ಮಚ್ಚಾರ್ ತೋರಿಸಿದ ದೃಢಸಂಕಲ್ಪಕ್ಕೆ ಸಾಟಿ ಇಲ್ಲ!...ಫ್ಲೈದುಬೈ ಪೈಲಟ್ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ವಾಯುಪಡೆ ಮುಖ್ಯಸ್ಥರು | IAF chief Amar Preet Singh

ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಇಸ್ರೇಲ್ ಕಡೆಗೆ ತೆರಳುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಿದ ಒಮಾನ್ ಸಹ-ಪೈಲಟ್ ಅನ್ನು ಧೈರ್ಯದಿಂದ ಎದುರಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್​ ಅವರ ದೈಹಿಕ ಮತ್ತು ಮಾನಸಿಕ ದೃಢಸಂಕಲ್ಪವನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ( IAF chief Amar Preet Singh) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಚ್ಚಾರ್ ತೋರಿಸಿದ ದೃಢಸಂಕಲ್ಪಕ್ಕೆ ಸಾಟಿ ಇಲ್ಲ!...ಫ್ಲೈದುಬೈ ಪೈಲಟ್ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ವಾಯುಪಡೆ ಮುಖ್ಯಸ್ಥರು | IAF chief Amar Preet Singh
Published on: 

ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಇಸ್ರೇಲ್ ಕಡೆಗೆ ತೆರಳುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಿದ ಒಮಾನ್ ಸಹ-ಪೈಲಟ್ ಅನ್ನು ಧೈರ್ಯದಿಂದ ಎದುರಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್​ ಅವರ ದೈಹಿಕ ಮತ್ತು ಮಾನಸಿಕ ದೃಢಸಂಕಲ್ಪವನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ( IAF chief Amar Preet Singh) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಫ್ಲೈದುಬೈ ಪೈಲಟ್‌ಗಳು ತುಂಬ ಧೈರ್ಯಶಾಲಿಗಳು ಎಂದಿರುವ ಅಮರ್ ಪ್ರೀತ್ ಸಿಂಗ್, ವಾಯುಪಡೆಯ ವಿಷಯಕ್ಕೆ ಬಂದರೆ, ಇಂತಹ ಬೆದರಿಕೆಗಳು ಸದ್ಯಕ್ಕೆ ಕಂಡುಬಂದಿಲ್ಲ ಮತ್ತು ಎಲ್ಲಾದರೂ ಇದ್ದರೆ ಅದು ಶೀಘ್ರದಲ್ಲೇ ಗೊತ್ತಾಗುತ್ತದೆ ಎಂದರು, ಸ್ಮಿತ್​ ಮಚ್ಚಾರ್​ ಮಾಡಿರುವ ಕೆಲಸ ನಿಜಕ್ಕೂ ಅಸಾಧಾರಣ ಧೈರ್ಯದ್ದು. ಅವರು ತಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನವನ್ನು ತೋರಿಸಿದ್ದಾರೆ. ಇದು ನಮಗೆಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ ಎಂದು ಅವರು ತಿಳಿಸಿದರು.

ಸೆಪ್ಟೆಂಬರ್ 30 ರಂದು ಫ್ಲೈದುಬೈ ವಿಮಾನ FZ1073 ರ ಮೇಲೆ ಸಹ-ಪೈಲಟ್ ನಡೆಸಿದ ದಾಳಿಯ ಸಮಯದಲ್ಲಿ ಸ್ಮಿತ್ ಮಚ್ಚಾರ್​ ಗಂಭೀರವಾಗಿ ಗಾಯಗೊಂಡ ಕೆಲವು ದಿನಗಳ ನಂತರ ಐಎಎಫ್​ ಮುಖ್ಯಸ್ಥರಿಂದ ಈ ಹೇಳಿಕೆಗಳು ಬಂದಿವೆ. ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ವಿಮಾನವು ದಾಳಿಯ ನಂತರ ಪ್ರಮುಖ ತುರ್ತು ಪರಿಸ್ಥಿತಿಯನ್ನು ಎದುರಿಸಿತು. ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯೆ ಪ್ರವೇಶಿಸುವ ಮೊದಲು ವಿಮಾನವು ವೇಗವಾಗಿ ಕೆಳಗೆ ಇಳಿಯಿತು.

