ರಾಮ ಮಂದಿರಕ್ಕೆ ಕೋಟಿ ರೂ. ಮೌಲ್ಯದ ವಿಗ್ರಹ ದಾನ! ಹೆಸರು ಬಹಿರಂಗಪಡಿಸದೆ ಕೊಡುಗೆ ನೀಡಿದ ಭಕ್ತ | Ram Mandir

 Ram Mandir
Ram Mandir
Published on

ಪ್ರಮುಖ ಮುಖ್ಯಾಂಶಗಳು

  • ರಾಮ ಮಂದಿರಕ್ಕೆ ಅನಾಮಧೇಯ ಭಕ್ತನಿಂದ 30 ಕೋಟಿ ಮೌಲ್ಯದ ಪ್ರತಿಮೆ ದಾನ
  • ಚಿನ್ನ, ವಜ್ರ ಮುತ್ತುಗಳಿಂದ ಕೂಡಿರುವ ಪ್ರತಿಮೆ
  • ಪ್ರತಿಮೆಯನ್ನುಅಂಗದ್ ತಿಲಾದಲ್ಲಿ ಸ್ಥಾಪನೆ ಸಾಧ್ಯತೆ
ಅಯೋಧ್ಯೆ: ಅಯೋಧ್ಯೆಯು ರಾಮಲಲ್ಲಾ ದೇವಾಲಯ ಚಿನ್ನದ ವರ್ಣದ ಭವ್ಯವಾದ ಪ್ರತಿಮೆಯ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ವಜ್ರ, ಪಚ್ಚೆ ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಈ ಪ್ರತಿಮೆಯನ್ನು ಕರ್ನಾಟಕ ಮೂಲದ ಅನಾಮಧೇಯ ವ್ಯಕ್ತಿಯೊಬ್ಬರು ದಾನ ಮಾಡಿದ್ದಾಗಿ ವರದಿಯಾಗಿದೆ.
ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಲಾದ ಈ ಪ್ರತಿಮೆಯ ಸುಮಾರು 25ರಿಂದ 30 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಹೇಳಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ, ದಾನಿಯ ಗುರುತು ಇನ್ನೂ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ, ಪ್ರತಿಮೆಯ ತೂಕ ಸುಮಾರು 500 ಕೆಜಿಗಳಷ್ಟಿದ್ದು, ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಪ್ರತಿಮೆಯನ್ನು ಸ್ಥಾಪಿಸುವ ಸಾಧ್ಯತೆಯಿದ್ದು, ಇದನ್ನು ಮೊದಲು ಅನಾವರಣಗೊಳಿಸಿದ ಬಳಿಕ ದೇಶದ ಸಂತರು ಮತ್ತು ಮಹಾಂತರು ಭಾಗವಹಿಸುವ ಪವಿತ್ರೀಕರಣ ಸಮಾರಂಭ ನಡೆಸಲಾಗುವುದು ಎಂದರು. ತಂಜಾವೂರಿನ ಕುಶಲಕರ್ಮಿಗಳಿಂದ ರಚಿಸಲ್ಪಟ್ಟ ಈ ವಿಗೃಹವನ್ನು ತಂಜಾವೂರಿನ ಕೌಶಲ್ಯಪೂರ್ಣ ಕುಶಲಕರ್ಮಿಗಳು ಇದರ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಅಂಗದ್ ತಿಲಾದಲ್ಲಿ ಸ್ಥಾಪನೆ

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರ ಮಾತನಾಡಿ, ಭಾರತದಾದ ಸಂತರು ಮತ್ತು ಮಹಾಂತರು ಭಾಗವಹಿಸುವ ಅನಾವರಣ ಮತ್ತು ಪವಿತ್ರೀಕರಣ ಸಮಾರಂಭದ ನಂತರ ಇದನ್ನು ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ತಿಲಾದಲ್ಲಿ ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ.

ಡಿ.29ರಿಂದ ಪ್ರತಿಷ್ಠಾ ಆಚರಣೆ ಆರಂಭ

ಇದೇ ಡಿಸೆಂಬರ್ 29ರಿಂದ ಜನವರಿ 2, 2026 ರವರೆಗೆ ಆಚರಿಸಲಾಗುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವವನ್ನು ಗುರುತಿಸುವ ಪ್ರತಿಷ್ಠಾ ದ್ವಾದಶಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ದೇವಾಲಯದಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ ಆರತಿಯವರೆಗೆ ಶ್ರೀ ರಾಮ ಅಭಿಷೇಕ, ಶೃಂಗಾರ, ಭೋಗ್ ಮತ್ತು ಪ್ರಕತ್ಯ ಆರತಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೇರಿವೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net