ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ: ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಘೋಷಣೆ | Shehbaz Sharif

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಪಾಕ್​ ಆಕ್ರಮಿತ ಕಾಶ್ಮೀರ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಪಾಕ್​ ಆಕ್ರಮಿತ ಕಾಶ್ಮೀರ
Published on

ಪ್ರಮುಖ ಮುಖ್ಯಾಂಶಗಳು

  • ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್
  • ಕಾಶ್ಮೀರದ ಜನರ ಆಶಯಗಳನ್ನು ಗೌರವಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು
  • ಭಾರತದ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದೆ
ಜಮ್ಮು-ಕಾಶ್ಮೀರ: ಗುರುವಾರ (ಫೆ.5) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif), "ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ" ಎಂದು ಘೋಷಿಸುವ ಮೂಲಕ ಭಾರತದೊಂದಿಗೆ ಹೊಸ ಉದ್ವಿಗ್ನತೆಯನ್ನು ಹುಟ್ಟುಹಾಕಿದ್ದಾರೆ.
ಮುಜಫರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಪಾಕ್​ ಪ್ರಧಾನಿ, ಕಾಶ್ಮೀರಿ ಜನರಿಗೆ ಪಾಕಿಸ್ತಾನದ ಬೆಂಬಲ ಸದಾ ಕಾಲ ಇರುತ್ತದೆ ಎಂದು ಭಾಷಣವನ್ನು ಆರಂಭಿಸಿದ ಷರೀಫ್​ ವಿವಾದಿತ ಪ್ರದೇಶದ ಬಗ್ಗೆ ಇಸ್ಲಾಮಾಬಾದಿನ ನಿಲುವೇನು ಎಂದು ಸ್ವಷ್ಟ ಪಡಿಸಿದರು. ಕಾಶ್ಮೀರದ ಜನರ ಆಶಯಗಳನ್ನು ಗೌರವಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಷ್ಠಾನಗೊಳಿಸಿದರೆ ಜಮ್ಮು-ಕಾಶ್ಮೀರ ವಿವಾದವನ್ನು ಸುಲಭವಾಗಿ ಪರಿಹರಸಬಹುದು ಎಂದು ಅವರು ಹೇಳಿದರು.

ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ

ಕಾಶ್ಮೀರ ಯಾವತ್ತಿದ್ದರೂ ಅದು ಪಾಕಿಸ್ತಾನದ ಸೊತ್ತು, ಕಾಶ್ಮೀರ ಖಂಡಿತವಾಗಿ ಪಾಕಿಸ್ತಾನದ ಭಾಗವಾಗಲಿದೆ ಎಂದು ಶೆಹಬಾಜ್ ಷರೀಫ್​ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಶ್ಮೀರದ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ ಎಂದ ಷರೀಫ್​, ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್​ ಅಲಿ ಜಿನ್ನಾ, ಕಾಶ್ಮೀರ ಪಾಕಿಸ್ತಾನದ ರಕ್ತನಾಳ ಎಂದು ಬಣ್ಣಿಸಿದ್ದರೆಂದು ನೆನಪಿಸಿಕೊಂಡರು. ಪಾಕಿಸ್ತಾನವು ಈ ಪ್ರದೇಶದಲ್ಲಿ ಶಾಂತಿಯನ್ನು ಬಯಸುತ್ತದೆ, ಆದರೆ ಈ ಶಾಂತಿಯನ್ನು ಸಮಾನತೆ ಮತ್ತು ನ್ಯಾಯದ ಆಧಾರದ ಮೇಲೆ ಸ್ಥಾಪಿಸಬೇಕೆನ್ನುವುದು ನಮ್ಮ ನಿಲುವಾಗಿದೆ ಎಂದು ಅವರು ಹೇಳಿದರು.

ಭಾರತದ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದೆ

ಮೇ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷವನ್ನು ನೆನಪಿಸಿಕೊಳ್ಳುತ್ತಾ, ಭಾರತ ಉಗ್ರಗಾಮಿ ಚಟುವಟಿಕೆಯನ್ನು ಹೆಚ್ಚಿಸುತ್ತಿದೆ ಎಂದು ಅವರು ಆರೋಪಿಸಿದರು.
ಭಾರತ ಈಗ ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ತೀವ್ರಗೊಳಿಸುತ್ತಿದೆ ಎಂದು ಅವರು ಹೇಳಿದರು. ಪಾಕಿಸ್ತಾನ ಅಗಾಗ್ಗೆ ಈ ರೀತಿಯ ಆರೋಪಗಳನ್ನು ಮಾಡುತ್ತಾ ಬಂದಿದ್ದು, ಭಾರತ ಇದನ್ನು ನಿರಾಕರಿಸುತ್ತಾ ಬಂದಿರುತ್ತದೆ.

ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಎರಡಕ್ಕೂ ಒಂದೇ ಪರಿಹಾರ

ತಮ್ಮ ಭಾಷಣದಲ್ಲಿ, ಶೆಹಬಾಜ್ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ನಡುವಿನ ಹೋಲಿಕೆಗಳನ್ನು ವಿವರಿಸುತ್ತಾ, ಎರಡೂ ಸಮಸ್ಯೆಗಳನ್ನು ನ್ಯಾಯ ಮತ್ತು ಸ್ವ-ನಿರ್ಣಯಕ್ಕಾಗಿ ಹೋರಾಟಗಳು ಎಂದು ಅವರು ಹೇಳಿದರು. ಪಾಕ್​ ಪ್ರಧಾನಿ ಬುರ್ಹಾನ್ ವಾನಿ, ಸೈಯದ್ ಅಲಿ ಗಿಲಾನಿ, ಯಾಸಿನ್ ಮಲಿಕ್ ಮತ್ತು ಮಿರ್ವೈಜ್ ಉಮರ್ ಫಾರೂಕ್ ಸೇರಿದಂತೆ ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಚಳುವಳಿಗಳೊಂದಿಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳನ್ನು ತಮ್ಮ ಭಾಷಣದಲ್ಲಿ ಹೊಗಳಿ ಮಾತನಾಡಿದರು.

ಈ ಕುರಿತು ಭಾರತದ ನಿಲುವೇನು?

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿತ್ತು, ಇದೆ ಮತ್ತು ಶಾಶ್ವತವಾಗಿ ಉಳಿಯುತ್ತದೆ ಎಂದು ಭಾರತವು ಪಾಕಿಸ್ತಾನದ ಹಕ್ಕುಗಳನ್ನು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದೆ. ಪಾಕಿಸ್ತನವು, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಜಾಗತಿಕ ವೇದಿಕೆಗಳಲ್ಲಿ ಆರೋಪಿಸುತ್ತಾ ಬಂದಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net