ಇದನ್ನೂ ಓದಿ:ಸ್ಮಿತ್ ತೋರಿದ ಸಾಹಸಕ್ಕೆ ಸರಿಸಾಟಿಯುಂಟೆ!...ಮಚ್ಚಾರ್‌ಗೆ ಅಶೋಕ ಚಕ್ರ ನೀಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಶಿವಸೇನೆ ಸಂಸದ | Ashoka Chakra for Smit Machchhar

ಗಾಯಗೊಂಡಿದ್ದರೂ ಕಾಕ್‌‌ಪಿಟ್ ಬಾಗಿಲು ತೆಗೆದಿದ್ದ ಸ್ಮಿತ್ ಮಚ್ಚಾರ್!

ಪೈಲಟ್ ಮಚ್ಚಾರ್ ಅವರಿಗೆ ಗಾಯವಾಗಿದ್ದರೂ ಸಹ, ಹೇಗಾದರೂ ಮಾಡಿ ಕಾಕ್‌ಪಿಟ್ ಬಾಗಿಲಿನ ಬಳಿ ತಲುಪಿ ಅದನ್ನು ತೆರೆದರು. ಇದರಿಂದ ಇತರರಿಗೆ ಒಳಗೆ ಬರಲು ಮತ್ತು ದಾಳಿ ಮಾಡಿದವನನ್ನು ಕಂಟ್ರೋಲ್ ಮಾಡಲು ಸಹಾಯವಾಯಿತು. ಆಮೇಲೆ ವಿಮಾನದ ದಾರಿಯನ್ನು ಬದಲಾಯಿಸಿ ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ತದನಂತರ ಮಚ್ಚಾರ್​​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ಅವರು ಗುಣಮುಖರಾಗುತ್ತಿದ್ದಾರೆ.

ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ವೈಯಕ್ತಿಕ ಧೈರ್ಯದ ಕಾರ್ಯವಾಗಿ ಅಷ್ಟೆ ಅಲ್ಲದೇ, ವಾಯುಯಾನಿಗಳಿಗೆ ಒಂದು ಪಾಠವಾಗಿ ಈ ಘಟನೆಯನ್ನು ರೂಪಿಸುತ್ತಾ ಅವರ ದೈಹಿಕ ಮತ್ತು ಮಾನಸಿಕ ದೃಢಸಂಕಲ್ಪವನ್ನು ಎತ್ತಿ ತೋರಿಸಿದರು.

ಚೀನಾದಿಂದ ಪಾಕಿಸ್ತಾನವು 5ನೇ ತಲೆಮಾರಿನ ಯುದ್ಧವಿಮಾನಗಳನ್ನು ಪಡೆಯುವುದರ ಬಗ್ಗೆ ಮತ್ತು ಅಲ್ಲಿನ ಪೈಲಟ್‌ಗಳಿಗೆ ತರಬೇತಿ ನೀಡುತ್ತಿರುವುದರ ಬಗ್ಗೆ ಮಾತನಾಡಿರುವ ವಾಯುಪಡೆ ಮುಖ್ಯಸ್ಥರು, ಇದು ಸ್ವಲ್ಪ ಕಳವಳಕಾರಿ ವಿಷಯವಾದರೂ ಅಷ್ಟೇನು ದೊಡ್ಡ ಆತಂಕವೇನಿಲ್ಲ ಎಂದಿದ್ದಾರೆ. ಹಿಂದೆಂದಿಗಿಂತಲೂ ಪಾಕಿಸ್ತಾನ ಬಳಿ ವಾಯುಶಕ್ತಿ ಇದ್ದರೂ ಸಹ, ಆಪರೇಷನ್ ಸಿಂಧೂರ ಸಮಯದಲ್ಲಿ ಬಂದ ಫಲಿತಾಂಶವೇ ಶಸ್ತ್ರಾಸ್ತ್ರಗಳ ಸರಿಯಾದ ಹೊಂದಾಣಿಕೆ ಅಥವಾ ಏಕೀಕರಣ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ತಿಳಿಸಿದರು.

