ನನಗೂ ದಾವೂದ್ ಇಬ್ರಾಹಿಂಗೂ ಲಿಂಕ್ ಇಲ್ಲ! ಭೂಗತ ಜಗತ್ತಿನ ಕನೆಕ್ಷನ್ ಬಗ್ಗೆ ಡ್ರಗ್ ಕಿಂಗ್ ಸಲೀಂ ಡೋಲಾ ಹೇಳಿದ್ದೇನು? Salim Dola about Dawood Ibrahim
ದಾವೂದ್ ಇಬ್ರಾಹಿಂ ಅಥವಾ ಡಿ-ಕಂಪನಿ ಯಾರ ಪರಿಚಯವೂ ನನಗಿಲ್ಲ: ಸಲೀಂ ಡೋಲಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಟರ್ಕಿಯಿಂದ ಭಾರತಕ್ಕೆ ಹಸ್ತಾಂತರಗೊಂಡ 5,000 ಕೋಟಿ ರೂ. ಡ್ರಗ್ ಕಿಂಗ್‌ಪಿನ್ ಸಲೀಂ ಡೋಲಾ
ದಾವೂದ್ ಇಬ್ರಾಹಿಂ ಅಥವಾ ಡಿ-ಕಂಪನಿ ಯಾರ ಪರಿಚಯವೂ ನನಗಿಲ್ಲ!
ಮುಂದುವರಿದ ಮುಂಬೈ ಪೊಲೀಸರ ವಿಚಾರಣೆ
ಮುಂಬೈ: ಅಂತಾರಾಷ್ಟ್ರೀಯ ಮಾದಕ ಲೋಕದ ಅನಭಿಷಕ್ತ ದೊರೆ, ಸುಮಾರು 5,000 ಕೋಟಿ ಡ್ರಗ್ ಮಾಫಿಯಾ ಕಿಂಗ್ ಎಂದೇ ಕುಖ್ಯಾತಿಗಳಿಸಿದ್ದ ಸಲೀಂ ಡೋಲಾನನ್ನು ಮುಂಬೈ ಪೊಲೀಸರು ಇತ್ತಿಚೆಗೆ ಬಂಧಿಸಿದ್ದರು.
ಟರ್ಕಿಯ ಇಸ್ತಾನ್ಬುಲ್ನಲ್ಲಿ ಸಿಕ್ಕಿಬಿದ್ದ ಡೋಲಾನನ್ನು ಅಂತಾರಾಷ್ಟ್ರೀಯ ನಿಯಮಗಳಂತೆ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಈಗ ಮುಂಬೈ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ನನಗೆ ಮತ್ತು ಬಾಂಬೆ ಭೂಗತ ಜಗತ್ತಿನ ಮಾಜಿ ಡಾನ್ ದಾವೂದ್ ಇಬ್ರಾಹಿಂ (Salim Dola about Dawood Ibrahim) ನಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ಟರ್ಕಿಯಿಂದ ಭಾರತಕ್ಕೆ ಬಂದಿರುವ ಡೋಲಾನ ವಿಚಾರಣೆ ಮುಂದುವರಿದಿದ್ದು, 2024 ರಲ್ಲಿ ಸಾಂಗ್ಲಿಯಲ್ಲಿ ಈ ಸಲೀಂ ಡೋಲಾಗಿದೆ ಸಂಬಂಧಿಸಿದ ಸುಮಾರು 253 ಕೋಟಿ ಮೌಲ್ಯದ 112 ಕೆಜಿ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿತ್ತು. ಅಂದರೆ ಮುಂಬೈಗೆ ಹರಿದು ಬರುತ್ತಿದ್ದ ಬಹುಪಾಲು ಮಾದಕ ದ್ರವ್ಯಗಳ ವ್ಯಾಪಾರವನ್ನು ಈ ಸಲೀಂ ಡೋಲಾನೆ ನಡೆಸುತ್ತಾನೆ ಎನ್ನುವುದು ಮುಂಬೈ ಪೊಲೀಸರ ಆರೋಪವಾಗಿತ್ತು.
