ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಆಗುತ್ತಿರುವ ವಿಡಿಯೋನಲ್ಲಿ, ಪುರ್ನಿಯಾ ಸಂಸದ ಪಪ್ಪು ಯಾದವ್ ಕಾವಿ ಬಟ್ಟೆ ಧರಿಸಿ, ಹಣೆಗೆ ಕುಂಕುಮವನ್ನು ಬಳಿದು, ಕೈಯಲ್ಲಿ ಕಾಣಿಕೆ ಡಬ್ಬಿಯನ್ನು ಹಿಡಿದು ಕುಳಿತಿದ್ದಾರೆ. ವಿಡಿಯೋನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಪ್ಪು ಯಾದವ್ಗೆ ದಕ್ಷಿಣೆ ನೀಡುತ್ತಿರುವ ದೃಶ್ಯವನ್ನು ಕೂಡ ನೋಡಬಹುದಾಗಿದೆ.