ಎರಡೂ ಎನ್​ಸಿಪಿ ಬಣ ಒಂದಾಗಲೂ ಕಾರ್ಯಕರ್ತರು ಬಯಸುತ್ತಿದ್ದಾರೆ: ಕುಟುಂಬದಲ್ಲಿ ಯಾವುದೇ ಸಮಸ್ಯೆಯಿಲ್ಲ: ಅಜಿತ್ ಪವಾರ್ | Ajit Pawar

ಮಾಜಿ ಸಿಎಂ ಶರದ್ ಪವಾರ್ ಮತ್ತು ಅಜಿತ್ ಪವಾರ್
ಮಾಜಿ ಸಿಎಂ ಶರದ್ ಪವಾರ್ ಮತ್ತು ಅಜಿತ್ ಪವಾರ್
Published on
ಮುಂಬೈ: ಮಹಾರಾಷ್ಟ್ರದ ರಾಜಕಾರಣದಲ್ಲಿ ಮತ್ತೆ ನಾಟಕೀಯ ಬೆಳವಣಿಗೆ ನಡೆಯುವ ಸಾಧ್ಯತೆಯಿದ್ದು, ಒಡೆದು ಎರಡೂ ಬಣಗಳಾಗಿರುವ ನ್ಯಾಷನಲಿಷ್ಟ್ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ಬಣಗಳು ಮತ್ತೆ ಒಂದಾಗುವ ಬಗ್ಗೆ ಬಹಿರಂಗವಾಗಿಯೇ ಮಹಾರಾಷ್ಟ್ರ ಡಿಸಿಎಂ ಮತ್ತು ಎನ್​ಸಿಪಿ ಪಕ್ಷದ ಮುಖ್ಯಸ್ಥ ಅಜಿತ್ ಪವಾರ್(DyCM Ajit Pawar) ಸೂಚನೆ ಕೊಟ್ಟಿದ್ದಾರೆ.
ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗಲು ಬಯಸುತ್ತಿದ್ದಾರೆ. ಪವಾರ್ ಕುಟುಂಬದೊಳಗೆ ಇದ್ದ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಶೀಘ್ರದಲ್ಲೇ ಎರಡೂ ಒಟ್ಟಿಗೆ ಬರಲಿವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಶಿವಸೇನಾ(ಯುಬಿಟಿ) ಒಂದಾಣಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಜ್ ಠಾಕ್ರೆ ಅವರ ಭಾಷಣವು ಮಿಮಿಕ್ರಿ ಮಾಡುವಂತಿದೆ. ಇದು ಅಲ್ಪಾವಧಿಗೆ ಮನರಂಜನೆ ನೀಡುತ್ತದೆ, ಅದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜ್ ಮತ್ತು ಉದ್ಧವ್ ಇಬ್ಬರೂ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ. 
ಮಹಾರಾಷ್ಟ್ರ ಮಾಜಿ ಸಿಎಂ ಶರದ್ ಪವಾರ್ ಸ್ಥಾಪಿಸಿದ್ದ ಎನ್​ಸಿಪಿ ಪಕ್ಷವು, 2022ರಲ್ಲಿ ಸಹೋದರ ಸಂಬಂಧಿ ಅಜಿತ್ ಪವಾರ್ ಅವರಿಂದ ಒಡೆದು ಎರಡು ಬಣವಾಯಿತು. ಮುಂದೆ ಅಜಿತ್ ಪವಾರ್ ಎನ್​ಡಿಎ ಮೈತ್ರಿಕೂಟ ಸೇರಿ ಮಹಾರಾಷ್ಟ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದರು. ಅಜಿತ್ ಪವಾರ್ ಬಣ ಗಡಿಯಾರ ಚಿಹ್ನೆಯನ್ನು ಹೊಂದಿದರೆ, ಶರದ್ ಪವಾರ್ ಬಣ ಹೊಸದಾಗಿ ಟ್ರಂಪೆಟ್ ಚಿಹ್ನೆಯನ್ನು ಹೊಂದಿದೆ. 
ಪ್ರಸ್ತುತ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ, ಅದರಲ್ಲೂ ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆ ಚುನಾವಣೆಗೆ ಎರಡೂ ಬಣಗಳು ಒಂದಾಗಿ ಬಿಜೆಪಿ ವಿರುದ್ಧ ಸ್ಪರ್ಧೆ ನಡೆಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net