ಹುಟ್ಟುಹಬ್ಬಕ್ಕೆಂದು ಹೋದ ಮಗಳು ಹೆಣವಾಗಿ ವಾಪಸ್​: ಪ್ರೀಯಕರನಿಂದಲೇ ಹತ್ಯೆಯಾದಳಾ ಎಂಬಿಎ ವಿದ್ಯಾರ್ಥಿನಿ? MBA Student

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀಯಕರನಿಂದ ಪ್ರೇಯಸಿಯ ಕೊಲೆ ಶಂಕೆ
  • ಎರಡು ದಿನಗಳ ನಂತರ ಇಂದೋರ್​ನ ಎಂಬಿಎ ವಿದ್ಯಾರ್ಥಿನಿ ಶವ ಪತ್ತೆ
  • ಪರಾರಿಯಾಗಿರುವ ಯುವಕ, ಹುಡುಕಾಟದಲ್ಲಿ ಖಾಕಿ
ಇಂದೋರ್‌: ಎರಡು ದಿನಗಳಿಂದ ನಾಪತ್ತೆಯಾಗಿದ್ದ 24 ವರ್ಷದ ಎಂಬಿಎ ವಿದ್ಯಾರ್ಥಿನಿ (MBA Student) ಶುಕ್ರವಾರ (ಫೆ.13) ಇಂದೋರ್‌ನ ತನ್ನ ಸಹಪಾಠಿಯ ಬಾಡಿಗೆ ಮನೆಯೊಳಗೆ ಶವವಾಗಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಿದ್ದು, ಆಕೆಯ ಗೆಳೆಯ/ಪ್ರಿಯಕರನನ್ನು ಪ್ರಮುಖ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಆದರೆ ಅವನು ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ.

ದುರ್ವಾಸನೆ ಕಾರಣ ಶವ ಪತ್ತೆ

ಸ್ಥಳೀಯ ಕಾಲೇಜೊಂದರಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ, ಫೆಬ್ರವರಿ 11 ರಂದು ಮನೆಯಿಂದ ಹೊರಟು, ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದಳು. ಆದರೆ ಆಕೆ ಕತ್ತಲಾದರೂ ಮನೆಗೆ ಹಿಂದಿರುಗದ ಕಾರಣ ಗಾಬರಿಗೊಂಡ ಮನೆಯವರು ಪಂಢರಿನಾಥ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರನ್ನು ದಾಖಲಿಸಿದರು.
ದ್ವಾರಕಾಪುರಿಯ ನಿವಾಸಿಗಳು ತಮ್ಮ ನೆರೆಯ ಬೀಗ ಹಾಕಿದ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣವು ಚಕಿತಗೊಳಿಸುವ ತಿರುವು ಪಡೆದುಕೊಂಡಿತು. ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ.
ಮೃತದೇಹ ಬೆತ್ತಲೆಯಾಗಿ ಪತ್ತೆಯಾಗಿದ್ದು, ಸುಮಾರು ಎರಡು ದಿನಗಳ ಹಳೆಯದಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಶ್ರೀ ಕೃಷ್ಣ ಲಾಲ್‌ಚಂದಾನಿ ಹೇಳಿದ್ದಾರೆ. ಅವಳು ಎರಡು ದಿನಗಳ ಹಿಂದೆ ಕತ್ತು ಹಿಸುಕಿ ಸಾವನ್ನಪ್ಪಿರುವಂತೆ ಕಂಡುಬಂದಿದೆ, ಆದರೆ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ನಿಖರವಾದ ಕಾರಣವನ್ನು ದೃಢಪಡಿಸಲಾಗುವುದು ಎಂದು ಅವರು ಹೇಳಿದರು.

ಬ್ಲ್ಯಾಕ್‌ಮೇಲ್ ಮತ್ತು ಖಾಸಗಿ ಫೋಟೋ ಹರಿಬಿಟ್ಟ ಆರೋಪ

ಸಂತ್ರಸ್ತ ಮಹಿಳೆಯ ತಂದೆ ಆರೋಪಿಸಿರುವ ಪ್ರಕಾರ, ಶಂಕಿತ ವ್ಯಕ್ತಿ ತನ್ನ ಮಗಳ ಮೇಲೆ ಹಣಕ್ಕಾಗಿ ಒತ್ತಡ ಹೇರುತ್ತಿದ್ದ ಮತ್ತು ಅವಳು ಒಪ್ಪದಿದ್ದರೆ ಆಕೆಯ ಖಾಸಗಿ ಫೋಟೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಅವರು ಆರೋಪಿಸಿದ್ದಾರೆ.
ಮಂಡ್ಸೌರ್ ಮೂಲದ ಮತ್ತು ಇಂದೋರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹುಡುಗನೇ ಈ ಪ್ರಕರಣದ ಪ್ರಮುಖ ಶಂಕಿತ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅವರ ಪ್ರಣಯ ಸಂಬಂಧದಲ್ಲಿ ವಿವಾದ ಪ್ರಾರಂಭವಾದ ಹಿನ್ನಲೆ ಕೊಲೆ ನಡೆದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆಕೆ ಕಾಣೆಯಾಗಿದ್ದಾಳೆಂದು ವರದಿ ಮಾಡಿದ ಕೆಲವು ದಿನಗಳ ನಂತರ, ಮೃತದೇಹವನ್ನು ಗುರುತಿಸಲು ಕುಟುಂಬವನ್ನು ಕರೆಯಲಾಯಿತು. ನಾವು ತೋರಿಸಿದ ಮೃತ ದೇಹವನ್ನು ನೋಡಿದ ಸಂತೃಸ್ತೆಯ ತಂದೆ ಆಕೆ ತೊಟ್ಟಿದ್ದ ಸಾಕ್ಸ್​ನ್ನು ಗುರುತಿಸಿ ಹೆಣ ತನ್ನ ಮಗಳದ್ದೇ ಎಂದು ದೃಢಪಡಿಸಿದ್ದಾರೆ ಎಂದು ಡಿಸಿಪಿ ಲಾಲ್‌ಚಂದಾನಿ ಹೇಳಿದರು.
ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಮೊಬೈಲ್ ಫೋನ್‌ಗಳು ಮತ್ತು ಆನ್‌ಲೈನ್ ಸಂವಹನ ಸೇರಿದಂತೆ ಡಿಜಿಟಲ್ ಪುರಾವೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ರ್ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಅವರು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net