ಅಂದು ಭಾರತದಿಂದ ಬ್ರೆಜಿಲ್‌ಗೆ ತೆರಳುವುದು ತುಂಬಾ ದುಬಾರಿ ವೆಚ್ಚದ ಕೆಲಸವಾಗಿತ್ತು. ಸುಮಾರು ₹1 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಮೊದಲಿಗೆ ಹಣದ ಕೊರತೆ ಸಮಸ್ಯೆಯಾಗಿತ್ತು. ಆದರೆ ನಂತರ ವಿವಿಧ ರಾಜ್ಯ ಫುಟ್ಬಾಲ್ ಸಂಸ್ಥೆಗಳು ಸಹಾಯಕ್ಕೆ ಮುಂದೆ ಬಂದಿದ್ದವು. ಬೆಂಗಾಲ್ ಫುಟ್ಬಾಲ್ ಸಂಸ್ಥೆ – ₹25,000, ಮೈಸೂರು ಫುಟ್ಬಾಲ್ ಸಂಸ್ಥೆ – ₹10,000, ಮಹಾರಾಷ್ಟ್ರ ಫುಟ್ಬಾಲ್ ಸಂಸ್ಥೆ – ₹15,000 ಹೀಗೆ ಹಣದ ಸಮಸ್ಯೆ ಬಹುತೇಕ ಪರಿಹಾರವಾಗಿತ್ತು.