ನು ರಾತ್ರಿಯ ವೇಳೆ ಹೇಗೋ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಫುಲ್​ ಗರಂ ಆಗಿದ್ದಾರೆ.
ಇಂತಹ ಜನರಿಗೆ ಕೂಡಲೇ ಕಾನೂನು ಕ್ರಮ ಕೈಗೊಂಡರೆ ಮಾತ್ರ ಸುಧಾರಿಸುತ್ತಾರೆ ಎಂದು ಒಬ್ಬರು ಹೇಳಿದರೆ, ಈ ಹುಡುಗನ ಮನೆಯಲ್ಲಿ ಯಾರು ಅಕ್ಕ-ತಂಗಿ ಇಲ್ಲವೆಂದು ಕಾಣುತ್ತದೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ಯುವಕ ಯಾರೆಂದು ಪತ್ತೆ ಮಾಡಿ ಕೂಡಲೇ ಪೊಲೀಸರು ತಮ್ಮ ಲಾಠಿ ರುಚಿ ತೋರಿಸಬೇಕೆಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net