ಉದ್ಯೋಗ ಕಡಿತದಿಂದ ಭಾರತದ ಆರ್ಥಿಕತೆಗಿಲ್ಲ ಗಂಡಾಂತರ! Indian economy

ಉದ್ಯೋಗ ಕಡಿತದಿಂದ ಭಾರತದ ಆರ್ಥಿಕತೆಗಿಲ್ಲ ಗಂಡಾಂತರ! Indian economy
ಉದ್ಯೋಗ ಕಡಿತದಿಂದ ಭಾರತದ ಆರ್ಥಿಕತೆಗಿಲ್ಲ ಗಂಡಾಂತರ! Indian economy
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ಉದ್ಯೋಗ ಕಡಿತ ನೋವಿನ ಸಂಗತಿಯಾದರೂ ಉದ್ಯೋಗದ ಅಂಕಿ-ಅಂಶಗಳು ಆರ್ಥಿಕ ಅಭಿವೃದ್ಧಿಯನ್ನು ಹಿಂಬಾಲಿಸುತ್ತವೆಯೇ ಹೊರತು ಮುನ್ನಡೆಸಲಾರವು
  • ಈಗಿನ ಉದ್ಯೋಗ ಕಡಿತ ಮತ್ತು ಕರ್ನಾಟಕದಲ್ಲಿ ವ್ಯಾಪಕ AI ಅಳವಡಿಕೆಯ ಚಿಂತೆ ಹೊರತಾಗಿಯೂ ಭಾರತೀಯ ಉದ್ಯೋಗ ಮಾರುಕಟ್ಟೆ ಅಂದುಕೊಂಡಿದ್ದಕ್ಕಿಂತ ಸುಭದ್ರವಾಗಿದೆ
  • ಭಾರತದ ನಿರುದ್ಯೋಗ ಹೆಚ್ಚಲಿ ಅಥವಾ ಬಿಡಲಿ ಗ್ರಾಹಕ ವೆಚ್ಚ ಮಾತ್ರ ಕುಸಿಯದು; ಏಕೆಂದರೆ ಅದು ಅಗತ್ಯ ವಸ್ತುಗಳಿಗಷ್ಟೆ ಸೀಮಿತ
ದೊಡ್ಡ ಮಟ್ಟದ ಉದ್ಯೋಗ ನಷ್ಟದ ಮಾತುಗಳಿಂದ ಕರ್ನಾಟಕದ ಆರ್ಥಿಕತೆಗೆ ( Indian economy ) ಏನರ್ಥ? ಉದ್ಯೋಗ ಕಳೆದುಕೊಂಡವರ ನೋವು ಕುಟುಕುತ್ತದೆ. ಅವರ ಬಗ್ಗೆ ನನಗೆ ಅನುಕಂಪವಿದೆ. ಆದರೂ, ಸಾಮೂಹಿಕ ಉದ್ಯೋಗ ನಷ್ಟ, ನಿಮ್ಮ ಆರ್ಥಿಕ ಭವಿಷ್ಯವನ್ನು ನಿರ್ಧರಿಸಲಾರದು. ಇದು ವಿಚಿತ್ರವೆನಿಸುತ್ತಿದೆಯೇ? ಖಂಡಿತಾ ಇಲ್ಲ.
ನಿರುದ್ಯೋಗ ಕುರಿತ ಇತ್ತೀಚಿನ ತಲೆಬರಹ ಸುದ್ದಿಗಳು ಸಾಮಾಜಿಕ ಕಾರಣಗಳನ್ನಷ್ಟೇ ಮುನ್ನೆಲೆಗೆ ತರುತ್ತಿವೆ. ಅವುಗಳ ಬಗ್ಗೆ ನಿಮ್ಮ ಆಲೋಚನೆಗಳು ಏನೇ ಇರಲಿ, ಒಟ್ಟಾರೆ ಆರ್ಥಿಕ ಪರಿಣಾಮವನ್ನು ಪೂರ್ವಾಗ್ರಹಕ್ಕೆ ಒಳಗಾಗದೇ ವಿಶ್ಲೇಷಿಸಬೇಕೆಂದರೆ ನಿಮ್ಮ ಭಾವನೆಗಳಿಗೆ ಜಾಗವಿರಬಾರದು. ಜಿಡಿಪಿ ನೈಜತೆಯನ್ನು ಮೌಲ್ಯಮಾಪನ ಮಾಡಲು ನಿಖರ ಅಂಶಗಳನ್ನಷ್ಟೇ ಪರಿಗಣಿಸಿ, ಅಭಿಪ್ರಾಯಗಳನ್ನಲ್ಲ.
