'ಭೂಗತ ಜಗತ್ತಿನ ಶೇ.99 ರಷ್ಟು ಬೆಂಬಲ ನನಗಿದೆ'! ನಿತಿನ್ ಗಡ್ಕರಿ ಹೇಳಿಕೆಯ ಹಿಂದಿನ ಅಸಲಿ ಅರ್ಥವೇನು? Nitin Gadkari

ನಿತಿನ್ ಗಡ್ಕರಿ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿರುವ ದೃಶ್ಯ
ನಿತಿನ್ ಗಡ್ಕರಿ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿರುವ ದೃಶ್ಯ
Published on
ನಾಗ್ಪುರ: ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ (Nitin Gadkari) ನಾಗ್ಪುರದ ಶೇ. 99 ರಷ್ಟು ಭೂಗತ ಜಗತ್ತು ಹಾಗೂ ಸಾಮಾಜಿಕ ಜಗತ್ತಿನ ಬೆಂಬಲ ತಮಗಿದೆ ಎಂದು ಹೇಳಿದ್ದಾರೆ. ನಾಗ್ಪುರದ ಐಐಎಂನಲ್ಲಿ ನಡೆದಿದ್ದ ಮೀಡಿಯಾ ಕಾನ್​ಕ್ಲೇವ್​ನಲ್ಲಿ ಮಾತನಾಡಿದ ನಿತಿನ್​ ಗಡ್ಕರಿ, ತಮಗೆ ನಾಗ್ಪುರದ ಪ್ರತಿ ಕ್ಷೇತ್ರದ, ಪ್ರತಿ ಸ್ಥರದ ಜನರೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದ್ದಾರೆ. 

ನನ್ನ ಕೆಲಸವನ್ನು ಅವರು ಮೆಚ್ಚಿದ್ದಾರೆ!

ನನಗೆ ನಾಗ್ಪುರದ ಭೂಗತ ಜಗತ್ತಿನೊಂದಿಗೆ ಉತ್ತಮ ಸಂಬಂಧವಿದೆ ಎನ್ನುವ ಹೇಳಿಕೆಯನ್ನು ತಪ್ಪಾಗಿ ಭಾವಿಸಬೇಡಿ. ಅದರರ್ಥ ನನಗೆ ನಮ್ಮ ಸಮಾಜದಲ್ಲಿರುವ ಪ್ರತಿ ಆಯಾಮದ ಜನರೊಂದಿಗೆ ಸಂಪರ್ಕವಿದೆ ಎಂಬುದಾಗಿದೆ. 
ನಾನು ಸಿದ್ಧಾಂತಕ್ಕೆ ಬದ್ಧನಾದ ಮನುಷ್ಯ, ಆದರೂ ನನಗೆ ಭೂಗತ ಜಗತ್ತು ಹಾಗೂ ಸಾಮಾಜಿಕವಾಗಿ ಗುರುತಿಸಿಕೊಂಡವರು ನನ್ನ ಬೆಂಬಲಿಗರಾಗಿದ್ದಾರೆ. ಆದರೆ ಅವರ್ಯಾರು ಇಲ್ಲಿವರೆಗೆ ನನ್ನ ಕೆಲಸದಲ್ಲಿ ಅಡ್ಡಿಯಾಗಿಲ್ಲ. ನಾನು ಅವರ ಏರಿಯಾಗಳಿಗೆ ರಸ್ತೆ ಮಾಡಿಸಿಕೊಟ್ಟಿದ್ದೆನೆ, ಅವರಿಗೆ ನನ್ನ ಕೆಲಸ ಮೆಚ್ಚುಗೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಕ್ರಿಮಿನಲ್​ಗಳೇ ನನ್ನ ಮತದಾರರು!

ಇನ್ನು ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ವಿದ್ಯಾವಂತರ ಪೈಕಿ ಶೇ.70-75 ರಷ್ಟು ಮತಗಳು ತಮಗೆ ಲಭಿಸಿದರೆ, ಶೇ.92 ರಷ್ಟು ಮತಗಳನ್ನು ಅಪರಾಧಿಗಳು, ಭೂಗತಪಾತಕಿಗಳು ಹಾಗೂ ರೆಡ್​ಲೈಟ್​ ಏರಿಯಾಗಳಲ್ಲಿರುವ ಜನಗಳು ನೀಡುತ್ತಾರೆಂದು ಗಡ್ಕರಿ ಹೇಳಿಕೊಂಡಿದ್ದಾರೆ. 
ನನ್ನ ರಾಜಕೀಯ ಜೀವನದಲ್ಲಿ ನಾನು ಸಮಾಜದ ಎಲ್ಲಾ ರೀತಿಯ ಜನರನ್ನು ನೋಡುವ, ಸಂರ್ಪಕ್ಕೆ ಬರುವ ಹಾಗೂ ಅವರ ಮೆಚ್ಚುಗೆ ಪಡೆಯಲು ಸಾಧ್ಯವಾಯಿತು. ನಾನು ರಾಜಕೀಯದಲ್ಲಿ ಒಳ್ಳೆಯದನ್ನು ಮಾಡಿದ್ದೇನೆ ಹಾಗೂ ಕೆಟ್ಟದನ್ನು ಮಾಡಿದ್ದೇನೆಂದು ಕೇಂದ್ರ ಸಚಿವರು ಹೇಳಿದ್ದಾರೆ.

ವಿದ್ಯಾವಂತರು ಮತ ಚಲಾಯಿಸಲ್ಲ!

ಇನ್ನು ಭಾರತದ ಮತದಾರರ ಮನಸ್ಥಿತಿ ಬಗ್ಗೆ ಮಾತನಾಡಿದ ಗಡ್ಕರಿ, ನಮ್ಮ ದೇಶದ ವಿದ್ಯಾವಂತ ಜನ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಚುನಾವಣೆ ದಿನ ಮತವನ್ನು ಚಲಾಯಿಸುವುದೇ ಇಲ್ಲ. ನೀವು ನಿಮ್ಮ ಮತವನ್ನು ಯೋಗ್ಯರಿಗೆ ನೀಡದಿದ್ದರೆ ದೇಶ ಅಭಿವೃದ್ಧಿ ಹೊಂದುವುದಾದರೂ ಹೇಗೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ. 
ನನ್ನ ಪ್ರಕಾರ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಮಸ್ಯೆ ಯಾರೆಂದರೆ ಅದು ರಾಜಕಾರಣಿಯೂ ಅಲ್ಲ, ರಾಜಕೀಯ ಪಕ್ಷವೂ ಅಲ್ಲ ಬದಲಿಗೆ ಮತದಾನವನ್ನು ಮಾಡ ಪ್ರಜೆ ಆಗಿದ್ದಾನೆಂದು ಗಡ್ಕರಿ ತಿಳಿಸಿದ್ದಾರೆ. ಮತದಾನವನ್ನು ಮಾಡುವಾಗ ಜಾತಿ, ಧರ್ಮ, ಭಾಷೆ, ಬಣ್ಣಗಳನ್ನು ಪರಿಗಣಿಸಿದೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಆತ ಏನನ್ನು ಬದಲಾಯಿಸಬಲ್ಲ ಎನ್ನುವುದನ್ನು ಗಮನದಲ್ಲಿಟ್ಟು ಮತವನ್ನು ಚಲಾಯಿಸಿ ಎಂದಿದ್ದಾರೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net