ಪ್ರೀತಿಯಲ್ಲಿ ಹೆಚ್ಚು ಬೀಳೋದು ಹುಡುಗನಾ, ಹುಡುಗಿನಾ..? ಸಂಶೋಧನೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ..! Love

ಪ್ರೀತಿಯಲ್ಲಿ ಹೆಚ್ಚು ಬೀಳೋದು ಹುಡುಗನಾ, ಹುಡುಗಿನಾ..? ಸಂಶೋಧನೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ..!
ಪ್ರೀತಿಯಲ್ಲಿ ಹೆಚ್ಚು ಬೀಳೋದು ಹುಡುಗನಾ, ಹುಡುಗಿನಾ..? ಸಂಶೋಧನೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ..!
Published on
ನ್ಯೂಯಾರ್ಕ್: ಪ್ರೀತಿ ಎನ್ನುವುದು ನಿಗೂಢ ಮತ್ತು ರೋಚಕ. ಆದರೆ, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟು ಬಾರಿ ಅತ್ಯಂತ ತೀವ್ರವಾಗಿ ಅಥವಾ ಹುಚ್ಚುಚ್ಚಾಗಿ ಪ್ರೀತಿಯಲ್ಲಿ(Love) ಬೀಳುತ್ತಾನೆ? ಈ ಪ್ರಶ್ನೆಗೆ ಅಮೆರಿಕದ ಪ್ರಸಿದ್ಧ ಕಿನ್ಸೆ ಇನ್‌ಸ್ಟಿಟ್ಯೂಟ್ ತನ್ನ ಇತ್ತೀಚಿನ ಬೃಹತ್ ಸಂಶೋಧನೆಯ ಮೂಲಕ ಉತ್ತರ ಕಂಡುಕೊಂಡಿದೆ. ಸಂಶೋಧನೆಯ ಪ್ರಕಾರ, ಬಹುತೇಕ ಮಂದಿ ತಮ್ಮ ಇಡೀ ಜೀವನದಲ್ಲಿ ಕೇವಲ ಎರಡು ಬಾರಿ ಮಾತ್ರ ಅಂತಹ ತೀವ್ರವಾದ ಪ್ರೀತಿಯ ಅನುಭವ ಪಡೆಯುತ್ತಾರಂತೆ ಎಂದು ತಿಳಿದು ಬಂದಿದೆ.

ಸಂಶೋಧನೆಯ ಪ್ರಮುಖ ಅಂಕಿ-ಅಂಶಗಳು

ಇಂಡಿಯಾನಾ ವಿಶ್ವವಿದ್ಯಾನಿಲಯದ ಕಿನ್ಸೆ ಇನ್‌ಸ್ಟಿಟ್ಯೂಟ್‌ನ ಪ್ರಮುಖ ಸಂಶೋಧಕಿ ಡಾ. ಅಮಂಡಾ ಗೆಸೆಲ್‌ಮನ್ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಸುಮಾರು 10,036 ಅಮೆರಿಕನ್ನರನ್ನು ಸಮೀಕ್ಷೆಗೆ ಒಳಪಡಿಸಿದಾಗ ಸಿಕ್ಕ ಫಲಿತಾಂಶಗಳು ಇಲ್ಲಿವೆ.
ಸರಾಸರಿ ಅನುಭವ: ಸಮೀಕ್ಷೆಯಲ್ಲಿ ಭಾಗವಹಿಸಿದವರು ತಮ್ಮ ಜೀವಿತಾವಧಿಯಲ್ಲಿ ಸರಾಸರಿ 2.05 ಬಾರಿ ತೀವ್ರ ಪ್ರೀತಿಯ ಅನುಭವ ಪಡೆದಿರುವುದಾಗಿ ತಿಳಿಸಿದ್ದಾರೆ.
ಶೇ. 14ರಷ್ಟು ಮಂದಿ: ಈ ಗುಂಪಿನ ಜನರಿಗೆ ತಮ್ಮ ಇಡೀ ಜೀವನದಲ್ಲಿ ಒಮ್ಮೆಯೂ ತೀವ್ರವಾದ ಪ್ರೀತಿಯ ಅನುಭವ ಆಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಶೇ. 30ರಷ್ಟು ಮಂದಿ ಸರಿಯಾಗಿ ಎರಡು ಬಾರಿ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಶೇ. 11ರಷ್ಟು ಮಂದಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪ್ರೀತಿಯ ಉತ್ತುಂಗ ಅನುಭವಿಸಿದ್ದಾರೆ.

