_1785550424538.webp?w=480&auto=format%2Ccompress&fit=max)
_1785550424538.webp?w=480&auto=format%2Ccompress&fit=max)
ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ತಮ್ಮ ವಿರುದ್ಧ ಬಳಸಲಾದ ನಿಂದನಾತ್ಮಕ ಪದಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ನಿಂದನೆಗಳು ಎಂದಿಗೂ ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ದಾರಿತಪ್ಪಿದವರಿಗೆ ಮಾರ್ಗದರ್ಶನ ನೀಡಿ ದೇಶಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.
ಕೆಲವೊಮ್ಮೆ ನಮ್ಮ ಹಲ್ಲುಗಳ ನಡುವೆ ನಾಲಿಗೆ ಸಿಲುಕಿ ರಕ್ತಸ್ರಾವವಾಗುತ್ತದೆ, ಆದರೂ ನಾವು ನಮ್ಮ ಹಲ್ಲುಗಳನ್ನು ಮುರಿಯುವುದಿಲ್ಲ, ಕೊನೆಯಲ್ಲಿ ಹಲ್ಲುಗಳು ಮತ್ತು ನಾಲಿಗೆ ಎರಡೂ ನಮ್ಮವೇ ಆಗಿರುತ್ತವೆ. ಈ ಮಕ್ಕಳೂ ನಮ್ಮವರೇ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ನಮ್ಮ ಕರ್ತವ್ಯ. ದೇಶಕ್ಕಾಗಿ ಸಮಾಜವು ಒಟ್ಟಾಗಿ ಮುಂದೆ ಬರಬೇಕು ಎಂದಿರುವ ಪ್ರಧಾನ ಮಂತ್ರಿಯವರು, ಹೊಸದನ್ನು ಕಲಿಯಲು ಮತ್ತು ತಪ್ಪುಗಳಿಂದ ಪಾಠ ಕಲಿಯಲು ಇದು ಸಮಯ ಎಂದರು. ಯುವಕರ ಉಜ್ವಲ ಭವಿಷ್ಯಕ್ಕಾಗಿ ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂದರು.
ದೇಶವು ಮುನ್ನಡೆಯುತ್ತಿದೆ ಮತ್ತು ಮತ್ತಷ್ಟು ಪ್ರಗತಿಗೆ ಸಜ್ಜಾಗಿದೆ, ನೀವೂ ಕೂಡ ಮುನ್ನಡೆಯಬೇಕು ಎಂಬುದು ನನ್ನ ಕನಸು. ನಾನು ನಿಮಗಾಗಿ ಬದುಕುತ್ತೇನೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ. ಬನ್ನಿ, ದೇಶವನ್ನು ಒಟ್ಟಾಗಿ ಮುನ್ನಡೆಸೋಣ. ತಪ್ಪುಗಳಿಂದ ಕಲಿಯಿರಿ ಮತ್ತು ಮುಂದೆ ಸಾಗಿರಿ ಎಂದು ಪ್ರಧಾನಿ ಮೋದಿ ತಮ್ಮ ಮೂರು ನಿಮಿಷಗಳ ವಿಡಿಯೋದಲ್ಲಿ ಹೇಳಿದ್ದಾರೆ.
ಏನಿದು ಘಟನೆ..?
ರುಚಿಕಾ ಸಿಂಗ್ ವಿರುದ್ಧ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು ಪ್ರಕರಣ ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 352 (ಶಾಂತಿ ಭಂಗವನ್ನು ಉಂಟುಮಾಡಲು ಉದ್ದೇಶಪೂರ್ವಕ ಅವಮಾನ), 353(1) (ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಹೇಳಿಕೆಗಳು) ಮತ್ತು 356(1) (ಮಾನನಷ್ಟ) ಅಡಿಯಲ್ಲಿ, ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದೆ(ಏಜೆನ್ಸೀಸ್).