ತಿರುವನಂತಪುರಂ: ಟಿ20 ವಿಶ್ವಕಪ್ 2026ರ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ(India) ತನ್ನ ಭೀಕರ ಫಾರ್ಮ್ ಪ್ರದರ್ಶಿಸಿದೆ. ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಕ್ಷರಶಃ ರನ್ ಮಳೆ ಹರಿಸಿದ ಭಾರತ, ಇಶಾನ್ ಕಿಶನ್ ಅವರ ಅಮೋಘ ಶತಕ ಮತ್ತು ಶಿವಂ ದುಬೆ ಅವರ ಅಂತಿಮ ಓವರ್‌ನ ಸಿಕ್ಸರ್ ನೆರವಿನಿಂದ 20 ಓವರ್‌ಗಳಲ್ಲಿ 271/5 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ.