ರೈಲು ಹೋಗಿ 3 ದಿನಗಳೇ ಆಯಿತು! ಭಾರತ ವಿರುದ್ಧ ಅಮೆರಿಕ ವ್ಯಂಗ್ಯ; ಏಷ್ಯಾದಲ್ಲೇ ದೇಶಕ್ಕೆ ಗರಿಷ್ಠ ಸುಂಕ | Narendra Modi

ನರೇಂದ್ರ ಮೋದಿ, ಹೊವಾರ್ಡ್ ಲುಟ್ನಿಕ್ ಮತ್ತು ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ, ಹೊವಾರ್ಡ್ ಲುಟ್ನಿಕ್ ಮತ್ತು ಡೊನಾಲ್ಡ್ ಟ್ರಂಪ್
Published on

ಪ್ರಮುಖ ಮುಖ್ಯಾಂಶಗಳು

  • ನರೇಂದ್ರ ಮೋದಿ, ಟ್ರಂಪ್​ಗೆ ಕರೆ ಮಾಡದ ಹಿನ್ನಲೆ ಮುರಿದು ಬಿದ್ದ ಒಪ್ಪಂದ
  • ಭಾರತ ಈಗ ಒಪ್ಪಂದಕ್ಕೆ ಸಿದ್ಧವಿದೆ ಎನ್ನುತ್ತಿದೆ : ಹೊವಾರ್ಡ್ ಲುಟ್ನಿಕ್
  • ರೈಲು ಸ್ಟೇಷನ್​ ಬಿಟ್ಟಾಗಿದೆ : ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವ್ಯಂಗ್ಯ
ಅಮೆರಿಕ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡದ ಕಾರಣ ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿಕೆ ನೀಡಿದ್ದಾರೆ.
ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ಟ್ರಂಪ್ ಅವರ ನೆಚ್ಚಿನ ಒಪ್ಪಂದವಾಗಿತ್ತು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು ಆದರೆ ಭಾರತದಿಂದ ಮೋದಿ ನಮ್ಮ ಅಧ್ಯಕ್ಷ (ಟ್ರಂಪ್) ರಿಗೆ ಕರೆ ಮಾಡಲಿಲ್ಲ. ಮುಂದಿನ ವಾರ ನಾವು ಇಂಡೋನೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂಗಳೊಂದಿಗೆ ಒಪ್ಪಂದಗಳನ್ನು ಘೋಷಿಸಿದ್ದೇವೆ ಎಂದು ಪಾಡ್​ಕಾಸ್ಟ್​ವೊಂದರಲ್ಲಿ ಅವರು ಮಾತನಾಡಿದರು.
ಜುಲೈ 2025 ರಲ್ಲಿ, ಯುರೋಪಿಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್, ಜಪಾನ್, ವಿಯೆಟ್ನಾಂ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಕೊರಿಯಾ ಜೊತೆಗಿನ ಸುಂಕ ಮಾತುಕತೆಗಳನ್ನು ಅಮೆರಿಕ ಮುಕ್ತಾಯಗೊಳಿಸಿತು. ಲುಟ್ನಿಕ್ ಅವರ ಇತ್ತೀಚಿನ ಬಹಿರಂಗಪಡಿಸುವಿಕೆಯ ಪ್ರಕಾರ, ಮಾತುಕತೆಗಳನ್ನು ಬೇಗನೆ ಮುಕ್ತಾಯಗೊಳಿಸಲು ಒಪ್ಪಿಕೊಂಡ ದೇಶಗಳು ಕಡಿಮೆ ಸುಂಕ ದರವನ್ನು ಅನುಭವಿಸಿದವು ಎನ್ನಲಾಗಿದೆ.
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಪ್ರಸ್ತುತ 50% ಸುಂಕ ವಿಧಿಸಲಾಗುತ್ತಿದೆ, ಇದು ಏಷ್ಯಾದಲ್ಲೇ ಅತ್ಯಧಿಕ ದರವಾಗಿದೆ. ಏಕೆಂದರೆ ನಾವು (ಯುಎಸ್) ಅವರೊಂದಿಗೆ (ಭಾರತ) ಮಾತುಕತೆ ನಡೆಸಿದ್ದೇವೆ ಮತ್ತು ಭಾರತವು ಅವರಿಗಿಂತ ಮೊದಲು (ಇತರ ಏಷ್ಯಾದ ದೇಶಗಳು) ಮುಗಿಯಲಿದೆ ಎಂದು ಭಾವಿಸಿತು ಎಂದರು. ಈಗ ಭಾರತ ಒಪ್ಪಂದಕ್ಕೆ ಸಿದ್ಧರಿದ್ದೇವೆ ಎಂದು ನನ್ನನ್ನು ಸಂಪರ್ಕಿಸಿದ್ದರು, ಅದಕ್ಕೆ ನಾನು 3 ವಾರಗಳ ಹಿಂದೆ ನಿಲ್ದಾಣದಿಂದ ಹೊರಟ ರೈಲಿಗೆ ನೀವು ಸಿದ್ಧರಿದ್ದೀರಾ? ಎಂದು ಹೇಳಿದೆ ಎಂದು ಹೇಳಿದರು.
ಟ್ರಂಪ್ ಶ್ವೇತಭವನಕ್ಕೆ ಮರು ಆಯ್ಕೆಯಾದ ನಂತರ ಅಮೆರಿಕಕ್ಕೆ ಭೇಟಿ ನೀಡಿದ ಮೊದಲಿಗರಲ್ಲಿ ಮೋದಿ ಒಬ್ಬರು. ಆದರೂ, ಅಮೆರಿಕ ಕಡೆಯಿಂದ ಬಂದ ಬೇಡಿಕೆಗಳ ಎದುರು ಭಾರತ ಕಠಿಣವಾಗಿ ನಡೆದುಕೊಂಡಿತು. ಭಾರತದೊಂದಿಗಿನ ಸುಂಕ ಒಪ್ಪಂದ ಸುಲಭ ಎಂದು ಟ್ರಂಪ್ ಕೂಡ ಒಪ್ಪಿಕೊಂಡಿದ್ದರು, ಆದರೆ ಅದು ಆಗಲಿಲ್ಲ ಎಂದು ಹೇಳಿದರು. ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಮಧ್ಯಸ್ತಿಕೆಯನ್ನು ಭಾರತ ನಿರಾಕರಿಸಿದ್ದು, ಮಾತುಕತೆಗಳನ್ನು ಕಠಿಣಗೊಳಿಸಿದವು.
ಇಬ್ಬರು ನಾಯಕರ ನಡುವೆ ಹಲವು ಸುತ್ತಿನ ಮಾತುಕತೆಗಳು ಮತ್ತು ನಾಲ್ಕು ಸಂಭಾಷಣೆಗಳ ಹೊರತಾಗಿಯೂ ಎರಡೂ ದೇಶಗಳ ನಡುವಿನ ಸಂಬಂಧಗಳು ಬಿಗಡಾಯಿಸಿವೆ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net