ಅಮೆರಿಕದ ದಿಗ್ಬಂಧನಕ್ಕೆ ಭಾರತ ಡೋಂಟ್ ಕೇರ್! ನಾವು ರಷ್ಯಾ ತೈಲ ಖರೀದಿ ಮಾಡ್ತಿವಿ! ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ!India-Russian Oil

ಅಮೆರಿಕದ ದಿಗ್ಬಂಧನಕ್ಕೆ ಭಾರತ ಡೋಂಟ್ ಕೇರ್! ನಾವು ರಷ್ಯಾ ತೈಲ ಖರೀದಿ ಮಾಡ್ತಿವಿ! ದೇಶದಲ್ಲಿ ಇಂಧನ ಕೊರತೆ ಇಲ್ಲ ಕೇಂದ್ರ ಸರ್ಕಾರ!
ಅಮೆರಿಕದ ದಿಗ್ಬಂಧನಕ್ಕೆ ಭಾರತ ಡೋಂಟ್ ಕೇರ್! ನಾವು ರಷ್ಯಾ ತೈಲ ಖರೀದಿ ಮಾಡ್ತಿವಿ! ದೇಶದಲ್ಲಿ ಇಂಧನ ಕೊರತೆ ಇಲ್ಲ ಕೇಂದ್ರ ಸರ್ಕಾರ!
Published on
ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಿರ್ಬಂಧಗಳ ಮಹಾ ಮುಖವಾಡ ಕಳಚಿ ಬಿದ್ದಿದೆ. ರಷ್ಯಾ ತೈಲ(India-Russian Oil) ವ್ಯಾಪಾರದ ಮೇಲಿದ್ದ ಅಮೆರಿಕದ ಪ್ರಮುಖ ಕರಾರು ವಿನಾಯಿತಿಯ ಅವಧಿ ಮುಕ್ತಾಯಗೊಂಡಿದ್ದರೂ, ಭಾರತ ಮಾತ್ರ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಸೋಮವಾರ ಕೇಂದ್ರ ಸರ್ಕಾರ ಬಹಿರಂಗವಾಗಿ ಸಾರಿದೆ. ಪಾಶ್ಚಿಮಾತ್ಯ ದೇಶಗಳ ಯಾವುದೇ ನಿರ್ಬಂಧಗಳು ಅಥವಾ ಅಂತಾರಾಷ್ಟ್ರೀಯ ರಾಜಕೀಯ ಒತ್ತಡಗಳು ಭಾರತದ ಇಂಧನ ಭದ್ರತೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಭಾರತದ ಇಂಧನ ಸಚಿವಾಲಯದ ಉನ್ನತ ಅಧಿಕಾರಿಗಳು ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತದ ಇಂಧನ ನೀತಿಯು ಕೇವಲ ದೇಶದ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇಂಧನ ನೀಡುವುದು ಮತ್ತು ದೇಶದ ಆರ್ಥಿಕ ಭದ್ರತೆಯನ್ನು ಕಾಪಾಡುವುದರ ಮೇಲೆ ಮಾತ್ರ ಗಮನ ಹರಿಸುತ್ತದೆ ಎಂದು ನವದೆಹಲಿ ಮತ್ತೊಮ್ಮೆ ಸಾಬೀತುಪಡಿಸಿದೆ.

"ವಿನಾಯಿತಿ ಇರಲಿ, ಇಲ್ಲದಿರಲಿ... ರಷ್ಯಾ ತೈಲ ಖರೀದಿ ನಿಲ್ಲಲ್ಲ! ಸುಜಾತಾ ಶರ್ಮಾ ಖಡಕ್ ಗರ್ಜನೆ!

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕದ ವಿನಾಯಿತಿ ಅಂತ್ಯದಿಂದ ಭಾರತದ ತೈಲ ಖರೀದಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ರಷ್ಯಾ ಮೇಲಿನ ನಿರ್ಬಂಧಗಳ ವಿನಾಯಿತಿಯ ಕುರಿತು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಭಾರತವು ರಷ್ಯಾದಿಂದ ಈ ವಿನಾಯಿತಿ ಸಿಗುವುದಕ್ಕಿಂತ ಮುಂಚೆಯೂ ತೈಲ ಖರೀದಿಸುತ್ತಿತ್ತು, ವಿನಾಯಿತಿ ಇದ್ದಾಗಲೂ ಖರೀದಿಸಿದೆ ಮತ್ತು ಅದು ಅಂತ್ಯಗೊಂಡಿರುವ ಪ್ರಸ್ತುತ ದಿನಗಳಲ್ಲೂ ಖರೀದಿಯನ್ನು ಮುಂದುವರಿಸಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗುಡುಗಿದ್ದಾರೆ. ಭಾರತದ ಕಚ್ಚಾ ತೈಲ ಖರೀದಿ ಪ್ರಕ್ರಿಯೆಯು ಕೇವಲ ವಾಣಿಜ್ಯ ಪರಿಗಣನೆಗಳು ಮತ್ತು ಮಾರುಕಟ್ಟೆಯ ಲಾಭದಾಯಕ ಪರಿಸ್ಥಿತಿಗಳನ್ನು ಆಧರಿಸಿ ನಡೆಯುತ್ತದೆಯೇ ಹೊರತು ಯಾವುದೇ ಮೂರನೇ ದೇಶದ ಒತ್ತಡಕ್ಕಲ್ಲ ಎಂದು ಸುಜಾತಾ ಸಾರಿದ್ದಾರೆ.