ಆದರೆ ವಿಚಾರಣೆ ವೇಳೆ ಇವೆಲ್ಲಾ ಆರೋಗಳನ್ನು ತಳ್ಳಿ ಹಾಕಿರುವ ಡೋಲಾ, ನನಗೆ ಮುಂಬೈ ಭೂಗತ ಜಗತ್ತಿಗೆ ಯಾವುದೇ ಸಂಬಂಧವಿಲ್ಲ, ನನಗೆ ದಾವೂದ್, ಚೋಟಾ ಶಕೀಲ್ ಅಥವಾ ಡಿ- ಕಂಪನಿಯ ಯಾರ ಪರಿಚಯವೂ ಇಲ್ಲ ಎಂದು ಹೇಳಿದ್ದಾನೆಂದು ತಿಳಿದು ಬಂದಿದೆ.
2018 ರಲ್ಲಿ ಭಾರತ ಬಿಟ್ಟ ಡೋಲಾ
ಮುಂಬೈನ ಕಾಟನ್ ಗ್ರೀನ್ನ ನಿವಾಸಿಯಾಗಿದ್ದ ಸಲೀಂ ಡೋಲಾ ಪ್ರಾರಂಭದಲ್ಲಿ ಗುಟ್ಕಾವನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ. ನಂತರ ಗಾಂಜಾ, ಚರಸ್, ಆಮೇಲೆ ಭೂಗತ ಜಗತ್ತಿನ ಸಂಪರ್ಕದಿಂದ ಹೆರಾಯಿನ್ ಮಾರುಕಟ್ಟೆಗೆ ಪ್ರವೇಶ ಪಡೆದ. 2018 ರಲ್ಲಿ ಸಲೀಂ ಡೋಲಾ ಮೇಲೆ NDPS ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಿ ದೇಶಕ್ಕೆ ಓಡಿಹೋದ.
ನಂತರ ದುಬೈನಿಂದ ಏಷ್ಯಾದ ಮಾದಕ ದ್ರವ್ಯದ ಮಾರುಕಟ್ಟೆ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದ್ದ ಎಂದು ಮುಂಬೈ ಪೊಲೀಸರು ಹೇಳುತ್ತಾರೆ. ಪೊಲೀಸರ ಪ್ರಕಾರ ಮುಂಬೈನಲ್ಲಿ ಭೂಗತ ಜಗತ್ತು ಸಕ್ರೀಯವಾಗಿದ್ದ ಕಾಲದಿಂದ ಡೋಲಾ ಈ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಇವನ ಮೇಲೆ ದಾವೂದ್ ಹಾಗೂ ಚೋಟಾ ಶಕೀಲ್ರ ಕ್ರಪಾ ಕಟಾಕ್ಷವಿತ್ತು.
ನಂತರ ದಾವೂದ್ ದುಬೈ ಸೇರಿವ ಸಮಯಕ್ಕೆ ಡೋಲಾ ಡ್ರಗ್ಸ್ ಮಾರುಕಟ್ಟೆಯಲ್ಲಿ ಕಿಂಗ್‌ಪಿನ್ ಆಗಿ ಬೆಳೆದು ಬಿಟ್ಟಿದ್ದ. ಕೇವಲ ಭಾರತದಲ್ಲೇ ಇವನು ಸುಮಾರು 5,000 ಕೋಟಿ ಮಾದಕ ವಸ್ತುಗಳ ಮಾರುಕಟ್ಟೆ ಕಟ್ಟಿಕೊಂಡಿದ್ದ ಎಂದು ಹೇಳುತ್ತಾರೆ.
ಈದೀಗ ಸಲೀಂ ಡೋಲಾನ ಮೇಲೆ ಮುಂಬೈ ಪೊಲೀಸ್ರ ಪ್ರಕರಣದ ಜೊತೆಗೆ ಸಿಬಿಐ ಮತ್ತು ಇಡಿ ಸಹ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖಾ ಸಂಸ್ಥೆಗಳ ವಿಚಾರಣೆ ಮುಗಿಯುವ ಹೊತ್ತಿಗೆ ಸಂಪೂರ್ಣ ಸತ್ಯಾಸತ್ಯೆಗಳು ಆಚೆ ಬರುತ್ತವೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).