ಇದಕ್ಕೆಲ್ಲ ಅವಕಾಶವಿಲ್ಲ! ಟಿಕೆಟ್​ ವಿಚಾರದಲ್ಲಿ ಆರ್​ಸಿಬಿ ಮ್ಯಾನೇಜ್​ಮೆಂಟ್​ ಖಡಕ್ ಎಚ್ಚರಿಕೆ; ಫ್ಯಾನ್ಸ್​ಗೆ ಕಿವಿಮಾತು

ಆರ್​ಸಿಬಿ ತಂಡದ ಅಭಿಮಾನಿಗಳು
ಆರ್​ಸಿಬಿ ತಂಡದ ಅಭಿಮಾನಿಗಳು
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವೆ ಶುಭಾರಂಭ ಪಂದ್ಯ
  • ದುರಂತದ ಬಳಿಕ ಆರ್​ಸಿಬಿ ಪಂದ್ಯದಿಂದಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಭ ಆರಂಭ
  • ಈ ಹಿನ್ನೆಲೆ ಅಭಿಮಾನಿಗಳಿಗೆ ಕೆಲವು ಮುಖ್ಯ ಮಾಹಿತಿ ಹಂಚಿಕೊಂಡ ಆರ್​ಸಿಬಿ
ಬೆಂಗಳೂರು: ಐಪಿಎಲ್​ 19ನೇ ಆವೃತ್ತಿಯ ಶುಭಾರಂಭ ಪಂದ್ಯವು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವೆ ನಡೆಯಲಿದ್ದು, ಈ ಪಂದ್ಯದಿಂದಲೇ 2026ರ ಸೀಸನ್​ಗೆ ಅದ್ಧೂರಿ ಚಾಲನೆ ಸಿಗಲಿದೆ. ಕಳೆದ ವರ್ಷ ಸಂಭವಿಸಿದ ಕಾಲ್ತುಳಿತ ದುರಂತದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಆದರೀಗ, ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಆರ್​ಸಿಬಿ ಮ್ಯಾನೇಜ್​ಮೆಂಟ್ ತವರಿನಲ್ಲಿ​ ಪಂದ್ಯವನ್ನಾಡಲು ಒಪ್ಪಿಕೊಂಡಿದೆ. 
ಈಗಾಗಲೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಮ್ಯಾನೇಜ್​ಮೆಂಟ್​, ಕಿಕ್​ಸ್ಟಾರ್ಟ್​ ಪಂದ್ಯದ ಹಿನ್ನೆಲೆ ಟಿಕೆಟ್​ ಬುಕ್ಕಿಂಗ್​ನಿಂದ ಹಿಡಿದು ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಈ ಮಧ್ಯೆ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ರಾಂಚೈಸಿಯ ಫ್ಯಾನ್ಸ್​ಗೆ ಹಾಗೂ ಕೆಲವರಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.    

ಕ್ರಿಕೆಟ್​ ಪ್ರಿಯರ ಗಮನಕ್ಕೆ

  • ಆರ್​ಸಿಬಿ ಪಂದ್ಯದ ಅಧಿಕೃತ ಟಿಕೆಟ್‌ಗಳು ಮಾತ್ರ ವೆಬ್‌ಸೈಟ್​ನಲ್ಲಿ ಲಭ್ಯವಿರಲಿದೆ. ಟಿಕೆಟ್‌ಜೆನಿ ಎಂಬ ಅಪ್ಲಿಕೇಶನ್‌ನಲ್ಲಿ ಮಾತ್ರ ಆಯಾ ಪಂದ್ಯದ ಟಿಕೆಟ್​ಗಳು ಲಭ್ಯವಿರುತ್ತವೆ.
  • ಆರ್​ಸಿಬಿ ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುವ ಯಾವುದೇ ಥರ್ಡ್​​ ಪಾರ್ಟಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ನಾವು ಅಧಿಕಾರ ಕೊಟ್ಟಿರುವುದಿಲ್ಲ ಮತ್ತು ಅಂಥವರು  ನಮ್ಮ ಕಣ್ಣಿಗೆ ಬಿದ್ದರೆ, ಅವರ ವಿರುದ್ಧ ಕಾನೂನು/ಪೊಲೀಸ್ ಕ್ರಮ ಕೈಗೊಳ್ಳಲಾಗುವುದು.
  • ಕ್ವೀನ್ಸ್ ರಸ್ತೆಯಲ್ಲಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಪ್ರೇಕ್ಷಕರು ಲಿಂಕ್ ರೋಡ್​ ಮತ್ತು ಕಬ್ಬನ್ ರಸ್ತೆಯಿಂದ ಮಾತ್ರ ಪ್ರವೇಶಿಸಲು ಅನುಮತಿ.
  • ಕ್ರೀಡಾಂಗಣಕ್ಕೆ ಮತ್ತು ಹೊರಗೆ ಸುಗಮ ಪ್ರಯಾಣಕ್ಕಾಗಿ ಆರ್​ಸಿಬಿ ಪಂದ್ಯದ ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಟಿಕೆಟ್‌ಗಳು ಲಭ್ಯವಿವೆ.
  • ಪಾರ್ಕಿಂಗ್ ಸ್ಥಳಗಳಲ್ಲಿ (ಗರುಡ ಮಾಲ್, ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್, ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್) ಲಭ್ಯವಿರುವ ಸೀಮಿತ ಪಾರ್ಕಿಂಗ್ ಸ್ಥಳಗಳನ್ನು ಮೊದಲೇ ಬುಕ್ ಮಾಡಿಕೊಳ್ಳಿ ಎಂದು ತಿಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net