ಪ್ರಧಾನಿ ಮೋದಿ ಅವರು ತಮ್ಮ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಅಚ್ಚರಿ ವ್ಯಕ್ತಪಡಿಸಿರುವ ಯುವರಾಜ್ ದುವಾ, ಈ ವಿಡಿಯೋ ಇಲ್ಲಿಯವರೆಗೆ ತಲುಪುತ್ತದೆ ಎಂದು ನಾನು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ. ಇದು ನಂಬಲು ಅಸಾಧ್ಯವಾಗಿದೆ. ಆದರೂ, ತುಂಬಾ ಖುಷಿಯಾಗಿದೆ ಎಂದು ದುವಾ ಹೇಳಿದ್ದಾರೆ. ಇತರೆ ನೆಟ್ಟಿಗರು ಕೂಡ ದುವಾರನ್ನು ಹೊಗಳುತ್ತಿದ್ದಾರೆ. ಮೋದಿಜಿಯ ಸ್ಟೋರಿ ನೋಡಿ ನಾನು ನಿಮ್ಮ ರೀಲ್ ನೋಡಲು ಬಂದಿದ್ದೇನೆ ಎಂದು ನೆಟ್ಟಿಗರೊಬ್ಬರು ಹೇಳಿದರೆ, ನಿಮ್ಮ ತಂದೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡಬೇಕು ಏಕೆಂದರೆ, ಪ್ರಧಾನಿ ಮೋದಿ ಅವರು ನಿಮ್ಮ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಹೀಗೆ ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ರೀಲ್ ಸರ್ಕಾರದ ಅನುಮೋದನೆ ಪಡೆದಿದ್ದು, ಪ್ರಧಾನಿ ಮೋದಿ ಅದನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಬ್ರೋ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ, (ಏಜೆನ್ಸೀಸ್).