ಅಣ್ಣ ನಿಧನರಾದ ಬಳಿಕ ಅದು ಕೊನೆಗೊಂಡಿದೆ; ಎನ್​ಸಿಪಿ ಬಣಗಳ ವಿಲೀನ ಊಹಾಪೋಹಕ್ಕೆ ಪೂರ್ಣ ವಿರಾಮವಿಟ್ಟ ಸುಪ್ರಿಯಾ ಸುಳೆ | Supriya Sule

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಎರಡು ಬಣಗಳ ನಡುವಿನ ಸಂಭಾವ್ಯ ವಿಲೀನ ಊಹಾಪೋಹಗಳಿಗೆ ಪೂರ್ಣವಿರಾಮ ಇಟ್ಟಿರುವ ಶರದ್ ಪವಾರ್ ಅವರ ಪುತ್ರಿ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ತಮ್ಮ ಸಹೋದರ ಅಜಿತ್ ಪವಾರ್ ನಿಧನದ ಬಳಿಕ ಈ ವಿಷಯದ ಕುರಿತು ಚರ್ಚೆಗಳು ಕೊನೆಗೊಂಡಿವೆ ಎಂದು ಹೇಳಿದ್ದಾರೆ.
ಅಣ್ಣ ನಿಧನರಾದ ಬಳಿಕ ಅದು ಕೊನೆಗೊಂಡಿದೆ; ಎನ್​ಸಿಪಿ ಬಣಗಳ ವಿಲೀನ ಊಹಾಪೋಹಕ್ಕೆ ಪೂರ್ಣ ವಿರಾಮವಿಟ್ಟ ಸುಪ್ರಿಯಾ ಸುಳೆ | Supriya Sule
Published on: 

ಮುಂಬೈ: ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಎರಡು ಬಣಗಳ ನಡುವಿನ ಸಂಭಾವ್ಯ ವಿಲೀನ ಊಹಾಪೋಹಗಳಿಗೆ ಪೂರ್ಣವಿರಾಮ ಇಟ್ಟಿರುವ ಶರದ್ ಪವಾರ್ ಅವರ ಪುತ್ರಿ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ತಮ್ಮ ಸಹೋದರ ಅಜಿತ್ ಪವಾರ್ ನಿಧನದ ಬಳಿಕ ಈ ವಿಷಯದ ಕುರಿತು ಚರ್ಚೆಗಳು ಕೊನೆಗೊಂಡಿವೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಇದನ್ನು ಪದೇ ಪದೇ ಹೇಳಿದ್ದೇನೆ. ನಾನು ನನ್ನ ಕೈಗಳನ್ನು ಜೋಡಿಸಿ ಮತ್ತೊಮ್ಮೆ ಹೇಳುತ್ತಿದ್ದೇನೆ, ಬಹಳ ಸ್ಪಷ್ಟವಾಗಿ. ನನಗೆ ಈ ವಿಷಯದಿಂದ ಬೇಸರವಾಗಿದೆ. ನಾವು ವಿಷಯದ ಬಗ್ಗೆ ಪೂರ್ಣವಿರಾಮ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಸಹೋದರ ಅಜಿತ್ ಪವಾರ್ ಜೊತೆ ವಿಲೀನದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು ಎಂದಿರುವ ಅವರು, ದಿನಾಂಕವನ್ನು ಸಹ ನಿರ್ಧರಿಸಲಾಗಿತ್ತು. ಆದರೆ ಆತ ನಿಧನರಾದ ಬಳಿಕ ನಾವು ನಮ್ಮ ಕಡೆಯಿಂದ ಈ ವಿಷಯಕ್ಕೆ ಪೂರ್ಣ ವಿರಾಮ ಹಾಕಿದ್ದೇವೆ. ಈ ವಿಷಯದ ಬಗ್ಗೆ ಮತ್ತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕುಟುಂಬ ಸಂಬಂಧಗಳನ್ನು ರಾಜಕೀಯದೊಂದಿಗೆ ಬೆರೆಸಬೇಡಿ ಎಂದಿದ್ದಾರೆ.

