ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಭಾರೀ ಆತಂಕ! ನಕಲಿ ಗುರುತಿನ ಚೀಟಿ ಹೊಂದಿದ್ದ ಇಬ್ಬರು ಬಂದೂಕುಧಾರಿಗಳು ವಶ! Narendra Modi

ಪ್ರಧಾನಿ ಮೋದಿ ಕಾರ್ಯಕ್ರಮದ ಭದ್ರತೆ ಮತ್ತು ವಶಕ್ಕೆ ಪಡೆದ ಶಂಕಿತರ ಸಾಂಕೇತಿಕ ಚಿತ್ರ.
ಪ್ರಧಾನಿ ಮೋದಿ ಕಾರ್ಯಕ್ರಮದ ಭದ್ರತೆ ಮತ್ತು ವಶಕ್ಕೆ ಪಡೆದ ಶಂಕಿತರ ಸಾಂಕೇತಿಕ ಚಿತ್ರ.
Published on
ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಅನಧಿಕೃತ ಬಂದೂಕುಧಾರಿಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ನಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ವೇದಿಕೆ ಬಳಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರಿಂದ ಪಿಸ್ತೂಲು ಹಾಗೂ ಪ್ರಧಾನ ಮಂತ್ರಿ ಕಚೇರಿಯ ನಕಲಿ ಗುರುತಿನ ಚೀಟಿ ಪತ್ತೆಯಾಗಿದೆ. 

ನಕಲಿ ಐಡಿ ಬಳಸಿ ಎಂಟ್ರಿ!

ಸದ್ಯ ಗುಜರಾತಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರಧಾನಿ, ನಂತರ ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು.
ಇಂದು (ಸೆ.08) ರಂದು ನಡೆಯಲಿದ್ದ ವಾರ್ಷಿಕ ಗ್ಲೋಬಲ್​ ಫಿನ್​ಟೆಕ್​ ಫೆಸ್ಟ್ (GFF) 2026 ಅನ್ನು ಪ್ರಧಾನಿಗಳು  ಉದ್ಘಾಟಿಸಲಿದ್ದಾರೆ. ನಾಲ್ಕು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಕಂಪನಿಗಳು ಭಾಗವಹಿಸಿ, ಕೃತಕ ಬುದ್ಧಿಮತ್ತೆ, ಕ್ವಾಟಂಮ್​ ಹಾಗೂ ಭಾರತದಲ್ಲಿ ಹೂಡಿಕೆ ಬಗ್ಗೆ ಸಮಾವೇಶ ನಡೆಯಲಿದೆ. ಆದರೆ, ವೇದಿಕೆ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆತನನ್ನು ನಿಲ್ಲಿಸಿ ವಿಚಾರಿಸಿದಾಗ ಅವನು ನಕಲಿ ಗುರುತಿನ ಚೀಟಿ ಹೊಂದಿರುವುದು ಪತ್ತೆಯಾಗಿದೆ. 
ಬಂಧಿತ ಆರೋಪಿಯನ್ನು ರೋಹನ್​ ಪಾರೇಖ್​ ಎಂದು ಗುರುತಿಸಲಾಗಿದ್ದು, ಇತನ ಜೊತೆಯಲ್ಲಿ ಬಂದೂಕುಧಾರಿಯಾಗಿ ಬಂದಿದ್ದ ಇನ್ನೊಬ್ಬನನ್ನು ವಶಕ್ಕೆ ಪಡೆದಿದ್ದು, ಇವರಿಂದ ಪ್ರಧಾನಿ ಕಚೇರಿಯ ನಕಲಿ ಗುರುತಿನ ಚೀಟಿ ಹಾಗೂ ಬಂದೂಕನ್ನು ಜಫ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಮುಂಬೈ ಪೊಲೀಸರಿಂದ ತನಿಖೆ ಪ್ರಾರಂಭ!

ಪ್ರಧಾನ ಮಂತ್ರಿ ಆಗಮಿಸಲಿದ್ದ ಕಾರ್ಯಕ್ರಮದಲ್ಲಿ ಈ ರೀತಿಯ ಆಘಾತಕಾರಿ ಬೆಳವಣಿಗೆ ಕಂಡುಬಂದ ಹಿನ್ನಲೆ ಸ್ಥಳದಲ್ಲಿ ಕೆಲಕಾಲ ಗಂಭೀರ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಈ ರೋಹನ್​ ಪಾರೇಖ್​ನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.
ಈ ರೋಹನ್​ ಪಾರೇಖ್​ ಹಿನ್ನಲೆ ಏನು? ಇವರು ಈ ರೀತಿ ಅಕ್ರಮ ಪ್ರವೇಶ ಪಡೆದಿದ್ದೇಕೆ? ನಕಲಿ ಗುರುತಿನ ಚೀಟಿ ಇದ್ದರೂ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದು ಹೇಗೆ? ಇವರ ಉದ್ದೇಶ ಏನಾಗಿತ್ತು? ಈ ಘಟನೆ ಹಿಂದೆ ಯಾರ ಕೈವಾಡವಿದೆ? ಎಂಬೆಲ್ಲಾ ಪ್ರಶ್ನೆಗಳಿಗೆ ತನಿಖೆ ನಂತರ ಹೊರಬೀಳುವ ವರದಿಯಲ್ಲಿ ಉತ್ತರ ದೊರೆಯಲಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net