ಕೊಲೆಗೆ ಮೊದಲೇ ಸಂಚು ರೂಪಿಸಿದ್ದ ಮಗ, ಅದಕ್ಕೆ ಬೇಕಾಗಿದ್ದ ಎಲ್ಲ ಸಲಕರಣೆಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ. ಅಲ್ಲದೆ, ನಿರೀನ ಡ್ರಮ್ ಅನ್ನು ಆಫ್‌ಲೈನ್‌ನಲ್ಲಿ ಖರೀದಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ, ಕೊಲೆ ನಡೆಯುವ ಒಂದು ದಿನದ ಮೊದಲು ಬ್ಲಿಂಕಿಟ್ ಮೂಲಕ ಎರಡು ಚಾಕುಗಳನ್ನು ಆರ್ಡರ್ ಮಾಡಿದ್ದ ಮತ್ತು ಸ್ವತಃ ಮಾರುಕಟ್ಟೆಗೆ ಹೋಗಿ ಒಂದು ಗರಗಸ ಮತ್ತು ನೀಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಖರೀದಿಸಿದ್ದ. ಬಳಿಕ, ಅವುಗಳನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿ ಆರೋಪಿ ಅಕ್ಷತ್, ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.