ಉದ್ಯೋಗಗಳು ಜಾಗತಿಕ ಆರ್ಥಿಕತೆಗಳಿಗೆ ಕಲ್ಲಿದ್ದಲು ಗಣಿಯಲ್ಲಿನ ಕ್ಯಾನರಿ ಹಕ್ಕಿಯಂತೆ (ಮುನ್ಸೂಚಕ) ಎಂದು ಬಹುತೇಕ ಎಲ್ಲರೂ ಭಾವಿಸುತ್ತಾರೆ. ಖಂಡಿತ ತಪ್ಪು. ಅಸಂಬದ್ಧ ಆಲೋಚನೆ! ಉದ್ಯೋಗದ ಅಂಕಿ-ಅಂಶಗಳು ಮುಂದಿನ ಕೆಟ್ಟ (ಅಥವಾ ಒಳ್ಳೆಯ) ದಿನಗಳ ಮುನ್ಸೂಚನೆಯನ್ನು ಎಂದಿಗೂ ನೀಡಲಾರವು. ಅವು ಆರ್ಥಿಕತೆಯ ನಂತರದ ಸ್ಥಿತಿ ತೋರಿಸುವ ಸೂಚಕಗಳಷ್ಟೇ. ಯಾವಾಗಲೂ ಅಷ್ಟೇ! ಹಾಗಾಗಿ, ಉದ್ಯೋಗ ಕಡಿತ ನಿಮ್ಮ ಭವಿಷ್ಯದ ಮುನ್ನೋಟವನ್ನು ಕದಲಿಸದಿರಲಿ.
ಹೌದು, ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಟೆಕ್ ದೈತ್ಯ ಸಂಸ್ಥೆಗಳೂ ಒಳಗೊಂಡಂತೆ ಉದ್ಯೋಗ ಕಡಿತದ ಪ್ರಮಾಣ 2026 ರಲ್ಲಿ ಹೆಚ್ಚಾಗಿದೆ. ಒರಾಕಲ್ ತನ್ನ AI-ಕೇಂದ್ರಿತ ಜಾಗತಿಕ ಮರುರಚನೆಯ ಪ್ರಕ್ರಿಯೆಯ ನಡುವೆ ಏಪ್ರಿಲ್‌ನಲ್ಲಿ 12,000 ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿತು. ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್ 3,200 ಜಾಗತಿಕ ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ಇದು ಅನೇಕ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರಿನ ಫ್ಲಿಪ್‌ಕಾರ್ಟ್ ಸುಮಾರು 500 ಸ್ಥಳೀಯರನ್ನು ವಜಾಗೊಳಿಸಿತು. ವೀಸಾ, AI ದಕ್ಷತೆಯ ಕಾರ್ಯಾಚರಣೆಯನ್ನು ಉಲ್ಲೇಖಿಸಿ, ಬೆಂಗಳೂರು ಮೂಲದ 1,400 ಹುದ್ದೆಗಳನ್ನು ಕಡಿತಗೊಳಿಸಿತು.
ಇತ್ತೀಚಿನ ವರ್ಷಗಳಲ್ಲಿನ ಅತಿಯಾದ ನೇಮಕಾತಿ ಮತ್ತು ಕಳಪೆ ದಕ್ಷತೆಯನ್ನು ಮರೆಮಾಚಲು AIನ್ನು ಗುರಾಣಿಯಂತೆ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ನಾನು ಜೂನ್‌ನಲ್ಲಿ ಬರೆದಂತೆ, ಇದು ಕೃತಕ ಬುದ್ಧಿಮತ್ತೆಯಿಂದಾಗಿ ಸಾಮೂಹಿಕ ನಿರುದ್ಯೋಗ ಉಂಟಾಗುತ್ತದೆ ಎಂಬ ಆತಂಕವನ್ನು ಸುಳ್ಳು ಮಾಡುತ್ತದೆ. ಹಾಗಿದ್ದರೂ, ಉದ್ಯೋಗ ಕಳೆದುಕೊಳ್ಳುವ ವ್ಯಕ್ತಿಗಳಿಗೆ ಇದರಿಂದಾಗುವ ನೋವು ಮಾತ್ರ ಕಡಿಮೆಯಾಗುವುದಿಲ್ಲ.
