ನಾನು ಕಾರು ಚಲಾಯಿಸುತ್ತಿರಲಿಲ್ಲ: ಅಪಘಾತದ ಬಳಿಕ ರೆಹಮಾನ್ ಪುತ್ರ ಅಮೀನ್ ಸ್ಪಷ್ಟನೆ; ಆದರೆ ಪೊಲೀಸರು ಹೇಳಿದ್ದೇನು? A R Rehman son Ameen
ತಾನು ಕಾರು ಚಲಾಯಿಸುತ್ತಿರಲಿಲ್ಲ: ಅಮೀನ್ ರೆಹಮಾನ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎ.ಆರ್. ರೆಹಮಾನ್ ಪುತ್ರ ಅಮೀನ್ ಕಾರು ಅಪಘಾತ
ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿದ ಅಮೀನ್
ತಾನು ಕಾರು ಚಲಾಯಿಸುತ್ತಿರಲಿಲ್ಲ: ಅಮೀನ್ ರೆಹಮಾನ್
ಪೊಲೀಸರ ಪ್ರಕಾರ ಅಮೀನ್ನೇ ಕಾರನ್ನು ಚಲಾಯಿಸುತ್ತಿದ್ದ
ಚೆನ್ನೈ: ಸೋಮವಾರ (ಆ.10) ಗಿಂಡಿಯಲ್ಲಿರುವ ಕಾಠಿಪರಾ ಫ್ಲೈಓವರ್ನಲ್ಲಿ ಅಪಘಾತ ಸಂಭವಿಸಿದ್ದು, ಈ ಅಫಘಾತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಎ.ಆರ್. ಅಮೀನ್ (A R Rehman son Ameen) ಗಾಯಗೊಂಡಿದ್ದಾರೆಂದು ವರದಿಯಾಗಿತ್ತು.
ಈಗ ಈ ಅಪಘಾತಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೀನ್, ತಾನು ಸುರಕ್ಷಿತವಾಗಿದ್ದಾಗಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಅಮೀನ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ನಾನು ಬೆಳಿಗ್ಗೆ ಏರ್ಪೋರ್ಟ್ಗೆ ಹೊರಟಿದ್ದೆ. ಕಾರನ್ನು ನನ್ನ ಗೆಳೆಯ ಚಲಾಯಿಸುತ್ತಿದ್ದ, ನಾನು ಕಾರಿನ ಹಿಂಬದಿ ಸೀಟ್ನಲ್ಲಿ ಕುಳಿತ್ತಿದೆ ಎಂದು ಹೇಳಿದ್ದಾರೆ.
ಫ್ಲೈಓವರ್ನಲ್ಲಿ ನಮ್ಮ ಕಾರಿಗೆ ಎದುರುಗಡೆಯಿಂದ ಬಂದ ಕ್ಯಾಬ್ವೊಂದು ಡಿಕ್ಕಿ ಹೊಡೆಯಿತು. ನಾವು ಟ್ರಾಫಿಕ್ನಲ್ಲಿದ್ದು, ಕೆಂಪು ದೀಪವಿದ್ದರೂ ಕ್ಯಾಬ್ ಚಾಲಕನ ಆತುರದಿಂದ ಈ ಅವಗಢ ಸಂಭವಿಸಿದೆ ಎಂದು ಅಮೀನ್ ಹೇಳಿದ್ದಾರೆ.
ಆದರೆ, ಈ ಘಟನೆಯಿಂದ ನಮಗಾಗಲೀ, ಕ್ಯಾಬ್ ಚಾಲಕನಿಗಾಗಲೀ ಯಾವುದೇ ಪ್ರಾಣಾಪಾಯವಾಗಿಲ್ಲ, ದೇವರ ಕೃಪೆಯಿಂದ ನಾವು ಸುರಕ್ಷಿತವಾಗಿದ್ದೆವೆಂದು ಅವರು ಬರೆದುಕೊಂಡಿದ್ದಾರೆ. ಅಪಘಾತದ ಬಳಿಕ, ನನ್ನ ಬಗ್ಗೆ ಕಾಳಜಿ ವಹಿಸಿದ ಕುಟುಂಬ ವರ್ಗ ಹಾಗೂ ಸ್ನೇಹಿತರಿಗೆ ನಾನು ಸದಾ ಖುಣಿಯಾಗಿರುತ್ತೆನೆಂದು ಹೇಳಿದ್ದಾರೆ.
ಆದರೆ ಈ ಘಟನೆ ಕುರಿತಂತೆ ಪೊಲೀಸರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಕಾರನ್ನು ಅಮೀನ್ನೇ ಚಲಾಯಿಸುತ್ತಿದ್ದಾಗಿ ಪೊಲೀಸರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಎರಡು ವಾಹನಗಳ ಮಾಲೀಕರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ, (ಏಜನ್ಸೀಸ್).