ಲಿಂಗ ಮತ್ತು ವಯಸ್ಸಿನ ವ್ಯತ್ಯಾಸಗಳು

ಈ ಅಧ್ಯಯನವು ಕೇವಲ ಸಂಖ್ಯೆಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಲಿಂಗಾಧಾರಿತ ವ್ಯತ್ಯಾಸಗಳನ್ನೂ ಗುರುತಿಸಿದೆ.
ಪುರುಷರೇ ಮುಂದು: ಸಂಶೋಧನೆಯ ಪ್ರಕಾರ, ಮಹಿಳೆಯರಿಗಿಂತ ಪುರುಷರು ಸ್ವಲ್ಪ ಹೆಚ್ಚಿನ ಬಾರಿ ತೀವ್ರ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಹೆಟೆರೊಸೆಕ್ಷುವಲ್ ಪುರುಷರಲ್ಲಿ ಈ ಸಂಖ್ಯೆ ತುಸು ಹೆಚ್ಚುಗಿದೆ ಎಂದು ಅಧ್ಯಯನ ಹೇಳಿದೆ.
ವಯಸ್ಸಾದಂತೆ ಒಲವು ಹೆಚ್ಚು: ಹಿರಿಯ ವಯಸ್ಕರು ಯುವಕರಿಗಿಂತ ಹೆಚ್ಚಿನ ಪ್ರೇಮದ ಅನುಭವಗಳನ್ನು ವರದಿ ಮಾಡಿದ್ದಾರೆ. ಇದು ಸಹಜವಾಗಿಯೇ ಅವರು ಜೀವನದಲ್ಲಿ ಹೆಚ್ಚಿನ ಸಮಯ ಮತ್ತು ಹೆಚ್ಚಿನ ಜನರನ್ನು ಭೇಟಿಯಾಗುವ ಅವಕಾಶ ಪಡೆದಿರುವುದರಿಂದ ಸಂಭವಿಸುತ್ತದೆ.

ನಿರಾಸೆ ಬೇಡ, ಇದು ನಾರ್ಮಲ್

ಸಿನೆಮಾಗಳು ಮತ್ತು ಸಾಹಿತ್ಯದಲ್ಲಿ ತೋರಿಸುವಂತೆ ಪ್ರೀತಿಯು ಪ್ರತಿಬಾರಿ ಅತೀವ ತೀವ್ರತೆಯಿಂದ ಕೂಡಿರಬೇಕಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಜನರು ಪ್ರೀತಿಯಲ್ಲಿ ಬೀಳುವ ಬಗ್ಗೆ ಸದಾ ಮಾತನಾಡುತ್ತಾರೆ. ಆದರೆ ವಿಜ್ಞಾನದ ಪ್ರಕಾರ ಇದು ಅಪರೂಪದ ಘಟನೆಯಾಗಿದೆ. ಒಮ್ಮೆ ಪ್ರೀತಿ ವಿಫಲವಾದರೆ ಅಥವಾ ತೀವ್ರ ಭಾವನೆಗಳು ಕಾಣಿಸದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಇದು ಮನುಷ್ಯನ ಸಹಜ ವರ್ತನೆ ಎಂದು ಡಾ. ಗೆಸೆಲ್‌ಮನ್ ತಿಳಿಸಿದ್ದಾರೆ.
ಪ್ರೀತಿಯ ಆರಂಭಿಕ ಹಂತದಲ್ಲಿರುವ ತೀವ್ರತೆ ಕಾಲಾನಂತರದಲ್ಲಿ ಆಳವಾದ ಒಡನಾಟ ಮತ್ತು ನಂಬಿಕೆಯ ಪ್ರೀತಿಯಾಗಿ ಬದಲಾಗುತ್ತದೆ. ಈ ಅಧ್ಯಯನವು ಪ್ರೇಮದ ಬಗ್ಗೆ ಇದ್ದ ಅತಿಯಾದ ನಿರೀಕ್ಷೆಗಳನ್ನು ಮರುಪರಿಶೀಲಿಸುವಂತೆ ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net