ಒಟ್ಟಾರೆ, AI ಭಾರತೀಯ ಉದ್ಯೋಗವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಎಂಬ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಭವಿಷ್ಯವಾಣಿಯ ಹೊರತಾಗಿಯೂ ಭಾರತದ ಉದ್ಯೋಗ ಮಾರುಕಟ್ಟೆ ನಿರೀಕ್ಷೆಗಿಂತ ಹೆಚ್ಚು ಸುಭದ್ರವಾಗಿದೆ. ಜೂನ್ ತಿಂಗಳಲ್ಲಿ ಭಾರತದ ನಿರುದ್ಯೋಗ ದರಶೇ. 5.5 ರಷ್ಟೇ ಮುಂದುವರಿದಿದ್ದು, ಅಪೂರ್ಣ ಉದ್ಯೋಗದ ಆತಂಕಗಳು ಸಮರ್ಥನೀಯವಾಗಿದ್ದರೂ ಭಾರೀ ಉದ್ಯೋಗ ನಷ್ಟದ ಆತಂಕವನ್ನು ದೂರಮಾಡಿವೆ. ಅಮೆರಿಕದಲ್ಲಿ 2025 ಸಂಪೂರ್ಣವಾಗಿ ಉದ್ಯೋಗ ಕಡಿತಗಳೇ ಪ್ರಮುಖ ಸುದ್ದಿಗಳಾಗಿವೆ. ಭಾರೀ ಸರ್ಕಾರಿ ಉದ್ಯೋಗ ಕಡಿತದ ಹೊರತಾಗಿಯೂ, 2025 ರಲ್ಲಿ ಒಟ್ಟು ಪೇರೋಲ್ ಏರಿಕೆಯಾಗಿದೆ. ಅಮೆರಿಕದಲ್ಲಿ ಸಾಪ್ತಾಹಿಕ ನಿರುದ್ಯೋಗ ಭತ್ಯೆ ಅರ್ಜಿಗಳು ಇಳಿಮುಖವಾಗಿಯೇ ಉಳಿದಿವೆ.
ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಉದ್ಯೋಗಗಳನ್ನು ಲಿಂಕ್ ಮಾಢುವುದು ತಪ್ಪು. ಹೌದು, ಉದ್ಯೋಗ ಕಡಿತ ಕೊನೆಗೊಮ್ಮೆ ಜಿಡಿಪಿಗೆ ಹೊಡೆತ ನೀಡಬಹುದು ಎಂದೇ ಭಾಸವಾಗುತ್ತದೆ ಹೇಗೆ? ಗ್ರಾಹಕ ವೆಚ್ಚವು ಭಾರತದ ಜಿಡಿಪಿಯ ಶೇಕಡಾ 58 ಮತ್ತು ಅಮೆರಿಕದಲ್ಲಿ ಶೇಕಡಾ 68 ರಷ್ಟಿದೆ. ಹೆಚ್ಚು ಜನ ಉದ್ಯೋಗ ಕಳೆದುಕೊಂಡರೆ ಖರ್ಚು ಕಮ್ಮಿಯಾಗಬೇಕಲ್ಲವೆ? ಹಾಗಾಗುವುದಿಲ್ಲ! ನಿರುದ್ಯೋಗ ದರ ಏರಿದರೂ ಗ್ರಾಹಕ ವೆಚ್ಚ ಕುಸಿಯುವುದಿಲ್ಲ. ಹೇಗೆ? ಇದು ಯಾವಾಗಲೂ ಬೆರಗುಗೊಳಿಸುವಷ್ಟು ಸ್ಥಿರವಾಗಿರುತ್ದದೆ. ಆರ್ಥಿಕ ಹಿಂಜರಿತದ ಕಾಲದಲ್ಲಿ ಕೂಡ.