Also Read
ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್: ನೀವು ನಮ್ಮ ರಾಷ್ಟ್ರದ ಹೆಮ್ಮೆ ಬಣ್ಣನೆ! | Smit Machchhar
ಮಚ್ಚಾರ್ ತೋರಿಸಿದ ದೃಢಸಂಕಲ್ಪಕ್ಕೆ ಸಾಟಿ ಇಲ್ಲ!...ಫ್ಲೈದುಬೈ ಪೈಲಟ್ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ವಾಯುಪಡೆ ಮುಖ್ಯಸ್ಥರು | IAF chief Amar Preet Singh

ಮುಂದುವರಿದು, 5ನೇ ತಲೆಮಾರಿನ ವಿಮಾನಗಳಿಗಾಗಿ ಭಾರತದ ಅಡ್ವಾನ್ಸ್ಡ್ ಮೀಡಿಯಮ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಯೋಜನೆ ಪ್ರಗತಿಯಲ್ಲಿದೆ ಎಂದ ಅವರು, ಒಂದು ವೇಳೆ ಈ ಕಾರ್ಯಕ್ರಮ ತಡವಾದರೆ ಭಾರತವು ಬೇರೆ ದೇಶಗಳಿಂದಲೂ 5ನೇ ತಲೆಮಾರಿನ ವಿಮಾನಗಳನ್ನು ಖರೀದಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಶುಕ್ರವಾರದಂದು, ಮಚ್ಚಾರ್​ ಅವರು ಆಸ್ಪತ್ರೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದರು. ಈ ಸಂಭಾಷಣೆಯ ವೇಳೆ ದಾಳಿಯ ಇಂಚಿಂಚು ಮಾಹಿತಿಯನ್ನು ನೀಡುತ್ತಾ, ವಿಮಾನವು ಕೆಳಗೆ ಹೋಗುತ್ತಿದೆ ಎಂದು ಅರಿತುಕೊಂಡೆ ಮತ್ತು ಕಾಕ್‌ಪಿಟ್ ಬಾಗಿಲು ತಲುಪಲು ಅಂತಿಮ ಪ್ರಯತ್ನ ಮಾಡಿದೆ ಎಂದು ಹೇಳಿದರು.

ಒಮಾನ್ ಮೂಲದ ದಾಳಿಕೋರನ ಗುರುತು ಪತ್ತೆ

ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ ಶಂಕೆ ವ್ಯಕ್ತವಾಗಿರುವ ಸಹ-ಪೈಲಟ್ ಅನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಮಿ ಎಂದು ಗುರುತಿಸಲಾಗಿದೆ. ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿರುವಂತೆ, ಈ ಸಹ-ಪೈಲಟ್‌ನ ಉಗ್ರವಾದಿ ನಿಲುವುಗಳ ಬಗ್ಗೆ ಕಳಳವಳ ವ್ಯಕ್ತಪಡಿಸಿ ಒಮಾನ್ ದೇಶವು ಈ ಹಿಂದೆ ಆತನಿಗೆ ಹಾರಾಟ ನಡೆಸುವುದನ್ನು ನಿಷೇಧಿಸಿತ್ತು, ಆದರೆ ನಂತರ ಯುಎಇ ಮೂಲದ ವಿಮಾನಯಾನ ಸಂಸ್ಥೆಯು ಆತನನ್ನು ನೇಮಕ ಮಾಡಿಕೊಂಡಿತ್ತು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net