ಇರಾನ್‌ನ 16 ಪ್ರಾಂತ್ಯಗಳಲ್ಲಿ 9,000 ರಿಂದ 10,000 ಭಾರತೀಯ ಪ್ರಜೆಗಳಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು, ಮುಖ್ಯವಾಗಿ ವಿದ್ಯಾರ್ಥಿಗಳು, ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವ್ಯಾಪಾರಸ್ಥರು ಮತ್ತು ನಾವಿಕರು ಇರಾನಿನಲ್ಲಿರುವ ಭಾರತೀಯರಾಗಿದ್ದಾರೆ. ಇರಾನ್ ವಾಯುಪ್ರದೇಶವು ಇಲ್ಲಿಯವರೆಗೆ ತೆರೆದಿರುವುದರಿಂದ, ಇರಾನ್‌ನಿಂದ ಹೊರಹೋಗಲು ಬಯಸುವ ಭಾರತೀಯ ಪ್ರಜೆಗಳು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ವಿಧಾನಗಳನ್ನು ಬಳಸಿಕೊಂಡು ಮಾತೃಭೂಮಿಗೆ ಬರದಹುದು ಎಂದು ಅವರು ಹೇಳಿದರು.