2020 ರಲ್ಲಿ ದೆಹಲಿಯ ಉತ್ತರ ಭಾಗದಲ್ಲಿ ನಡೆದಿದ್ದ ಸಿಎಎ, ಎನ್ಆರ್ಸಿ ನೀತಿ ವಿರೋಧಿಸಿ ನಡೆದ ಹಿಂಸಾತ್ಮಕ ದಂಗೆಯಲ್ಲಿ ಎಎಪಿ ಕೌನ್ಸಿಲರ್, ತಾಹೀರ್ ಹುಸೇನ್ ಪಾತ್ರ ದಟ್ಟವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ತಾಹೀರ್ ವಿರುದ್ಧ ಅನ್ಯ ಧರ್ಮದವರ ಮೇಲೆ ದ್ವೇಷ ಸಾಧಿಸುವ, ಸಮಾಜದಲ್ಲಿ ಅಶಾಂತಿ ನಿರ್ಮಿಸುವ, ದಂಗೆ, ಹಲ್ಲೆ, ಕೊಲೆ, ಕೊಲೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದವು. ತಾಹೀರ್ ನನ್ನು ಐಬಿ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷ ತಾಹೀರ್ನನ್ನು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.