ಜಾಗತಿಕ ಮಟ್ಟದಲ್ಲಿ ಅಮೆರಿಕದ ಆರ್ಥಿಕ ಶಕ್ತಿಯನ್ನೇ ನೋಡಿ. 2007 - 2009 ರ ಜಾಗತಿಕ ಮಹಾ ಆರ್ಥಿಕ ಹಿಂಜರಿತದ ಸಮಯದಲ್ಲಿ ಅಮೆರಿಕದ ಜಿಡಿಪಿ ಶೇಕಡಾ -3.8 ರಷ್ಟು ಕುಸಿಯಿತು. ಅದೇ ಸಮಯದಲ್ಲಿ (ಹಣದುಬ್ಬರ-ಹೊಂದಾಣಿಕೆಯ) ಅಮೆರಿಕದ ಗ್ರಾಹಕರ ನೈಜ ವೆಚ್ಚವು ಕೇವಲ -2.3 ಶೇಕಡಾ ಕುಸಿಯಿತು. ಇದು ನಿರೀಕ್ಷೆಗಿಂತ ತೀರಾ ಕಡಿಮೆ! ಅಮೆರಿಕದ 2001ರ ಹಿಂಜರಿತದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿತ್ತು.
ಹೇಗೆ? ಇತ್ತೀಚೆಗೆ ಕೆಲಸ ಕಳೆದುಕೊಂಡ ಯಾರೇ ಆದರೂ ಐಷಾರಾಮಿ ಖರ್ಚುಗಳಿಂದ ದೂರವಿರುತ್ತಾರೆ. ಆದರೆ ಗ್ರಾಹಕರ ಖರ್ಚು ಮುಖ್ಯವಾಗಿ ದಿನಸಿ, ವಸತಿ ಮತ್ತು ವಿದ್ಯುತ್-ನೀರಿನಂತಹ ಅಗತ್ಯ ಸೇವೆಗಳ ಮೇಲೆಯೇ ಇರುತ್ತದೆ. ಇವುಗಳಲ್ಲಿ ಅಷ್ಟಾಗಿ ಏರಿಳಿತಗಳೇನೂ ಕಂಡುಬರುವುದಿಲ್ಲ. ಇವು ಅಲುಗಾಡದಷ್ಟು ಸ್ಥಿರವಾಗಿರುತ್ತವೆ.
ಮುಖ್ಯವಾಗಿ, ಉದ್ಯೋಗಗಳು ಆರ್ಥಿಕ ಬೆಳವಣಿಗೆಯನ್ನು ತಡವಾಗಿ ಪ್ರತಿಫಲಿಸುತ್ತವೆ. ಒಬ್ಬ ಸಿಇಒ ರೀತಿಯಲ್ಲಿ ಯೋಚಿಸಿ. ಆರ್ಥಿಕ ಹಿಂಜರಿತದಿಂದಾಗಿ ಮಾರಾಟ ಕುಸಿದಾಗ ಸಿಇಒಗಳು ಖರ್ಚು, ದಾಸ್ತಾನು ಮತ್ತು ವಿಸ್ತರಣಾ ಯೋಜನೆಗಳನ್ನು ಕಡಿತಗೊಳಿಸುತ್ತಾರೆ. ಉದ್ಯೋಗ ಕಡಿತಗಳು ಸಿಇಒಗಳು ಇಷ್ಟಪಡದ ಅಂತಿಮ ಅನಿವಾರ್ಯ ಉಪಾಯವಾಗಿವೆ. ಹೇಗೆ? ಉದ್ಯೋಗ ಕಡಿತಗಳು ಕಂಪನಿಯ ಹೆಸರು ಕೆಡಿಸುತ್ತವೆ, ಮಾಧ್ಯಮಗಳಲ್ಲಿ ಅಪಪ್ರಚಾರ, ಕಂಪೆನಿ ಸಂಸ್ಕೃತಿಗೆ ಧಕ್ಕೆ ಹಾಗು ಪ್ರತಿಯೊಬ್ಬರ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಪರಿಸ್ಥಿತಿ ಸುಧಾರಿಸಿದಾಗ ಅನುಭವಿ ಸಿಬ್ಬಂದಿಯನ್ನು ನೇಮಿಸಿಕೊಳ್ಳವುದು ದುಬಾರಿಯಾಗಲಿದೆ. ಕಂಪನಿಗಳು ಕಾನೂನಾತ್ಮಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 12,000 ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆ ಘೋಷಿಸಿದ ನಂತರ, ಯೂನಿಯನ್ ದೂರುಗಳು ಮತ್ತು ಕಾನೂನು ವಿವಾದಗಳ ಅಲೆಯನ್ನೇ ಎದುರಿಸಬೇಕಾಗಿದ್ದನ್ನು ನೀವು 2025 ರಲ್ಲಿ ನೋಡಿದ್ದೀರಿ.
