ಜಗತ್ತಿಗೆ ಭಾರತವೇ ಆಶಾಕಿರಣ; ಪ್ರಧಾನಿ ಮೋದಿ | PM Modi

ಜಗತ್ತಿಗೆ ಭಾರತವೇ ಆಶಾಕಿರಣ; ಪ್ರಧಾನಿ ಮೋದಿ
ಜಗತ್ತಿಗೆ ಭಾರತವೇ ಆಶಾಕಿರಣ; ಪ್ರಧಾನಿ ಮೋದಿ
Published on
ನವದೆಹಲಿ: ಭಾರತವು ಇಂದು ಜಗತ್ತಿನ ಪಾಲಿನ ಆಶಾಕಿರಣ ಆಗಿ ಮೂಡಿಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi)ಹೆಮ್ಮೆಯಿಂದ ನುಡಿದಿದ್ದಾರೆ. ಅಲ್ಲದೆ, ಭಾರತವು ಇಂದು ಜಾಗತಿಕ ವೇದಿಕೆಯಲ್ಲಿ ಹೊಸ ಭರವಸೆಯಾಗಿ ಉದಯಿಸುತ್ತಿದೆ ಎಂದು ಘೋಷಿಸಿದ್ದಾರೆ.

ಯುರೋಪ್ ಜೊತೆಗಿನ ಒಪ್ಪಂದ: ಉತ್ಪಾದಕರಿಗೆ ಸುವರ್ಣ ಅವಕಾಶ

ಈ ಬಗ್ಗೆ ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದ ದಿನದಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಸಹಿಯಾದ ಮುಕ್ತ ವ್ಯಾಪಾರ ಒಪ್ಪಂದದ (FTA) ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಮಹತ್ವಾಕಾಂಕ್ಷೆಯ ಭಾರತದ ಸಂಕೇತವಾಗಿದೆ.
ನಮ್ಮ ದೇಶದ ಉತ್ಪಾದಕರು ಮತ್ತು ಉದ್ದಿಮೆದಾರರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ಸಕಾಲ ಎಂದು ಮೋದಿ ಕರೆ ನೀಡಿದ್ದಾರೆ. ಅಮೆರಿಕದ ಅಸಮಾಧಾನದ ನಡುವೆಯೂ ಈ ಒಪ್ಪಂದವನ್ನು ಮೋದಿ ಸಮರ್ಥಿಸಿಕೊಂಡಿರುವುದು ಗಮನಾರ್ಹವಾಗಿದೆ.

ವೇಗವಾಗಿ ಸಾಗುತ್ತಿರುವ ರಿಫಾರ್ಮ್ ಎಕ್ಸ್‌ಪ್ರೆಸ್

ದೇಶದ ಆರ್ಥಿಕ ಪ್ರಗತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಭಾರತವು ಈಗ ರಿಫಾರ್ಮ್ ಎಕ್ಸ್‌ಪ್ರೆಸ್ ವೇಗದಲ್ಲಿ ಚಲಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಜಾರಿಗೆ ತಂದ ಸುಧಾರಣೆಗಳು ಇಂದು ಫಲ ನೀಡುತ್ತಿವೆ ಎಂದರು. ಸಂಸತ್ತಿನಲ್ಲಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತಿರುವ ಎಲ್ಲಾ ಸಂಸದರಿಗೂ ಈ ಸಂದರ್ಭದಲ್ಲಿ ಪ್ರಧಾನಿ ಧನ್ಯವಾದ ಅರ್ಪಿಸಿದ್ದಾರೆ.

ಮಾನವ ಕೇಂದ್ರಿತ ಅಭಿವೃದ್ಧಿ

ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ಯೋಜನೆಗಳು ಮಾನವ ಕೇಂದ್ರಿತ ಆಗಿವೆ. ಕೇವಲ ಫೈಲ್‌ಗಳಿಗೆ ಸೀಮಿತವಾಗದೆ, ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿವೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ವಿರೋಧಿಗಳಿಗೂ ಒಪ್ಪಲೇಬೇಕಾದ ಅನಿವಾರ್ಯತೆ..!

ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಾ ಮೋದಿ ಮಾರ್ಮಿಕವಾಗಿ ಟೀಕಾಕಾರರಿಗೆ ಟಾಂಗ್ ನೀಡಿದ್ದು, ನನ್ನನ್ನು ಟೀಕಿಸುವವರು ಕೂಡ ಇಂದು ಸರ್ಕಾರದ ನೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವಿಕೆ ಕಾರ್ಯವೈಖರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಯ ಸುಧಾರಣೆಗಳಲ್ಲೂ ಇದೇ ಸಂಪ್ರದಾಯ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.

ಬಜೆಟ್ ಮೇಲೆ ಎಲ್ಲರ ಕಣ್ಣು

ಮುಂಬರುವ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಮುನ್ಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ವಿಕಸಿತ ಭಾರತದ ಗುರಿಯನ್ನು ತಲುಪಲು ಈ ಬಜೆಟ್ ಪೂರಕವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net