ಹೌದು, ಮೊನಾಲಿಸಾ, ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇಬ್ಬರದು ಪ್ರೇಮ ವಿವಾಹ. ಕೇರಳದಲ್ಲಿ ಮದುವೆಯಾದರು. ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್ ಜಿಹಾದ್ ಎಂಬ ಆರೋಪದಿಂದಾಗಿ ವಿವಾದಕ್ಕೆ ಗುರಿಯಾಯಿತು. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ ಬಳಿಕ ವಿವಾದ ತಣ್ಣಾಗಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಮತ್ತೊಂದು ವಿವಾದ ಭುಗಿಲೆದ್ದಿದೆ. ಅದೇನೆಂದರೆ, ಮೊನಾಲಿಸಾ ಇನ್ನು ಅಪ್ರಾಪ್ತೆ ಎಂಬ ಸುದ್ದಿ ಹರಿದಾಡುತ್ತಿದೆ.