ನಿಮಗೆ ಧಮ್​ ಇದ್ದರೆ ನನ್ನನ್ನು ಹಿಡಿಯಿರಿ... ಪೊಲೀಸರಿಗೆ ಓಪನ್​ ಚಾಲೆಂಜ್​ ಎಸೆದ ಕಿರಾತಕ! Arjun Ayanki

ನಿಮಗೆ ಧಮ್​ ಇದ್ದರೆ ನನ್ನನ್ನು ಹಿಡಿಯರಿ... ಪೊಲೀಸರಿಗೆ ಓಪನ್​ ಚಾಲೆಂಜ್​ ಎಸೆದ ಕಿರಾತಕ! Arjun Ayanki
ನಿಮಗೆ ಧಮ್​ ಇದ್ದರೆ ನನ್ನನ್ನು ಹಿಡಿಯರಿ... ಪೊಲೀಸರಿಗೆ ಓಪನ್​ ಚಾಲೆಂಜ್​ ಎಸೆದ ಕಿರಾತಕ! Arjun Ayanki
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರಿಗೆ ಬಹಿರಂಗ ಸವಾಲು ಹಾಕಿದ ಕುಖ್ಯಾತ ಆರೋಪಿ ಅರ್ಜುನ್ ಆಯಂಕಿ
  • ಉನ್ನುಕಲ್ ಸಿಐಗೆ ಜೀವ ಬೆದರಿಕೆಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಕಿರಾತಕ
  • ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆ ತಲೆಮರೆಸಿಕೊಂಡ ಅರ್ಜುನ್ ಆಯಂಕಿ
  • ಧಮ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಎಸೆದ ಕಣ್ಣೂರು ಮೂಲದ ಆರೋಪಿ
Arjun Ayanki : ಕೇರಳದ ಕೊಚ್ಚಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಸರಣಿ ಅಪರಾಧ ಪ್ರಕರಣಗಳ ಆರೋಪಿ ಅರ್ಜುನ್ ಆಯಂಕಿ, ಇದೀಗ ಮತ್ತೊಮ್ಮೆ ಪೊಲೀಸರಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾನೆ. ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿರುವ ಈ ಕಿರಾತಕ, ಸಾಮಾಜಿಕ ಜಾಲತಾಣದ ಮೂಲಕ ಪೊಲೀಸ್ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ್ದು, ರಾಜ್ಯದ ಪೊಲೀಸ್ ಇಲಾಖೆಗೆ ದೊಡ್ಡ ಮುಖಭಂಗ ಉಂಟುಮಾಡಿದೆ.
ಉನ್ನುಕಲ್ ವೃತ್ತ ನಿರೀಕ್ಷಕರನ್ನು (CI) ಗುರಿಯಾಗಿಸಿಕೊಂಡು ನೀಡಿರುವ ಈ ಬೆದರಿಕೆ ಸಂದೇಶದಲ್ಲಿ, "ಸಿಐಗೆ ಸಿಗಬೇಕಾಗಿರುವುದು ಇನ್ನೂ ಸಿಕ್ಕಿಲ್ಲ, ಸಿಕ್ಕಿದಾಗ ಗೊತ್ತಾಗುತ್ತದೆ, ಧಮ್ ಇದ್ದರೆ ನನ್ನನ್ನು ಹಿಡಿಯಿರಿ" ಎಂದು ಅರ್ಜುನ್​ ಅಯಾಂಕಿ ಸವಾಲು ಎಸೆದಿದ್ದಾನೆ. ಹೈಕೋರ್ಟ್ ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಈ ಹೊಸ ವಿವಾದ ಸೃಷ್ಟಿಯಾಗಿದ್ದು, ಆತನ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಣ್ಣೂರು ಮೂಲದ ಅರ್ಜುನ್ ಆಯಂಕಿ ಮತ್ತು ಆತನ ಗ್ಯಾಂಗ್ ವಿರುದ್ಧ ಈಗಾಗಲೇ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಕಳೆದ ಮೇ 3 ರಂದು ಪೊಲೀಸರು ಈತನನ್ನು ಬಂಧಿಸಿದ್ದರೂ, ಆತನ ಕಾನೂನುಬಾಹಿರ ಚಟುವಟಿಕೆಗಳು ಮಾತ್ರ ನಿಂತಿಲ್ಲ. ಬಂಧನದ ಬೆನ್ನಲ್ಲೇ ಕೊಥಮಂಗಲಂ ಸಿಐ ವಿರುದ್ಧ ಫೇಸ್‌ಬುಕ್‌ನಲ್ಲಿ ಸಾರ್ವಜನಿಕವಾಗಿ ಬೆದರಿಕೆ ಹಾಕುವ ಮೂಲಕ ಈತ ಕಾನೂನನ್ನು ಪದೇ ಪದೇ ಧಿಕ್ಕರಿಸುತ್ತಾ ಬಂದಿದ್ದಾನೆ.
ಪ್ರಸ್ತುತ ಈ ಹೊಸ ಬೆದರಿಕೆ ಸಂದೇಶ ಮತ್ತು ಸವಾಲು ಪೊಲೀಸರ ಗಮನಕ್ಕೆ ಬಂದಿದ್ದು, ತಲೆಮರೆಸಿಕೊಂಡಿರುವ ಅರ್ಜುನ್​ ಆಯಂಕಿ ಬಂಧನಕ್ಕೆ ತನಿಖೆ ಆರಂಭಿಸಲಾಗಿದೆ. ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಶರಣಾಗಲು ಮುಂದಾಗಿದ್ದಾನಾ? ಅಥವಾ ಪೊಲೀಸರ ದಿಕ್ಕು ತಪ್ಪಿಸಲು ನಾಟಕವಾಡುತ್ತಿದ್ದಾನಾ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net