ಇಂದಿನ ಇಂಧನ ಬೆಲೆಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೇಳಿದರೆ ಸಾಕು ಒಂದು ಕ್ಷಣ ಚಿಂತೆಗೆ ಜಾರುವಂತಿದೆ. ಇಂಧನ ದರ ಗಗನಕ್ಕೇರಿರುವ ಈ ಕಾಲದಲ್ಲಿ, ಗೂಗಲ್ ಮ್ಯಾಪ್ಸ್‌ನಲ್ಲಿರುವ 'ಇಕೋ-ಫ್ರೆಂಡ್ಲಿ ರೂಟ್' (Eco-friendly route) ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವುದರಿಂದ ಕಡಿಮೆ ಇಂಧನ ಬಳಕೆಯಾಗುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಮಾಡಲು ಮೊದಲು ಅಪ್ಲಿಕೇಶನ್ ತೆರೆದು ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್‌ಗಳಲ್ಲಿ ನ್ಯಾವಿಗೇಷನ್ ಆಯ್ಕೆಗಳನ್ನು ತೆರೆದು 'Prefer fuel-efficient routes' ಆಯ್ಕೆಯನ್ನು ಆನ್ ಮಾಡಿ.