ಹುಲಿಗಳು ಸಾಮಾನ್ಯವಾಗಿ ಒಂಟಿ ಜೀವಿಗಳು. ಆದರೆ, ಸಂತಾನೋತ್ಪತ್ತಿ ಅವಧಿಯಲ್ಲಿ ಒಂಟಿಯಾಗಿರುವುದಿಲ್ಲ. ಅವು ಸಂಗಾತಿಯ ಜತೆಯಲ್ಲೇ ಸುತ್ತಾಡುತ್ತಿರುತ್ತವೆ. ಬಹುತೇಕ ಈ ಸಮಯವನ್ನು ತಮ್ಮ ಸಂಗಾತಿಯೊಂದಿಗೆ ಕಳೆಯುತ್ತವೆ. ಹುಲಿಗಳ ಗರ್ಭಾವಸ್ಥೆಯ ಅವಧಿ 105 ರಿಂದ 110 ದಿನಗಳು. ಅವು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಮರಿಗಳು ಕೇವಲ ಮೂರೇ ವರ್ಷಗಳಲ್ಲಿ ದೊಡ್ಡದಾಗುತ್ತದೆ. ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಹುಲಿಗಳ ಉಪಸ್ಥಿತಿ ಕಂಡುಬಂದರೆ, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು, (ಏಜೆನ್ಸೀಸ್).