ದೇಶದಲ್ಲಿ ತೈಲ ಕೊರತೆ ಇಲ್ಲ: ಸಾರ್ವಜನಿಕರಿಗೆ ಬಿಗ್ ರಿಲೀಫ್!

ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧ ಹಾಗೂ ಹೊರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಜಗತ್ತಿನಾದ್ಯಂತ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಎಲ್ಲಾ ಜಾಗತಿಕ ವದಂತಿಗಳನ್ನು ಸುಜಾತಾ ಶರ್ಮಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 
ದೇಶದ ಇಂಧನ ಕೋಟೆ ಅತ್ಯಂತ ಸುರಕ್ಷಿತವಾಗಿದೆ ಎಂದಿರುವ ಸುಜಾತಾ, ದೇಶದಲ್ಲಿ ಕಚ್ಚಾ ತೈಲದ ಯಾವುದೇ ಕೊರತೆಯೂ ಇಲ್ಲ. ಭಾರತ ತನ್ನ ಇಂಧನ ಅಗತ್ಯಕ್ಕೆ ತಕ್ಕಂತೆ ಮೊದಲೇ ಸಾಕಷ್ಟು ಕಚ್ಚಾ ತೈಲದ ಒಪ್ಪಂದಗಳನ್ನು ಯಶಸ್ವಿಯಾಗಿ ಮಾಡಿಕೊಂಡಿದೆ. ಜಾಗತಿಕವಾಗಿ ಯಾವ ದೇಶ ಯಾವ ನೀತಿ ತಂದರೂ ಭಾರತದ ತೈಲ ಪೂರೈಕೆಯ ಸರಪಳಿಗೆ ಧಕ್ಕೆಯಾಗುವುದಿಲ್ಲ ಎಂದು ದೇಶದ ಜನತೆಗೆ ಭರವಸೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಷ್ಯಾದಿಂದ ಸಿಗುತ್ತಿರುವ ಭಾರಿ ರಿಯಾಯಿತಿ ದರದ ಕಚ್ಚಾ ತೈಲವು ಭಾರತದ ಇಂಧನ ಮಾರುಕಟ್ಟೆಗೆ ಅತಿ ದೊಡ್ಡ ಆಸರೆಯಾಗಿದೆ. ಅಂತಾರಾಷ್ಟ್ರೀಯ ತೈಲ ದರ ಗಗನಕ್ಕೇರುತ್ತಿರುವ ಈ ಕಠಿಣ ಸಮಯದಲ್ಲಿ ರಷ್ಯಾದ ತೈಲವನ್ನು ಕೈಬಿಡುವುದು ದೇಶದ ಆರ್ಥಿಕತೆಗೆ ಮಾರಕವಾಗಬಹುದು ಎಂಬುದನ್ನು ಅರಿತಿರುವ ಪ್ರಧಾನಿ ಮೋದಿ ಸರ್ಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ತೈಲ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಯುದ್ಧದ ಜ್ವಾಲೆಯ ನಡುವೆ $110 ಗಡಿ ದಾಟಿದ ಬ್ರೆಂಟ್ ಕಚ್ಚಾ ತೈಲ!

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಪ್ರತಿದಿನವೂ ಅತ್ಯಂತ ಅಸ್ಥಿರವಾಗಿ ಮುನ್ನುಗ್ಗುತ್ತಿವೆ. ಸೋಮವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.93 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 110.28 ಅಮೆರಿಕನ್ ಡಾಲರ್ ತಲುಪಿದೆ. ಇತ್ತ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ದರವೂ ಶೇಕಡಾ 0.85 ರಷ್ಟು ಜಿಗಿದು ಪ್ರತಿ ಬ್ಯಾರೆಲ್‌ಗೆ 106.32 ಡಾಲರ್‌ಗೆ ಬಂದು ನಿಂತಿದೆ. ಇಂತಹ ಕರಾಳ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ರಷ್ಯಾದ ಅಗ್ಗದ ತೈಲವನ್ನು ಮುಂದುವರಿಸುವ ಭಾರತದ ಈ ಮಾಸ್ಟರ್ ಪ್ಲಾನ್ ದೇಶದ ರೇಟ್ಸ್ ನಿಯಂತ್ರಣದಲ್ಲಿಡಲು ಅತ್ಯಂತ ನಿರ್ಣಾಯಕ ಎನ್ನಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net