Also Read
ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ, ಜಾಸ್ತಿ ನಂಬಬೇಡಿ: ಸಿಎಂ ವಿಜಯ್​​​ಗೆ ಎಚ್ಚರಿಸಿದ ರಾಮ್ ಮಾಧವ್ | Ram Madhav
ಅಣ್ಣ ನಿಧನರಾದ ಬಳಿಕ ಅದು ಕೊನೆಗೊಂಡಿದೆ; ಎನ್​ಸಿಪಿ ಬಣಗಳ ವಿಲೀನ ಊಹಾಪೋಹಕ್ಕೆ ಪೂರ್ಣ ವಿರಾಮವಿಟ್ಟ ಸುಪ್ರಿಯಾ ಸುಳೆ | Supriya Sule

ಇದೇ ವೇಳೆ ಸುನಿಲ್ ತತ್ಕರೆ, ಛಗನ್ ಭುಜಬಲ್ ಮತ್ತು ಪ್ರಫುಲ್ ಪಟೇಲ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ನಮ್ಮ ತಂದೆ ಶರದ್ ಪವಾರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ನನ್ನ ಪಾಲನೆ-ಪೋಷಣೆ ನನಗೆ ಅವರ ಬಗ್ಗೆ ಯಾವುದೇ ನಕಾರಾತ್ಮಕ ವಿಷಯವನ್ನು ಹೇಳಲು ಅವಕಾಶ ನೀಡುವುದಿಲ್ಲ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ, ಆದರೆ ಕುಟುಂಬವು ಒಟ್ಟಿಗೆ ಇರುತ್ತದೆ ಎಂದು ಹೇಳಿದ್ದಾರೆ.

ಪಕ್ಷಾತೀತ ರಾಜಕೀಯ ಸಂಬಂಧಗಳನ್ನು ನೆನಪಿಸಿಕೊಂಡ ಸುಳೆ, ತಮ್ಮ ಪಕ್ಷವು ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಹಲವಾರು ಸಂದರ್ಭಗಳಲ್ಲಿ ಹೊಗಳಿದೆ. ಪಹಲ್ಗಾಮ್ ಘಟನೆಯ ಸಮಯದಲ್ಲಿ ಶರದ್ ಪವಾರ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. 2023ರಲ್ಲಿ ನಡೆದದ್ದು ಈಗಾಗಲೇ ಸಂಭವಿಸಿದೆ, ಆದರೆ ನಮ್ಮ ಕುಟುಂಬ ಸಂಬಂಧಗಳು ಆಗಲೂ ಇದ್ದವು ಮತ್ತು ಇಂದಿಗೂ ಅಸ್ತಿತ್ವದಲ್ಲಿವೆ ಎಂದು ತಿಳಿಸಿದ್ದಾರೆ.

ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರ ಹೇಳಿಕೆ ಮತ್ತು ಸಾಮ್ನಾ ಪತ್ರಿಕೆ ಸಂಪಾದಕೀಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಜಯ್ ರಾವುತ್ ಒಬ್ಬ ಪ್ರಮುಖ ನಾಯಕ ಮತ್ತು ಹಿರಿಯ ಸಹೋದರ. ತಮ್ಮ ಮನಸ್ಸಿನಲ್ಲಿರುವುದನ್ನು ಹೇಳುವ ಹಕ್ಕು ಅವರಿಗಿದೆ. ಅವರಿಗೆ ಏನಾದರೂ ಅನಿಸಿದರೆ, ಖಂಡಿತವಾಗಿಯೂ ಅದರ ಬಗ್ಗೆ ಬರೆಯುವ ಹಕ್ಕು ಅವರಿಗಿದೆ. ಇಂತಹ ಸಂಪಾದಕೀಯಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ (ಏಜೆನ್ಸೀಸ್).