ಇನ್ನು ದೆಹಲಿಯಲ್ಲಿ ಮಮತಾ ಹಾಗೂ ಸೋನಿಯಾ ಗಾಂಧಿ ಅವರ ಭೇಟಿಯ ನಂತರ ಹರಿದಾಡುತ್ತಿರುವ ಟಿಎಂಸಿ-ಕಾಂಗ್ರೆಸ್ ವಿಲೀನದ ವದಂತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಘೋಷ್, ಆ ಮಹತ್ವದ ಸಭೆಯಲ್ಲಿ ನಾನಂತೂ ಇರಲಿಲ್ಲ, ಈ ಬಗ್ಗೆ ನನ್ನ ಅಭಿಪ್ರಾಯವನ್ನೂ ಯಾರೂ ಕೇಳಿಲ್ಲ. ಮಮತಾ ಅವರು ಅತ್ಯಂತ ಹಿರಿಯ ಮತ್ತು ಅನುಭವವಿರುವ ನಾಯಕಿಯಾಗಿದ್ದಾರೆ. ಅಲ್ಲದೆ, ಪಕ್ಷದ ಭವಿಷ್ಯದ ಬಗ್ಗೆ ಅವರು ಏನು ಮಾಡಬೇಕು ಎನ್ನುವುದು ಅವರ ವೈಯಕ್ತಿಕ ಇಚ್ಛೆಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಹಿರಿಯ ನಾಯಕರ ರಾಜೀನಾಮೆ ಮತ್ತು ಬಹಿರಂಗ ಬಂಡಾಯದಿಂದಾಗಿ ಮಮತಾ ಪಾಳಯದಲ್ಲಿ ಈಗ ತಲ್ಲಣ ಸೃಷ್ಟಿಯಾಗಿದೆ,(ಏಜೆನ್ಸೀಸ್).