ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ! ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆಗೆ ಕಪಿಲ್ ಸಿಬಲ್ ಆಕ್ರೋಶ; ಬಿಜೆಪಿಯಿಂದ ತಿರುಗೇಟು! Kapil Sibal on Abhishek Banerjee Attack

ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ: ಕಪಿಲ್ ಸಿಬಲ್​
ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ: ಕಪಿಲ್ ಸಿಬಲ್​
Published on

ಪ್ರಮುಖ ಮುಖ್ಯಾಂಶಗಳು

  • ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲೆ ಹಲ್ಲೆ
  • ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ: ಕಪಿಲ್ ಸಿಬಲ್​
  • ಇವರಿಗೆ ಬಿಜೆಪಿ ಮೇಲೆ ನಡೆದ ಹಲ್ಲೆಗಳು ಕಾಣಿಸುವುದೇ ಇಲ್ಲ: ಶೆಹಜಾದ್​ ಪೂನಾವಾಲಾ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಹಾಗೂ ಕಲ್ಯಾಣ್​ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ರಾಜ್ಯಸಭಾ ಸಂಸದ ಹಾಗೂ ಸುಪ್ರೀಂ ಕೋರ್ಟ್​ ಹಿರಿಯ ವಕೀಲ ಕಪಿಲ್​ ಸಿಬಲ್​ (Kapil Sibal on Abhishek Banerjee Attack) ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ!

ಪಶ್ಚಿಮ ಬಂಗಾಳದಲ್ಲಿ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ದೊರೆತದಿನದಿಂದ ವಿರೋಧ ಪಕ್ಷವನ್ನು ನಾಶಮಾಡಲು ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದ್ದಾರೆ.
ಅಭಿಷೇಕ್​ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆಯ ವಿಡಿಯೋಗಳನ್ನು ನಾನು, ಸೋಷಿಯಲ್​ ಮೀಡಿಯಾನಲ್ಲಿ ನೋಡಿದೆ. ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ನಿಜವಾಗಿದೆ. ಈ ರೀತಿ ವಿರೋಧ ಪಕ್ಷದ ನಾಯಕರನ್ನು ಮತ್ತು ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಮಾಡುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಏಕೆ ಮೌನವಹಿಸಿದೆ?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ದಿನದಿಂದ ಇವರ ಕಾರ್ಯಕರ್ತರು ಟಿಎಂಸಿಯ ಕಚೇರಿಗಳನ್ನು ನಾಯಕರ ಮನೆಗೆ ಬೆಂಕಿ ಹಚ್ಚುವುದನ್ನು ಮಾಡುತ್ತಿದ್ದಾರೆ. ಒಂದು ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಏಕೆ ಮೌನವಹಿಸಿದೆ? ಲೋಕಸಭೆಯ ಸ್ಪೀಕರ್​ ಆಗಲಿ, ಗೃಹ ಸಚಿವರಾಗಲಿ ಅಥವಾ ಬಂಗಾಲದ ಸಂಸದರಾಗಲಿ ಏಕೆ ಹೇಳಿಕೆಯನ್ನು ನೀಡುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.

ಕಪಿಲ್​ಗೆ ಶೆಹಜಾದ್​ ಕೌಂಟರ್​!

ಕಪಿಲ್ ಸಿಬಲ್​ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್​ ಪೂನಾವಲಾ, 2021 ರಲ್ಲಿ ಮಮತಾ ಸರ್ಕಾರ ಬಿಜೆಪಿ ಕಾರ್ಯಕರ್ತರ ನರಮೇಧ ಮಾಡಿದಾಗ ಈ ಕಪಿಲ್​ ಸಿಬಲ್​ ಎಲ್ಲಿಗೆ ಹೋಗಿದ್ದರು? ಪ್ರಧಾನಿಗಳನ್ನು ಕಳ್ಳ-ಕಳ್ಳ ಎಂದು ಕರೆದಾಗ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿಲ್ಲವೆ?
ಇವರಿಗೆ ಬಿಜೆಪಿ ಮೇಲೆ ಏನೇ ದಾಳಿಯಾದರೂ ಸಮಸ್ಯೆಯಾಗುವುದಿಲ್ಲ. ಅದೇ ಕಾಂಗ್ರೆಸ್​, ಸಮಾಜವಾದಿ ಪಕ್ಷ ಮತ್ತು ಟಿಎಂಸಿ ನಾಯಕರಿಗೆ ಏನಾದರೂ ಆದರೆ ಬೊಬ್ಬೆ ಹಾಕುತ್ತಾರೆಂದು ಕೌಂಟರ್​ ಕೊಟ್ಟಿದ್ದಾರೆ.

ಅಭಿಷೇಕ್​ ಬ್ಯಾನರ್ಜಿ ಮೇಲೆ ದಾಳಿ

ಶನಿವಾರ (ಮೇ.30) ದಕ್ಷಿಣದ 24 ಪರಣಗಣದ ಸೋನರ್​ಪುರ್​ನಲ್ಲಿ ಟಿಎಂಸಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲಿನಿಂದ ದಾಳಿ ನಡೆದಿದೆ.
ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದವರನ್ನು ನೋಡಲು ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.
ಇದೊಂದು ಬಿಜೆಪಿ ಪ್ರಾಯೋಜಿತ ಕೊಲೆಯತ್ನವಾಗಿದೆ. ನಾನು ಹೆಲ್ಮೆಟ್​ ಧರಿಸದೆ ಹೋಗದಿದ್ದರೆ ಹೆಣವಾಗುತ್ತಿದ್ದೆ, ನಾನು ಈ ಘಟನೆಯನ್ನು ನ್ಯಾಯಲಯ ಮತ್ತು ರಾಜ್ಯಪಾಲರ ಮುಂದೆ ಇಡಲಿದ್ದೆನೆಂದು ಅಭಿಷೇಕ್​ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net