ICC ODI rankings | ಎರಡನೇ ಸ್ಥಾನಕ್ಕೆ ಜಿಗಿದ ಕಿಂಗ್​ ಕೊಹ್ಲಿ, ಅಗ್ರಸ್ಥಾನದಲ್ಲಿ ರೋಹಿತ್ ಅಬಾಧಿತ

ICC ODI rankings| ಭಾರತದ ಸ್ಟಾರ್​ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ICC ODI rankings| ಭಾರತದ ಸ್ಟಾರ್​ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
Published on
ನವದೆಹಲಿ: ಭಾರತದ ಸ್ಟಾರ್​ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಂದು ಬಿಡುಗಡೆಯಾದ ಐಸಿಸಿ ಏಕದಿನ ಶ್ರೇಯಾಂಕಗಳಲ್ಲಿ(ICC ODI rankings) ರೋಹಿತ್ ಅಗ್ರಸ್ಥಾನದಲ್ಲಿದ್ದು, ವಿರಾಟ್​ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಕಳೆದ ತಿಂಗಳು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಿಂಗ್ ಕೊಹ್ಲಿ 302 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯ 135 ರನ್​ ಮತ್ತು ಗುವಾಹಟಿಯಲ್ಲಿ ನಡೆದ ಎರಡೇನೆ ಪಂದ್ಯದಲ್ಲಿ 102 ನಲ್ಲಿ ಸತತ ಶತಕಗಳನ್ನು ಗಳಿಸಿದ ನಂತರ, ವಿಶಾಖಪಟ್ಟಣಂ ನಡೆದ ಕೊನೆಯ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು.
ಹರಿಣಗಳ ವಿರುದ್ಧದ ಸರಣಿಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮ 146ರನ್​ಗಳಿಸುವ ಮೂಲಕ ತಮ್ಮ ನಂ,1 ಏಕದಿನ ಬ್ಯಾಟ್ಸ್‌ಮನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.ಅಲ್ಲದೆ, ಈ ಸ್ಟಾರ್​ ಜೋಡಿಯು ಜಾಗತಿಕ ಶ್ರೇಯಾಂಕದಲ್ಲಿ 1 ಮತ್ತು 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕೊಹ್ಲಿ ಜೊತೆಗೆ ಭಾರತದ ಮತ್ತೊಬ್ಬ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 14 ರಿಂದ 12 ನೇ ಸ್ಥಾನಕ್ಕೆ ಏರಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯದಿಂದಾಗಿ ಆಡದಿದ್ದ ಶುಭಮನ್ ಗಿಲ್ 5 ನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ 11 ನೇ ಸ್ಥಾನದಲ್ಲಿದ್ದಾರೆ.
ಹೊಸದಾಗಿ ಬಿಡುಗಡೆಯಾದ ಟಿ20ಐ ಶ್ರೇಯಾಂಕದಲ್ಲಿ ಭಾರತದ ಬೌಲರ್‌ ಆದ ಆಲ್‌ರೌಂಡರ್ ಅಕ್ಷರ್ ಪಟೇಲ್ ಬೌಲರ್‌ಗಳಲ್ಲಿ 13 ನೇ ಸ್ಥಾನಕ್ಕೆ ಏರಿದ್ದಾರೆ.ಅಲ್ಲದೆ, ಯುವ ವೇಗಿ ಅರ್ಶ್‌ದೀಪ್ ಸಿಂಗ್ 20 ನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಜಸ್ಪ್ರೀತ್ ಬುಮ್ರಾ ಆರು ಸ್ಥಾನಗಳ ಏರಿಕೆ ಕಂಡು 25 ನೇ ಸ್ಥಾನಕ್ಕೆ ತಲುಪಿದ್ದಾರೆ.
ಟೆಸ್ಟ್ ಱಂಕಿಂಗ್​ ಭಾರತದ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ ಭಾರತದ ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್‌ಮನ್ ಆಗಿ 8 ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಇತ್ತೀಚಿನ ಸ್ಥಿರ ಪ್ರದರ್ಶನದ ನಂತರ ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಕ್ರಮವಾಗಿ 11 ಮತ್ತು 13 ನೇ ಸ್ಥಾನಕ್ಕೆ ಏರಿದ್ದಾರೆ. ಟೆಸ್ಟ್ ಬೌಲರ್‌ಗಳಲ್ಲಿ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ನಂ. 1 ಸ್ಥಾನ ಪಡೆದಿದ್ದಾರೆ. ಭಾರತದ ಮೊಹಮ್ಮದ್ ಸಿರಾಜ್ (12 ನೇ ಸ್ಥಾನ), ರವೀಂದ್ರ ಜಡೇಜಾ (13 ನೇ ಸ್ಥಾನ) ಮತ್ತು ಕುಲದೀಪ್ ಯಾದವ್ (14 ನೇ ಸ್ಥಾನ) ತಲಾ ಒಂದು ಸ್ಥಾನ ಏರಿದ್ಧಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net