ಭಾರತೀಯ ಮೂಲದ ಅಭಿಜಿತ್ ನಾಗ್ ಬಾಲಸುಬ್ರಹ್ಮಣ್ಯ ಎಂಬುವರು ಸ್ವೀಡನ್ನಲ್ಲಿ ಹೈಡ್ರೋ ಸ್ಪೇಸ್ ಸ್ವೀಡನ್ ಎಬಿ ಹೆಸರಿನ ಕಂಪನಿ ನಡಸುತ್ತಿದ್ದರು. ಈ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅವರೇ ಆಗಿದ್ದರು. ಆದರೆ, ಅಲ್ಲಿನ ವಲಸೆ ಪ್ರಕ್ರಿಯೆಯಲ್ಲಿನ ನಿಷ್ಕ್ರಿಯತೆ ಮತ್ತು ವಿದೇಶಿಗನೆಂಬ ತಾರತಮ್ಯ ವ್ಯವಸ್ಥೆಯಿಂದ ಬೇಸತ್ತಿರುವ ಅಭಿಜಿತ್, ತಮ್ಮ ಕಂಪನಿಯನ್ನು ಮಾರಿ, ತವರಿಗೆ ಮರಳುವ ನಿರ್ಧಾರ ಮಾಡಿದ್ದಾರೆ.