ಗೃಹ ಖಾತೆಯನ್ನೂ ಹೊಂದಿರುವ ಸಿಎಂ ದೇವೇಂದ್ರ ಫಡ್ನವೀಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಪ್ರವಾಸದಲ್ಲಿದ್ದ ಕಾರಣ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರಿಗೆ ಆಗಲಿ ಈ ರೀತಿ ಬೆದರಿಕೆ ಹಾಕುವುದು ತಪ್ಪು. ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ. ಇದಾದ ನಂತರ ನಡೆದ ಶಿಂಧೆ ಮತ್ತು ಫಡ್ನವೀಸ್ ಅವರ ಸಭೆಯಲ್ಲಿ, ಫಡ್ನವೀಸ್ ಅವರು ಸಂಸದರ ಈ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕಾಂಗ್ರೆಸ್ ಶಾಸಕ ವಿಜಯ್ ವಾಡೆಟ್ಟಿವಾರ್ ಸಂಸದರ ವರ್ತನೆಯನ್ನು ಖಂಡಿಸಿದ್ದು, ಪತ್ರಕರ್ತರಿಗೆ ಬೆದರಿಕೆ ಹಾಕುವುದು ಒಪ್ಪಲು ಸಾಧ್ಯವಿಲ್ಲ. ಸಂಜಯ್ ದಿನಾ ಪಾಟೀಲ್ ಮೊದಲೆಲ್ಲ ಇಷ್ಟೊಂದು ಮಾತನಾಡುತ್ತಿರಲಿಲ್ಲ, ಈಗ ಯಾಕೆ ಹೀಗೆ ಆಡುತ್ತಿದ್ದಾರೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ(ಏಜೆನ್ಸೀಸ್).