ಅಲ್ಲದೆ ಆರ್ಥಿಕ ಸ್ಥಿತಿ ಸುಧಾರಿಸಲು ಆರಂಭಿಸಿದಂತೆ ಸಂಸ್ಥೆಗಳು ತ್ವರಿತವಾಗಿ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಸುಳ್ಳು ಚೇತರಿಕೆಯ ಹೊಡೆತ ತಪ್ಪಿಸಲು, ಮಾರಾಟದಲ್ಲಿ ಸ್ಥಿರತೆ ಬರುವವರೆಗೆ ಕಾಯುತ್ತವೆ. ಆರ್ಥಿಕತೆಯ ಏರಿಳಿತಗಳನ್ನೇ ಉದ್ಯೋಗಗಳು ಹಿಂಬಾಲಿಸುತ್ತವೆ. ಯಾವಾಗಲೂ ಅಷ್ಟೇ!
ಭಾರತದ ಇತ್ತೀಚಿನ ಜಿಡಿಪಿ ವಿರೋಧಾಭಾಸ ಪರಿಗಣಿಸಿದರೆ (2020ಕೋವಿಡ್ ಲಾಕ್ ಡೌನ್ - ಬಲವಂತದ ಕುಸಿತ ಹೊರತುಪಡಿಸಿ) ಮತ್ತೊಮ್ಮೆ ಅಮೆರಿಕದ ಉದಾಹರಣೆಯನ್ನೇ ಗಮನಿಸೋಣ. 2007-09ರ ಹಿಂಜರಿತದಲ್ಲಿ ಅಮೆರಿಕದ ಜಿಡಿಪಿ 2007ರ ಡಿಸೆಂಬರ್ ನಲ್ಲಿ ಗರಿಷ್ಠ ಮಟ್ಟದಲ್ಲಿತ್ತು. 2008 ರವರೆಗೂ ವೇತನಗಳು ಕುಸಿಯಲಿಲ್ಲ. ನಂತರ ಯುಎಸ್ ಜಿಡಿಪಿ 2009 ರ ಎರಡನೇ ತ್ರೈಮಾಸಿಕದಲ್ಲಿ ಪಾತಾಳ ಮುಟ್ಟಿದರೂ ಫೆಬ್ರವರಿ 2010ರವರೆಗೂ ವೇತನ ಕುಸಿತ ಮುಂದುವರಿಯಿತು. ಅಮೆರಿಕದಲ್ಲಿ 2001ರ ಆರ್ಥಿಕ ಹಿಂಜರಿತ ನವೆಂಬರ್‌ವರೆಗೆ ಇತ್ತು. ಆದರೂ ನಿರುದ್ಯೋಗ ದರಏಪ್ರಿಲ್ 2002 ರವರೆಗೆ ಗರಿಷ್ಠ ಮಟ್ಟತಲುಪಲಿಲ್ಲ. ಮೊದಲು ಬೆಳವಣಿಗೆ, ಬಳಿಕ ಉದ್ಯೋಗ. ಯಾವಾಗಲೂ. ಎಲ್ಲೆಡೆಯೂ.
ಉದ್ಯೋಗ ಕಡಿತದ ನೋವು ನಿಜವಾದದ್ದು. ಆದರೆ ಇವು ಇಂದು, ಎಂದೂ ಆರ್ಥಿಕ ಅಭಿವೃದ್ಧಿಯ ಮುನ್ಸೂಚಕಗಳಲ್ಲ. ಅಲ್ಲ. ಅನಗತ್ಯವಾಗಿ ಭಯಪಡಬೇಡಿ.

ಲೇಖಕರ ಬಗ್ಗೆ

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net