ಒಂದೆಡೆ ಕರೆನ್ಸಿ ಮೌಲ್ಯ ಕುಸಿಯುತ್ತಿದ್ದರೂ, ಭಾರತದ ಕೈಗಾರಿಕಾ ವಲಯವು ಚೇತರಿಕೆ ಕಾಣುತ್ತಿದೆ. ಡಿಸೆಂಬರ್ 2025ರಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ (IIP) ಶೇ. 7.8ರಷ್ಟು ಪ್ರಗತಿ ಸಾಧಿಸಿದೆ. ಇದು ಕಳೆದ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟದ ಬೆಳವಣಿಗೆಯಾಗಿದೆ. ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ಕ್ಷೇತ್ರಗಳ ಬಲವಾದ ಪ್ರದರ್ಶನವು ದೇಶದ ಆರ್ಥಿಕತೆಗೆ ಒಂದಿಷ್ಟು ಆಸರೆಯಾಗಿದೆ.