ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಅತ್ಯಂತ ನಂಬಿಕಸ್ಥ ಮತ್ತು ಆಪ್ತ ಸಹಾಯಕ ಚಂದ್ರನಾಥ್ ರಥ್(Chandranath Rath Murder case) ಅವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಸೋಮವಾರ ಮಹತ್ವದ ಯಶಸ್ಸು ಸಾಧಿಸಿದೆ. ಉತ್ತರ ಪ್ರದೇಶ ಪೊಲೀಸರ ಜಂಟಿ ಸಹಯೋಗದೊಂದಿಗೆ ಮುಜಾಫರ್ನಗರದಲ್ಲಿ ಅಡಗಿದ್ದ ಮುಖ್ಯ ಶೂಟರ್ ರಾಜ್ಕುಮಾರ್ನನ್ನು ಕೇಂದ್ರ ತನಿಖಾ ಸಂಸ್ಥೆ ಹೆಡೆಮುರಿ ಕಟ್ಟಿದೆ. ಹಂತಕನ ಟ್ರಾನ್ಸಿಟ್ ರಿಮಾಂಡ್ ಪಡೆದಿರುವ ಸಿಬಿಐ, ಆತನನ್ನು ಮಂಗಳವಾರ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.