ಈ ಕೇಂದ್ರದ ಭದ್ರತೆಗೆ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಕ್ಷಣೆಗಾಗಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು 12 ಪೊಲೀಸ್ ಅಧಿಕಾರಿಗಳು, ಮೂರು ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಮೂರು ಸಿವಿಕ್ ಪೊಲೀಸ್ ಮತ್ತು ಬಂಧಿತರಿಗೆ ಆಹಾರ ತಯಾರಿಸಲು ವಿಶೇಷ ಅಡುಗೆಯವರನ್ನು ವಿವಿಧ ಶಿಫ್ಟ್ಗಳ ಆಧಾರದ ಮೇಲೆ ನಿಯೋಜಿಸಲಾಗಿದೆ.